ಬಿಎಸ್‌ವೈ, ವಿಜಯೇಂದ್ರ ಹೊರತಾಗಿ ಚೆನ್ನಾಗಿದ್ದೇನೆ: ಯತ್ನಾಳ್‌

Pratheek
2 Min Read

ಪಬ್ಲಿಕ್ ಅಲರ್ಟ್


ಮೈಸೂರು: ಬಿ.ಎಸ್.ಯಡಿಯೂರಪ್ಪ, ಬಿ.ವೈ.ವಿಜಯೇಂದ್ರ ಇಬ್ಬರನ್ನು ಬಿಟ್ಟರೆ ಬಿಜೆಪಿಯ ಎಲ್ಲರೊಂದಿಗೂ ನಾನು ಚನ್ನಾಗಿಯೇ ಇದ್ದೇನೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ಅವರು, ಯಡಿಯೂರಪ್ಪ ಮತ್ತು ವಿಜಯೇಂದ್ರ ಒತ್ತಡಕ್ಕಾಗಿ ನನ್ನನ್ನು ಉಚ್ಚಾಟನೆ ಮಾಡಲಾಯಿತು. ಈಗ ಅಮಿತ್ ಶಾ ಅವರಿಗೂ ತಪ್ಪು ಮಾಡಿದೆ ಅಂತ ಅನ್ನಿಸಿದೆ. ಬಿಜೆಪಿ ರಿಪೇರಿಯಾದರೆ ವಾಪಸ್ ಹೋಗುತ್ತೇನೆ. ಇಲ್ಲವಾದರೆ ಬೇರೆ ಪಕ್ಷ ಕಟ್ಟಿ ನಾನು ಮುಖ್ಯಮಂತ್ರಿ ಆಗುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ನಾನು ತಿನ್ನಲ್ಲ, ತಿನ್ನಲೂ ಬಿಡಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳುತ್ತಾರೆ. ಆದರೆ ಯಡಿಯೂರಪ್ಪ ಕುಟುಂಬ ಹಣ ಲೂಟಿ ಮಾಡಿದೆ. ಇದಕ್ಕೆ ಏನು ಹೇಳಬೇಕು. ಬಿಜೆಪಿ ಕುಟುಂಬ ರಾಜಕಾರಣದಿಂದ ಮುಕ್ತವಾಗಬೇಕು. ಒಂದು ವೇಳೆ ಸಾಧ್ಯವಾಗದೆ ಇದ್ದರೆ ನಮ್ಮ ನಿಲುವು ಸ್ಪಷ್ಟವಾಗಿದೆ. ನಮ್ಮದೇ ಸರ್ಕಾರ ಬರಲು ಏನು ಬೇಕು ಅದನ್ನು ಮಾಡುತ್ತೇವೆ ಎಂದರು.
ನೇಪಾಳ ರೀತಿ ದಂಗೆ: ಮದ್ದೂರಿನಲ್ಲಿ ಗಣಪತಿ ವಿಸರ್ಜನೆ ವೇಳೆ ಗಲಾಟೆ ಆಗಿದೆ. ಸರ್ಕಾರ ಹಿಂದೂ ವಿರೋಧಿ ನೀತಿ ಅನುಸರಿಸಿದರೆ 5 ವರ್ಷ ಇರಲ್ಲ. ನೇಪಾಳ ರೀತಿಯಲ್ಲಿ ಆಗುತ್ತೆ. ಮದ್ದೂರಲ್ಲಿ ಅಕ್ರಮ ಮಸೀದಿ ಇದೆ. ಅದಕ್ಕೆ ದಾಖಲೆ ಇಲ್ಲ. ಎಲ್ಲ ಮಸೀದಿ ಸಂಪೂರ್ಣ ತಪಾಸಣೆ ಆಗಬೇಕು. ಕಲ್ಲು, ಸಶಸ್ತçವಿದ್ದರೆ ಅಲ್ಲಿನ ಮೌಲ್ವಿ ಜವಾಬ್ದಾರಿ ಅಂತ ಮಾಡಬೇಕು. ನನ್ನ ಮೇಲೆ ಎಷ್ಟು ಕೇಸು ಬೇಕಾದರೂ ಹಾಕಲಿ. ಈಗಾಗಲೇ 70 ಕೇಸ್ ಹಾಕಿದ್ದಾರೆ. ಇದಕ್ಕೆಲ್ಲ ನಾನು ಹೆದರಲ್ಲ. ಲಿಂಗಾಯತ ಸಮುದಾಯಕ್ಕೆ ಯಡಿಯೂರಪ್ಪ ಕೊಡುಗೆ ಏನು? ಒಕ್ಕಲಿಗರ ಸಮುದಾಯಕ್ಕೆ ಡಿ.ಕೆ.ಶಿವಕುಮಾರ್ ಕೊಡುಗೆ ಏನು? ಕಾಂಗ್ರೆಸ್ ಪಕ್ಷಕ್ಕೆ ಹಿಂದೂಗಳು ಮತ ಹಾಕುವುದಿಲ್ಲ. ಸರ್ಕಾರ ಇನ್ನಾದರೂ ಎಚ್ಚೆತ್ತುಕೊಳ್ಳದೇ ಇದ್ದರೆ ನೇಪಾಳ ಮಾದರಿಯಲ್ಲಿ ರಾಜ್ಯದಲ್ಲಿ ಕ್ರಾಂತಿ ಆಗುತ್ತದೆ. ಮದ್ದೂರಿನಲ್ಲಿ ನನಗೆ ಸಿಕ್ಕ ಪ್ರೀತಿ ನೋಡಿ ಎಲ್ಲರಿಗೂ ಜ್ಞಾನೋದಯವಾಗಿದೆ. ರಾಜ್ಯದಲ್ಲಿ 2028ಕ್ಕೆ ಕ್ರಾಂತಿಯಾಗುತ್ತದೆ. ಎಲ್ಲರೂ ಕೂಡಿ ಬದಲಾವಣೆ ತರುತ್ತೇವೆ” ಎಂದರು.
ರಾಜ್ಯದಲ್ಲಿ ಯಡಿಯೂರಪ್ಪ ಕುಟುಂಬ ಹಣ ಲೂಟಿ ಮಾಡಿದೆ. ಇದಕ್ಕೆ ಏನು ಹೇಳಬೇಕೋ ಗೊತ್ತಿಲ್ಲ. ಬಿಜೆಪಿ ಕುಟುಂಬ ರಾಜಕಾರಣದಿಂದ ಮುಕ್ತವಾಗಬೇಕು. ಇಲ್ಲದಿದ್ದರೆ ನಮ್ಮ ನಿಲುವು ಸ್ಪಷ್ಟ. ನಮ್ಮ ಸರ್ಕಾರದ ಬದಲು ಏನು ಬೇಕೋ ಅದನ್ನು ಮಾಡುತ್ತೇನೆ. ಬಿಜೆಪಿ ರಿಪೇರಿಯಾದರೆ ಬಿಜೆಪಿ ಜೊತೆ ಇರುತ್ತೇನೆ, ಇಲ್ಲದಿದ್ದರೆ ನಾನೇ ಬೇರೆ ಪಕ್ಷ ಕಟ್ಟಿ ನಾನೇ ರಾಜ್ಯದ ಮುಖ್ಯಮಂತ್ರಿಯಾಗಿ ರಾಜ್ಯದಲ್ಲಿ ಪ್ರಾಮಾಣಿಕ ಆಡಳಿತ ಕೊಡುತ್ತೇನೆ. ಮದ್ದೂರಿನ ಕಲ್ಲು ತೂರಾಟ ಪ್ರಕರಣದಲ್ಲಿ ಹಿಂದೂಗಳದ್ದು ತಪ್ಪಿಲ್ಲ ಎಂದು ಸಚಿವ ಚೆಲುವರಾಯ ಸ್ವಾಮಿ ಹೇಳಿಕೆ ನೀಡಿದ್ದಾರೆ. ಇದನ್ನು ಸ್ವಾಗತಿಸುತ್ತೇನೆ. ಆದರೆ, ರಾಜ್ಯದಲ್ಲಿ ಹಿಂದುಳಿದವರಿಗೆ ಅನ್ಯಾಯವಾಗುತ್ತಿದೆ. ಈ ಬಗ್ಗೆ ಸರ್ಕಾರ ಗಮನ ಹರಿಸಬೇಕು, ಇಲ್ಲದಿದ್ದರೆ ರಾಜ್ಯ ಸರ್ಕಾರ ಹೆಚ್ಚಿನ ದಿನ ಉಳಿಯುವುದಿಲ್ಲ” ಎಂದರು.
ಶಾಸಕ ಪ್ರದೀಪ್ ಈಶ್ವರ್ ಕೋತಿ ಹೇಳಿಕೆಗೆ, “ನಾನು ಮನುಷ್ಯರ ಹೇಳಿಕೆಗೆ ಅಷ್ಟೇ ಉತ್ತರ ಕೊಡುತ್ತೇನೆ. ಯಾರು ಕೋತಿ ಎಂದು ಜನರಿಗೆ ಗೊತ್ತಿದೆ. ಸುಧಾಕರ್ ಎಂಪಿಯಾದರೆ ರಾಜೀನಾಮೆ ಕೊಡುತ್ತೇನೆ ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದ್ದರು. ಆದರೆ, ವರ್ಷವಾದರೂ ಕೊಟ್ಟಿಲ್ಲ. ನನ್ನ ಉತ್ತರ ಶ್ರೀ ಸಿದ್ಧರಾಮಯ್ಯ, ಡಿ.ಕೆ.ಶಿವಕುಮಾರ್ ಹಾಗೂ ಯಡಿಯೂರಪ್ಪನವರಿಗೆ ಮಾತ್ರ” ಎಂದರು.
ಚಾಮುಂಡಿಬೆಟ್ಟದಲ್ಲಿ ನಾಡ ಅಧಿದೇವತೆಗೆ ಹೂ ಹಾಕುವವರು ಸನಾತನಿಗಳು ಆಗಿರಬೇಕು. ಮೂರ್ತಿ ಪೂಜೆಯನ್ನು ವಿರೋಧ ಮಾಡುವವರು ದಸರಾ ಉದ್ಘಾಟನೆ ಮಾಡುವುದು ಸರಿಯಲ್ಲ. ಬೇಕಿದ್ದರೆ ದಸರಾದ ಬೇರೆ ಕಾರ್ಯಕ್ರಮಗಳ ಉದ್ಘಾಟನೆ ಮಾಡಿಸಲಿ. ಮುಸ್ಲಿಂ ಧರ್ಮ ಗುರುಗಳು ಮೂರ್ತಿ ಪೂಜೆಯನ್ನು ಒಪ್ಪುತ್ತಾರಾ? ಎಂದು ಪ್ರಶ್ನಿಸಿದ ಯತ್ನಾಳ್, ಸಿದ್ದರಾಮಯ್ಯನವರ ರಾಜಕೀಯ ಅಂತ್ಯ ಚಾಮುಂಡಿಬೆಟ್ಟದಿಂದಲೇ ಆಗುತ್ತದೆ” ಎಂದು ಹೇಳಿದರು.

Share This Article
Leave a Comment