ಪಬ್ಲಿಕ್ ಅಲರ್ಟ್
ಮೈಸೂರು: ಧರ್ಮಸ್ಥಳದ ಉಳಿವಿಗೆ ಹಾಗೂ ಧರ್ಮಾಧಿಕಾರಿ ವೀರೇಂದ್ರ ಹೆಗಡೆ ಅವರಿಗೆ ಬೆಂಬಲ ನೀಡಲು ಕಾವೇರಿ ಕ್ರಿಯಾ ಸಮಿತಿ ವತಿಯಿಂದ ಸೆ.23ರಂದು ಧರ್ಮಸ್ಥಳ ಚಲೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಕಾರ್ಯದರ್ಶಿ ತೇಜಸ್ ಲೋಕೇಶ್‌ಗೌಡ ತಿಳಿಸಿದರು.
ಅಂದು ಬೆಳಗ್ಗೆ 5ಕ್ಕೆ ಅರಮನೆಯ ಕೋಟೆ ಆಂಜನೇಯಸ್ವಾಮಿ ಅಧ್ಯಕ್ಷ ಎಸ್.ಜಯಪ್ರಕಾಶ್ ನೇತೃತ್ವದಲ್ಲಿ ಎರಡ್ಮೂರು ಬಸ್‌ಗಳಲ್ಲಿ ಸಂಘ ಸಂಸ್ಥೆಗಳ ಮುಖ್ಯಸ್ಥರು ತೆರಳಲಾಗುವುದು. ಧರ್ಮಸ್ಥಳದ ಬಗ್ಗೆ ಹಾಗೂ ವೀರೇಂದ್ರ ಹೆಗಡೆ ಅವರ ಮೇಲೆ ಜನರಿಗೆ ವಿಶ್ವಾಸ ಇದೆ. ಈ ನಂಬಿಕೆಯನ್ನು ಹಾಳು ಮಾಡಲು ಚಿನ್ನಯ್ಯ ಹಾಗೂ ಇತರರು ಷಡ್ಯಂತ್ರ ಮಾಡಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು. ತಮ್ಮ ಜೊತೆಯಲ್ಲಿ ಧರ್ಮಸ್ಥಳಕ್ಕೆ ಬರಲು ಆಸಕ್ತಿ ಇರುವವರು ಸೆ.20ರೊಳಗೆ, ಮೊ.ಸಂ.9880853893 ಸಂಪರ್ಕಿಸುಂತೆ ಕೋರಿದರು. ಸುದ್ದಿಗೋಷ್ಠಿಯಲ್ಲಿ ಕೃಷ್ಣಪ್ಪ, ಪುಷ್ಪಾ, ರವೀಶ್,ಶಿವಕುಮಾರ್, ಶ್ರೀನಿವಾಸ್ ಮತ್ತಿತರರು ಇದ್ದರು.
