ದಸರಾ ಕೇಕ್ ಶೋಗೆ ನಟಿ ರಚಿತಾ ರಾಮ್‌ ಚಾಲನೆ 

Pratheek
1 Min Read

ಪಬ್ಲಿಕ್ ಅಲರ್ಟ್


ಮೈಸೂರು: ಚಾಮರಾಜಪುರಂನ ಶ್ರೀ ಜಯಚಾಮರಾಜ ಅರಸು ಎಜುಕೇಶನ್ ಟ್ರಸ್ಟ್ ಆವರಣದಲ್ಲಿ ಅ.೭ರವರೆಗೆ ಇರುವ ದಸರಾ ಕೇಕ್ ಶೋ ಅನ್ನು ನಟಿ ರಚಿತರಾಮ್‌ ಲೋಕಾರ್ಪಣೆಗೊಳಿಸಿದರು.
ಬಳಿಕ ಮಾತನಾಡಿದ ಅವರು, ಎಲ್ಲರಿಗೂ ದಸರಾ ಹಬ್ಬದ ಶುಭಾಶಯಗಳು, ನಾನು ದಸರೆಯ ಎಲ್ಲಾ ಕಾರ್ಯಕ್ರಮದಲ್ಲಿಯೂ ಭಾಗವಹಿಸಿದ್ದೇನೆ. ಆದರೆ, ಇಲ್ಲಿ ಕೇಕ್‌ ನಲ್ಲಿ ಮೂಡಿಬಂದಿರುವ ಕಲಾಕೃತಿಗಳು ನಿಜಕ್ಕೂ ಆಕರ್ಷಣೀಯವಾಗಿವೆ. ಎಲ್ಲರೂ ಇಲ್ಲಿಗೆ ಒಮ್ಮೆ ಭೇಟಿ ನೀಡಿ ಎಂದು ಹೇಳಿದರು. 

ಆಯೋಜಕ ದಿನೇಶ್ ಮಾತನಾಡಿ ಡಿನಿ ಸಿನಿ ಕ್ರಿಯೇಷನ್‌ ನಿಂದ ೧೫ ವರ್ಷದಿಂದ ಸಿನಿಮಾ ಕ್ರಿಯೇಷನ್‌ನಲ್ಲಿ ತಂಡ ತೊಡಗಿಸಿಕೊಂಡಿದೆ. ಬಹಳ ದಿನಗಳ ಹಿಂದೆ ನಾಲ್ವಡಿ ಕೃಷ್ಣರಾಜ ಒಡೆಯರ ಬಗ್ಗೆ ಅಧ್ಯಯನ ನಡೆಸಿ ಅವರ ಕೊಡುಗೆಗಳನ್ನು ಮನಗಂಡು ಆಕರ್ಷಿತರಾದೆವು. ಇದರ ಭಾಗವಾಗಿ ನಾಲ್ಕು ತಿಂಗಳಿಂದ ಬೆಂಗಳೂರಿನಲ್ಲಿ ೬೦ಮಂದಿ ಕಲಾವಿದರು ತಯಾರಿಸಿದ್ದರು. ಮೂರು ದಿನಗಳ ಕಾಲ ಹಗಲು-ಇರುಳು ಇಲ್ಲಿ ಪ್ರದರ್ಶನಕ್ಕೆ ಇರಿಸುವ ಸಾಧನೆ ಮಾಡಿದ್ದಾರೆ. ಶೇ.೨೦ರಷ್ಟು ಅನ್ಯವಸ್ತುಗಳು ಹೊರತು ಪಡಿಸದರೇ ಉಳಿದೆಲ್ಲಾ ಕೇಕ್‌ ಬಳಿಸಿದ್ದೇವೆಂದರು. 
ಆರು ತಿಂಗಳವರೆಗೂ ಇದನ್ನು ಜೀವಂತವಾಗಿ ಇರಿಸಬಹುದು. ಆದರೆ, ಎಸಿ ಇಲ್ಲದಿದ್ದರೆ ಐದೇ ನಿಮಿಷದಲ್ಲಿ ಎಲ್ಲವೂ ಕರಗಿ ಹೋಗಲಿದೆ ಎಂದರು. ಮೈಸೂರು ಅರಮನೆ, ಜಿರಾಫೆ, ನಾಲ್ವಡಿಯವರ ಪ್ರತಿಮೆ, ಹುಲಿ, ಜಂಬೂ ಸವಾರಿ ಆನೆಗಳ ಮಾದರಿ ಸೇರಿ ೨೦ ಬಗೆಯ ಕೇಕ್‌ ನಲ್ಲಿ ರೂಪುಗೊಂಡ ಕಲಾಕೃತಿಗಳನ್ನು ನೋಡಬಹುದಾಗಿದೆ.

Share This Article
Leave a Comment