ಕಾಡಿನಲ್ಲಿರುವ ನೂರಾಳೇಶ್ವರ ದರ್ಶನಕ್ಕೆ ಅವಕಾಶ ಕಲ್ಪಿಸಿ

latha prabhukumar
2 Min Read

ಪಬ್ಲಿಕ್ ಅಲರ್ಟ್ ನ್ಯೂಸ್:-ಕಾಡಿನಲ್ಲಿರುವ ನೂರಾಳೇಶ್ವರ ದರ್ಶನಕ್ಕೆ ಅವಕಾಶ ಕಲ್ಪಿಸಿ

ರೈತ ಕಲ್ಯಾಣ ರಾಜ್ಯಾಧ್ಯಕ್ಷ ಚಂದನ್ ಗೌಡ ಒತ್ತಾಯ

ಸರಗೂರು: ಕಾಡಿನ‌‌ ಮಧ್ಯ ಭಾಗದಲ್ಲಿರುವ ಇತಿಹಾಸವುಳ್ಳ, ಸುತ್ತಮುತ್ತಲಿನ ಗ್ರಾಮಗಳ ಜನರು ನಂಬಿಕೆಯಿಂದ ಪೂಜಿಸುವ ನೂರಾಳೇಶ್ವರ ದೇಗುಲಕ್ಕೆ ತೆರಳಲು ಭಕ್ತರಿಗೆ ಅವಕಾಶ ಮಾಡಿಕೊಡಬೇಕೆಂದು ರೈತ ಕಲ್ಯಾಣ ಸಂಘದ ರಾಜ್ಯಾಧ್ಯಕ್ಷ ಸಿ.ಚಂದನ್ ಗೌಡ ಒತ್ತಾಯಿಸಿದ್ದಾರೆ.
ದೇಗುಲ,ದೇವರ ದರ್ಶನಕ್ಕೆ ಅರಣ್ಯಾಧಿಕಾರಿಗಳು ಅವಕಾಶ ನೀಡುತ್ತಿಲ್ಲ‌ ಎಂಬ ಸ್ಥಳೀಯ ಗ್ರಾಮಸ್ಥರ ಅಳಲಿಗೆ ಸ್ಪಂದಿಸಿದ ಚಂದನ್ ಗೌಡ ಅವರು, ಸಭೆ ನಡೆಸಿ ಈ ಬಗ್ಗೆ ಮಾಹಿತಿ ಪಡೆದುಕೊಂಡರಲ್ಲದೇ ,ಅರಣ್ಯಾಧಿಕಾರಿಗಳೊಂದಿಗೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಚರ್ಚಿಸಿದರು.
ಈ ವೇಳೆ ಮಾತನಾಡಿದ ಅವರು, ನೂರಾಳೇಶ್ವರ ಪುಣ್ಯ ಸನ್ನಿಧಿ ಮೈಸೂರು ಜಿಲ್ಲೆಯ ವನಸಿರಿ ಜಲಸಿರಿ ಸರಗೂರು ತಾಲ್ಲೂಕಿನ ದಟ್ಟ ಅರಣ್ಯ ಬಂಡೀಪುರ ಮತ್ತು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ನಡುವೆ ಇರುವ ಪವಿತ್ರವಾದ ಹಾಗೂ ಪರಂಪರೆಯ ಪ್ರಸಿದ್ಧ ಧಾರ್ಮಿಕ ತಾಣವಾಗಿದೆ. ಪರಂಪರೆಗಳಿಂದ ರಾಜ ಮಹಾರಾಜರ ಕಾಲದಿಂದ ನಾಡಿನ ಜನತೆಗಾಗಿ ಲೋಕಕಲ್ಯಾಣಕ್ಕಾಗಿ , ಉತ್ತಮ‌ ಮಳೆ- ಬೆಳೆ ಗಾಗಿ, ನಾಡಿನ ರೈತರ ಸಮೃದ್ಧಿಯ ಮಳೆಗಾಗಿ ನೂರಾಳೇಶ್ವರ ಸನ್ನಿಧಿಯಲ್ಲಿ ಪ್ರಾರ್ಥನೆ ಮಾಡುವುದು ಸಂಪ್ರದಾಯ ಎಂದರು.
ಹೀಗೆ ನಡೆದು ಬಂದಿರುವ ಈ ಪುರಾತನ ಪದ್ದತಿ ಹಿನ್ನೆಲೆಯಲ್ಲಿ, ಇತ್ತೀಚಿನ ದಿನಗಳಲ್ಲಿ ಸರಗೂರು ತಾಲೂಕಿನ ಪವಿತ್ರ ಕ್ಷೇತ್ರ ಬೆಲ್ಲದಕುಪ್ಪೆ ಮಹಾದೇಶ್ವರನ ದೇವರ ದರ್ಶನಕ್ಕೂ ಅರಣ್ಯ ಇಲಾಖೆಯವರು ತಡೆಯಾಜ್ಞೆ ಹೊರಡಿಸಿ ಭಕ್ತಾದಿಗಳಿಗೆ, ಸ್ಥಳೀಯ ಸಾವಿರಾರು ರೈತರಿಗೆ ತಡೆದಿರುವ ನಿದರ್ಶನಗಳು ಸಾಕಷ್ಟು ಇರುವ ಸಮಯದಲ್ಲಿ ಅದೇ ವ್ಯಾಪ್ತಿಯಲ್ಲಿ ಬರುವ ನೂರಾಳೇಶ್ವರ ಸನ್ನಿಧಿಯಲ್ಲಿ ಇಂದಿನ ಪ್ರಸ್ತುತ ಕಾಲಮಾನದಲ್ಲಿರುವ ಬರಗಾಲವನ್ನು ಪರಿಹರಿಸಿ ನಾಡಿನ ಜನತೆಗೆ ಮಳೆಯ ಮುಖಾಂತರ ಒಳ್ಳೆಯ ಬೆಳೆ ಆರೋಗ್ಯ ಕರುಣಿಸಲು ಹರಕೆಯನ್ನು ಹೊರಲು ಸನ್ನಿಧಿಗೆ ದಾವಿಸಲು ಬಂದ ಭಕ್ತಾದಿ ನೂರಾರು ರೈತರನ್ನ ಅರಣ್ಯ ಇಲಾಖೆಯವರು ತಡೆದಿರುವುದು ಸಮಂಜಸವಲ್ಲ ಎಂದ ಚಂದನ್ ಗೌಡ, ಸ್ಥಳೀಯ ಗ್ರಾಮಗಳಾದ ಸರಗೂರು ಹುಸ್ಕೂರು ರಾಡಿ ದಡದಹಳ್ಳಿ ಹಳೆಯೂರು ಹಂಚಿಪುರ ಬೆಲ್ಲದಪುರ ಬಿರುವಾಳು ಹೊಸ ಬಿರುವಾಳು ಸೇರಿದಂತೆ ಹತ್ತಾರು ಗ್ರಾಮಗಳ ರೈತಬಾಂಧವರಿಗೆ ನೂರಾಳೇಶ್ವರರ ಸನ್ನಿಧಿಯಲ್ಲಿ ಹರಕೆ ಹೊತ್ತು ಪೂಜೆ ಸಲ್ಲಿಸಲು ರಾಜ್ಯದಲ್ಲಿರುವ ಮೀಸಲು ಅರಣ್ಯ ವ್ಯಾಪ್ತಿಗೆ ಬರುವ ದೇವಾಲಯಗಳ ದರ್ಶನಕ್ಕೆ ಭಕ್ತಾದಿಗಳಿಗೆ ಅವಕಾಶ ಮಾಡಿಕೊಟ್ಟಿರುವ ನಿದರ್ಶನಗಳಂತೆ ಐತಿಹಾಸಿಕ ನೂರಾಳೇಶ್ವರ ಸನ್ನಿಧಿಯ ದರ್ಶನಕ್ಕೆ ಅವಕಾಶ ಕಲ್ಪಿಸಿ ಕೊಡಬೇಕೆಂದು ಕರ್ನಾಟಕ ರಾಜ್ಯ ಸರ್ಕಾರ ಹಾಗೂ ಬಂಡಿಪುರ ವಲಯ ಮುಖ್ಯ ಅರಣ್ಯ ಅಧಿಕಾರಿಗಳಿಗೆ ಕರ್ನಾಟಕ ರಾಜ್ಯ ರೈತಕಲ್ಯಾಣ ಸಂಘದಿಂದ ಮನವಿ ಮಾಡುತ್ತೇವೆ ಎಂದು ಹೇಳಿದರು.
ಈ ವೇಳೆ ರೈತ ಕಲ್ಯಾಣ ಒತ್ತಾಯಕ್ಕೆ ಮಣಿದ ವನ್ಯಜೀವಿ ಸಂರಕ್ಷಣೆ ಮುಖ್ಯ ಅರಣ್ಯಾಧಿಕಾರಿಗಳು ಭಕ್ತರನ್ನು ದೇವಾಲಯಕ್ಕೆ ತೆರಳಲು ಅವಕಾಶ ನೀಡುವುದಾಗಿ ತಿಳಿಸಿದರು.

Share This Article
Leave a Comment