ಭಗವದ್ಗೀತೆಯ ಸಾರ, ಶರಣರ ಶಿವ ಯೋಗ ಪ್ರವಚನ ಮಾಲೆಗೆ ಅದ್ದೂರಿ ಚಾಲನೆ

latha prabhukumar
1 Min Read

ಪಬ್ಲಿಕ್ ಅಲರ್ಟ್ ನ್ಯೂಸ್:-ಭಗವದ್ಗೀತೆಯ ಸಾರ, ಶರಣರ ಶಿವ ಯೋಗ ಪ್ರವಚನ ಮಾಲೆಗೆ ಅದ್ದೂರಿ ಚಾಲನೆ
ಗುಂಡ್ಲುಪೇಟೆ – ಅಂತರಾಷ್ಟ್ರೀಯ ಆಧ್ಯಾತ್ಮಿಕ ಸಂಸ್ಥೆ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ಪಟ್ಟಣದ ಬಯಲು ರಂಗ ಮಂದಿರದಲ್ಲಿ ಇಂದಿನಿಂದ ಒಂದು ವಾರಗಳ ಕಾಲ ನಡೆಯುವ ಭಗವದ್ಗೀತೆಯ ಸಾರ, ಚಿಂತಾಮಕ್ತ ಮತ್ತು ಬಂಧನ ಮುಕ್ತ ಜೀವನಕ್ಕೆ ಆಧಾರ ಹಾಗೂ ಶರಣರ ಶಿವಯೋಗ ಪ್ರವಚನ ಮಾಲೆಗೆ ಕಬ್ಬಿಣ ಕೋಲೇಶ್ವರ ಗೋಪಾಲಪುರ ಮಠಾಧ್ಯಕ್ಷರಾದ ಗಂಗಾಧರ ಮಹಾಸ್ವಾಮಿಗಳು ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ಗೀತೆಯ ಸಾರ ಹಾಗೂ ಶಿವಶರಣರ ವಚನಗಳು ಒಂದೇ ಸಾಮ್ಯತೆಯನ್ನು ಹೊಂದಿದ್ದು ಅದನ್ನು ಸರಳೀಕರಿಸಿ ಜನತೆಗೆ ಮುಟ್ಟಿಸುತ್ತಿರುವ ಶಿವಮಣೀಜೀಯವರ ಕಾರ್ಯ ಮೆಚ್ಚುವಂಥದ್ದು ಎಂದು ಪ್ರಶಂಸಿದರು. ಚಿಂತೆ ಯಾರಿಗೆ ತಾನೇ ಇಲ್ಲ.ಶಿವನ ಚಿಂತನದಲ್ಲಿ ಪರಿವರ್ತನೆ ಮಾಡಿಕೊಳ್ಳುವುದೇ ರಾಜಯೋಗ ಶಿಕ್ಷಣದ ಉದ್ದೇಶ ಬ್ರಹ್ಮಾಕುಮಾರಿಯರ ಉದ್ದೇಶವಾಗಿದೆ ಎಂದರು.
ಪ್ರೇರಣಾತ್ಮಕ ಭಾಷಣಕಾರರು ಪ್ರವಚನಕಾರರು ಆದ ರಾಜಯೋಗಿನಿ ಬ್ರಹ್ಮಾಕುಮಾರಿ ಶಿವಮಣೀಜೀ ಮಾತನಾಡಿ ಭಗವದ್ಗೀತೆಯ ಸಾರ ಸುಖ ಮತ್ತು ನೆಮ್ಮದಿಯ ಜೀವನಕ್ಕೆ ಆಧಾರವಾಗಿದೆ. ಭಗವದ್ಗೀತೆಯಿಂದ ಮನಸ್ಸಿಗೆ ಶಾಂತಿ ಪ್ರಾಪ್ತಿಯಾಗುತ್ತದೆ. ಗೀತಾ ಜ್ಞಾನದಿಂದ ಸ್ವಾನುಭೂತಿ, ಪರಮಾತ್ಮನ ಅನುಭೂತಿ, ಸಾರ್ಥಕ ಬದುಕುವ ಕಲೆ ಕರ್ಮಯೋಗ ರಾಜಯೋಗ ಕಾಲಚಕ್ರ ರಹಸ್ಯ ಶಿವಯೋಗ ಶಿವಾನುಭೂತಿ ಇನ್ನು ಅನೇಕ ವಿಚಾರಗಳನ್ನು ಪ್ರಾಪ್ತಿ ಮಾಡಿಸುವಂತಹದ್ದಾಗಿದೆ. ಇಂದಿನಿಂದ ಪ್ರತಿನಿತ್ಯ ಸಂಜೆ 6 ರಿಂದ 7:30ರ ವರೆಗೆ ಜುಲೈ ಒಂದನೇ ತಾರೀಖಿನವರೆಗೆ ನಡೆಸಿಕೊಡಲಿದ್ದೇವೆ ಇದರ ಪೂರ್ಣ ಲಾಭವನ್ನು ಪಡೆದುಕೊಳ್ಳಬೇಕೆಂದು ಪಟ್ಟಣದ ಜನತೆಗೆ ಕರೆ ನೀಡಿದರು.
ಜಿಲ್ಲಾ ಸಂಚಾಲಕಿ ರಾಜಯೋಗಿನಿ ಪ್ರಭಾಮಣೀಜೀ ವೀಣಾಜೀ, ಸರ್ಕಲ್ ಇನ್ ಸ್ಪೆಕ್ಟರ್ ಜಯ ಕುಮಾರ್, ವೀರಶೈವ ಮಹಾಸಭಾ ಅಧ್ಯಕ್ಷರಾದ ರಾಜಶೇಖರ್ ಮಾತನಾಡಿದರು. ಬಸವೇಶ್ವರ ಭಜನಾ ಸಂಘ ಬೆಟ್ಟದ ಮಾದ ಹಳ್ಳಿಯವರಿಂದ ಭಜನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಕಾರ್ಯಕ್ರಮದಲ್ಲಿ ಓಂ ಶಾಂತಿ ನ್ಯೂಸ್ ಸರ್ವಿಸ್ ನ ಬಿಕೆ ಆರಾಧ್ಯ,ನಾಗಣ್ಣ, ರಾಜು,ಗುರುಸ್ವಾಮಿ, ಸರೋಜಕ್ಕ, ಮಹಾಲಕ್ಷ್ಮಿ, ಸಂತೋಷ್, ಶ್ರೀನಿವಾಸ್, ಮಹೇಶ್, ಸಿದ್ದೇಶ್ವರ ಸ್ವಾಮೀಜಿ, ವರನಾಗಭೂಷಣ ಮುಂತಾದವರು ಹಾಜರಿದ್ದರು.

Share This Article
Leave a Comment