ಅಭಿಮಾನಿಗಳಿಂದ ಡಾ. ಎಂ. ಲಿಂಗರಾಜು ಅವರ ಜನ್ಮದಿನ ಆಚರಣೆ

latha prabhukumar
1 Min Read

ಪಬ್ಲಿಕ್ ಅಲರ್ಟ್ ನ್ಯೂಸ್:-ಅಭಿಮಾನಿಗಳಿಂದ ಡಾ. ಎಂ. ಲಿಂಗರಾಜು ಅವರ ಜನ್ಮದಿನ ಆಚರಣೆ

ಮೈಸೂರು, ಏ.24: ಕರವೇ ಸ್ವಾಭಿಮಾನಿ ಬಳಗ ವತಿಯಿಂದ ಕನ್ನಡಪರ ಹೋರಾಟಗಾರ ಡಾ. ಎಂ. ಲಿಂಗರಾಜು ಅವರ ಜನ್ಮದಿನವನ್ನು ಅಭಿಮಾನಿಗಳು ಹಾಗೂ ಕಾರ್ಯಕರ್ತರು ಸಂಭ್ರಮದಿಂದ ಆಚರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕನ್ನಡದ ಪರವಾಗಿ ಮೈಸೂರು ಭಾಗದಲ್ಲಿ ನಿರಂತರ ಹೋರಾಟ ನಡೆಸುತ್ತಿರುವುದಾಗಿ ಹೇಳಿದರು. ಕಳೆದ 24 ವರ್ಷಗಳಿಂದ ನಾಡು, ನುಡಿ ಹಾಗೂ ಜನಸಾಮಾನ್ಯರ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಿದ್ದೇವೆ. ಆದರೆ ಹೋರಾಟಗಾರರನ್ನು ಕುಗ್ಗಿಸುವ ಕೆಲಸಗಳು ನಡೆಯುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಕರವೇ ಸ್ವಾಭಿಮಾನಿ ಬಳಗ ಯಾವುದೇ ಪಕ್ಷದ ಪರವಾಗಿ ಕೆಲಸ ಮಾಡುವುದಿಲ್ಲ. ಬಡವರು, ದಲಿತರ ಪರವಾಗಿ ಸದಾ ನಿಂತು ಸಾಮಾಜಿಕ ನ್ಯಾಯಕ್ಕಾಗಿ ಕೆಲಸ ಮಾಡುತ್ತಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

ಡಾ. ರಾಜ್ ಕುಮಾರ್ ಹಾಗೂ ಸಚಿನ್ ತೆಂಡೂಲ್ಕರ್ ಅವರು ಹುಟ್ಟಿದ ದಿನವೇ ನಾನು ಹುಟ್ಟಿರುವುದು ನನ್ನ ಪುಣ್ಯ. ಮುಂದೆಯೂ ನಾಡು-ನುಡಿಗೆ ಸೇವೆ ಸಲ್ಲಿಸುತ್ತೇನೆ ಎಂದು ಕಾರ್ಯಕ್ರಮದಲ್ಲಿ ನೆರೆದಿದ್ದ ಕಾರ್ಯಕರ್ತರಿಗೆ ಲಿಂಗರಾಜು ಅವರು ಹೇಳಿದರು.

ಚರಣ್, ಆನಂದ್, ಸೌಮ್ಯ, ಮಾದೇಶ್, ಮಧುಕುಮಾರ್ ಸೇರಿದಂತೆ ಹಲವು ಕಾರ್ಯಕರ್ತರು ಉಪಸ್ಥಿತರಿದ್ದರು.

Share This Article
Leave a Comment