ಪಬ್ಲಿಕ್ ಅಲರ್ಟ್ ನ್ಯೂಸ್:-ಡಾ.ದಿನೇಶ್ , ನಿರ್ದೇಶಕರು ಜಯದೇವ ಹೃದ್ರೋಗ ಆಸ್ಪತ್ರೆ ರವರು, ಜಯದೇವ ಹೃದ್ರೋಗ ಆಸ್ಪತ್ರೆ ಬೋರ್ಡ್ ರೂಮ್ ನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯ ವಿವರ
ಜಯದೇವ ಆಸ್ಪತ್ರೆಗೆ ಪ್ರತಿದಿನ 600 ರಿಂದ 800 ಜನ ರೋಗಿಗಳು ಬರುತ್ತಾರೆ , 20 % ಜನ ರೋಗಿಗಳು ತೀವ್ರ ಅನಾರೋಗ್ಯದಿಂದ ಬರುತ್ತಾರೆ. ರೋಗಿಗಳಿಗೆ ಚಿಕಿತ್ಸೆ ಕೊಡುವುದು ಹಾಗೂ ಬದುಕುಳಿಯಬೇಕು ಎನ್ನುವ ಉದ್ದೇಶದಿಂದ ಅಡ್ಮಿಟ್ ಮಾಡಿಕೊಳ್ಳಲಾಗುತ್ತದೆ. ಸಂಸ್ಥೆ ಹಣವನ್ನು ನೋಡಲ್ಲ , ಮೊದಲು ಚಿಕಿತ್ಸೆ ಕೊಡುತ್ತೇವೆ. ಇಲ್ಲಿರುವ ಡಾಕ್ಟರ್ ಡೆಡಿಕೇಷನ್ ಪದಕ್ಕೆ ಅನುಗುಣವಾಗಿ ಕೆಲಸವನ್ನು ಮಾಡುತ್ತಾರೆ.
ಈ 11 ಜನ ಗೋಲ್ಡನ್ ಹವರ್ ಮೀರಿ ಬಂದವರು , ತೀವ್ರ ನಿಗಾ ಘಟಕದಲ್ಲಿ ಇಟ್ಟು ಔಷಧೋಪಚಾರ ಮಾಡಲಾಗುತ್ತಿತ್ತು. ಎಲ್ಲರೂ ಒಂದೇ ದಿನ ಅಡ್ಮಿಟ್ ಆಗಿಲ್ಲ
. ಡಾ.ಸದಾನಂದ ಇಲ್ಲಿ ಚೆನ್ನಾಗಿ ಆಡಳಿತ ನಿರ್ವಹಣೆ ಮಡುತ್ತಿದ್ದಾರೆ. 11 ಜನರು ಇವರೆಲ್ಲರೂ ಹಾರ್ಟ್ ಅಟ್ಯಾಕ್ ಆಗಿ ಬಂದವರು. 11 ಜನರು ತುಂಬಾ ವಯಸ್ಸಾದವರು ಹಾಗೂ ತುಂಬಾ ಸಿಕ್ ಆಗಿ ಬಂದಿದ್ದರು. ಅವರು ಇಲ್ಲಿಗೆ ಬರುವವರಗೆ ಜೀವನ್ಮರಣದಿಂದ ಹೋರಾಟ ನಡೆಸಿದ್ದಾರೆ. ಜೊತೆಗೆ ಡಯಾಬಿಟಿಸ್ ರೋಗಿಗಳು ಆಗಿರುತ್ತಾರೆ, ಈತರದ ಸನ್ನಿವೇಶದಲ್ಲಿ 09% ನಷ್ಠೇ ರೋಗಿಗಳು ಬದುಕುವ ಸಾಧ್ಯತೆ ಇದೆ.
ಆಸ್ಪತ್ರೆ ಯಲ್ಲಿ ವೈದ್ಯರ ಕೊರತೆ ಇರುವುದಿಲ್ಲ , ವೈದ್ಯರ ಕೊರತೆ ಸುಳ್ಳು ಆರೋಪ, ನಮ್ಮ ಆಸ್ಪತ್ರೆ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದೆ. ಕೆಲವು ಕಡೆ ತಪ್ಪು ಸುದ್ದಿ ಹರಡಲಾಗಿದೆ.
ಆಸ್ಪತ್ರೆಯಲ್ಲಿ 40 ಜನ ವೈದ್ಯರು ಇದ್ದಾರೆ, 24 ಜನ ಕಾರ್ಡೀಯೋಲಾಜಿಸ್ಟ್ ಇದ್ದಾರೆ , 10 ಅನಸ್ಥಾಸಿಯೇಸ್ಟ್ , 01 ಸರ್ಜನ್ ಇದ್ದಾರೆ , ಪೋಸ್ಟ್ ಗ್ರ್ಯಾಜುಯೇಟ್ಸ್ 10 ಜನ ವೈದ್ಯರು ಇದ್ದಾರೆ,
ಕಳೆದ ಬೇಸಿಗೆ ಯಿಂದ ರೋಗಿಗಳ ಸಂಖ್ಯೆ ಹೆಚ್ಚಳ ಕಂಡಿದೆ, 5 ರಿಂದ 8 % ನಷ್ಟು ವೈದ್ಯರ ಅವಶ್ಯಕತೆ ಇದೆ. ರಾಜ್ಯಾದ್ಯಂತ 24 ವೈದ್ಯರ ಹುದ್ದೆ ಭರ್ತಿ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಸರ್ಕಾರ ಮುಂದಿನ ಒಂದು ತಿಂಗಳಲ್ಲಿ 200 ಬೆಡ್ ಗೆ ಕೊಟ್ಟಿದೆ ,ಇದರಲ್ಲಿ 60 ಬೆಡ್ ಐಸಿಯು ಬರಲಿದೆ.
ಚಾಮರಾಜನಗರ ಜಿಲ್ಲೆಯಲ್ಲಿ ಮುಂದಿನ ಎರಡು ತಿಂಗಳಲ್ಲಿ ಜಯದೇವ ಸಬ್ ಸೆಂಟರ್ ಮಾಡಲಿದ್ದೇವೆ, ಮುಂದಿನ ದಿನಗಳಲ್ಲಿ ಸುತ್ತಲೂ ಇರುವ ಜಿಲ್ಲೆಯಲ್ಲಿ ಸಬ್ ಸೆಂಟರ್ ಗಳನ್ನು ನಿರ್ಮಾಣ ಮಾಡಲಿದ್ದೇವೆ.
ಹಣ ಇರಲಿ, ಇಲ್ಲದಿರಲಿ , ಮೊದಲು ಚಿಕಿತ್ಸೆ ನೀಡುವ ಉದ್ದೇಶವನ್ನು ಜಯದೇವ ಹೃದ್ರೋಗ ಆಸ್ಪತ್ರೆ ಹೊಂದಿದೆ ಎಂದು ಮಾತನಾಡಿದರು
