ಪಬ್ಲಿಕ್ ಅಲರ್ಟ್ ನ್ಯೂಸ್:-ಬಿಎಸ್‌ಎನ್‌ಎಲ್ ಮೈಸೂರಿನಿಂದ ಉಚಿತ ಹೈ-ಸ್ಪೀಡ್ ಇಂಟರ್ನೆಟ್ ಸಂಪರ್ಕ ಹಾಗೂ ಉದ್ಯೋಗಾವಕಾಶ
ಮೈಸೂರು:
ಗ್ರಾಮೀಣ ಭಾಗದ ಸಬಲೀಕರಣಕ್ಕಾಗಿ ಭಾರತ ಸರ್ಕಾರದ ದೂರಸಂಪರ್ಕ ಇಲಾಖೆಯ ‘ಡಿಜಿಟಲ್ ಭಾರತ್ ನಿಧಿ’ (DBN) ಯೋಜನೆಯಡಿ, ಬಿಎಸ್‌ಎನ್‌ಎಲ್ ಮೈಸೂರು ವಲಯವು ಹಳ್ಳಿಗಳಲ್ಲಿ ಉಚಿತ ಎಫ್‌ಟಿಟಿಎಚ್ (Free FTTH/Fiber) ಇಂಟರ್ನೆಟ್ ಅಳವಡಿಕೆ ಹಾಗೂ ಗ್ರಾಮೀಣ ಸ್ವಯಂ ಉದ್ಯೋಗ ಅಭಿಯಾನವನ್ನು ಹಮ್ಮಿಕೊಂಡಿದೆ.
ಈ ಯೋಜನೆಯ ಪ್ರಮುಖಾಂಶಗಳು ಈ ಕೆಳಗಿನಂತಿವೆ:
ಉಚಿತ ಅಳವಡಿಕೆ: ಭಾರತನೆಟ್ ಯೋಜನೆಯಡಿ ವೈಫೈ ರೌಟರ್ (CPE/ONT) ಮತ್ತು ಆಪ್ಟಿಕಲ್ ಫೈಬರ್ ಕೇಬಲ್ ಅನ್ನು ಸಂಪೂರ್ಣ ಉಚಿತವಾಗಿ ನೀಡಲಾಗುವುದು. ಯಾವುದೇ ಇನ್‌ಸ್ಟಾಲೇಷನ್ ಶುಲ್ಕ ಇರುವುದಿಲ್ಲ. ಗ್ರಾಹಕರು ಕೇವಲ ಮಾಸಿಕ ಚಂದಾದಾರಿಕೆ ಪಾವತಿಸಬೇಕಿರುತ್ತದೆ.
ವಿಶೇಷ ಆಕರ್ಷಕ ಪ್ಲಾನ್: ಗ್ರಾಮೀಣ ಗ್ರಾಹಕರಿಗಾಗಿ ಕೇವಲ ರೂ. 259/- ರ ಮಾಸಿಕ ಪ್ಲಾನ್ ಪರಿಚಯಿಸಲಾಗಿದ್ದು, ಇದರಲ್ಲಿ 25 Mbps ವೇಗದ 700 GB ಡೇಟಾ, ಅನಿಯಮಿತ ಕರೆಗಳು ಹಾಗೂ ಪ್ರಸಾರ ಭಾರತಿ ಟಿವಿ/Waves App/BSNL-Skypro IFTV ಉಚಿತ ಚಾನೆಲ್‌ಗಳ ಸೌಲಭ್ಯವಿದೆ.
ಸ್ವಯಂ ಉದ್ಯೋಗಾವಕಾಶ: ಗ್ರಾಮೀಣ ಯುವಕರು ಬಿಎಸ್‌ಎನ್‌ಎಲ್ ನೊಂದಿಗೆ ಕೈಜೋಡಿಸಿ ‘ಭಾರತ್‌ನೆಟ್ ಉದ್ಯಮಿ’ (BNU) ಆಗಿ ನೋಂದಾಯಿಸಿಕೊಳ್ಳಬಹುದು ಮತ್ತು ಹಳ್ಳಿಗಳಿಗೆ ಇಂಟರ್ನೆಟ್ ಸೇವೆ ಒದಗಿಸುವ ಮೂಲಕ ಆದಾಯ ಗಳಿಸಬಹುದಾಗಿದೆ.
ಈ ಉಚಿತ ಇಂಟರ್ನೆಟ್ ಸಂಪರ್ಕ ಪಡೆಯಲು ಅಥವಾ ಉದ್ಯಮಿಯಾಗಿ ನೋಂದಾಯಿಸಿಕೊಳ್ಳಲು ಸಾರ್ವಜನಿಕರು ಹತ್ತಿರದ ಬಿಎಸ್‌ಎನ್‌ಎಲ್ ಗ್ರಾಹಕ ಸೇವಾ ಕೇಂದ್ರವನ್ನು ಸಂಪರ್ಕಿಸಬಹುದು ಎಂದು ಬಿಎಸ್‌ಎನ್‌ಎಲ್ ಮೈಸೂರು ವ್ಯವಹಾರ ವಲಯದ ಮಹಾ ಪ್ರಬಂಧಕರಾದ ಶ್ರೀ ರಾಜೇಂದ್ರ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಸಹಾಯಕ ಮಹಾ ಪ್ರಬಂಧಕರು (ಮಾರ್ಕೆಟಿಂಗ್), ಬಿಎಸ್‌ಎನ್‌ಎಲ್, ಮೈಸೂರು.
ದೂರವಾಣಿ: 0821-2364545
ಮೊಬೈಲ್: 9449031004
ಇಮೇಲ್: agmcfamys@gmail.com
ಬಿಎಸ್‌ಎನ್‌ಎಲ್ ಮೈಸೂರಿನಿಂದ ಉಚಿತ ಹೈ-ಸ್ಪೀಡ್ ಇಂಟರ್ನೆಟ್ ಸಂಪರ್ಕ ಹಾಗೂ ಉದ್ಯೋಗಾವಕಾ
Leave a Comment
Leave a Comment
