ಬದಲಿ ಕಾರ್ಮಿಕರಿಗೆ ಅನ್ಯಾಯ: ಖಂಡಿಸಿ ಪ್ರತಿಭಟನೆ

latha prabhukumar
1 Min Read

ಪಬ್ಲಿಕ್ ಅಲರ್ಟ್ ನ್ಯೂಸ್:-ಬದಲಿ ಕಾರ್ಮಿಕರಿಗೆ ಅನ್ಯಾಯ: ಖಂಡಿಸಿ ಪ್ರತಿಭಟನೆ
ಮೈಸೂರು: ೨ನೇ ಪಾಳಿಯಲ್ಲಿ ಬದಲಿ ಕಾರ್ಮಿಕರಿಗೆ ಕೆಲಸ ನಿರಾಕರಣ ಮಾಡಿರುವುದು ಸೇರಿದಂತೆ ತಮ್ಮ ಹಲವು ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಜೆ.ಕೆ.ಟೈರ್ಸ್‌ ಲಿಮಿಟೆಡ್‌(ವಿಕ್ರಾಂತ್‌)ನ ಬದಲಿ ಮತ್ತು ದಿನಗೂಲಿ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ನೌಕರರು ಕಾರ್ಖಾನೆ ಎದುರು ಪ್ರತಿಭಟಿಸಿದರು.
ನಗರದ ಕೆ.ಆರ್‌.ಎಸ್‌ ಮುಖ್ಯರಸ್ತೆಯಲ್ಲಿ ಪ್ರತಿಭಟಿಸಿದರು. ಈ ವೇಳೆ ಮಾತನಾಡಿದ ಕಾರ್ಮಿಕ ಹೋರಾಟಗಾರರಾದ ಪ್ರಮೋದ್‌ ಚಿಕ್ಕಮಣ್ಣೂರ್‌ ಮಾತನಾಡಿ, ಕಾರ್ಮಿಕರು ಕಾರ್ಖಾನೆಯೂ ಸ್ಥಾಯಿ ಆದೇಶ ೩ಎ ಪ್ರಕಾರ ಬದಲಿ ಕಾರ್ಮಿಕರನ್ನು ಕಖಾಯಂ ನೌಕರರು ಮತ್ತು ಪರೀಕ್ಷಾರ್ತಿ ಕಾರ್ಮಿಕರು ರಜಹಾಕಿದ ಸ್ಥಾನಗಳಿಗೆ ಬದಲಿ ಕಾರ್ಮಿಕರನ್ನು ನೇಮ ಮಾಡಿಕೊಳ್ಳಲಾಗಿದೆ. ಆದರೆ, ಬದಲಿ ಕಾರ್ಮಿಕರು ೨೦ ವರ್ಷಗಳಿಂದಲೂ ಖಾಲಿ ಇರುವ ಜಾಗದಲ್ಲೇ ಕಾರ್ಯನಿರ್ವಹಿಸುತ್ತಿದ್ದಾರೆ. ಸೆ.7ರಂದು 2ನೇ ಪಾಳಿಯಲ್ಲಿ ಬದಲಿ ಕಾರ್ಮಿಕರ ಕಾರ್ಯದ ಜಾಗಕ್ಕೆ ಮಹಿಳೆಯರು ಹಾಗೂ ಹೊರರಾಜ್ಯದ ಕಾರ್ಮಿಕರಿಗೆ ಅವಕಾಶ ನೀಡಿ ಬದಲಿಕಾರ್ಮಿಕರನ್ನು ಹೊರಕ್ಕೆ ಕಳುಹಿಸಿರುವುದು ಸ್ಪಷ್ಟ ಕಾನೂನು ಉಲ್ಲಂಘನೆ ಆಗಿದೆ ಎಂದರು.
ಮಹಿಳಾ ಹಾಗೂ ಹೊರಗುತ್ತಿಗೆ ನೌಕರರನ್ನು ಮಿಷನ್‌ ಯಂತ್ರಗಳ ಮೇಲೆ ಕೆಲಸ ನಿರ್ವಹಿಸಲು ಅವಕಾಶ ಕಲ್ಪಿಸಿರುವುದು. ಬದಲಿ ಕಾರ್ಮಿಕರಿಗೆ ಮಾಡಿರುವ ಅನ್ಯಾಯವಾಗಿದೆ. ಈ ಹಿನ್ನೆಲೆಯಲ್ಲಿ ಬುಧವಾರ ಕಾರ್ಮಿಕ ಆಯುಕ್ತರು, ಗುರುವಾರ ಕಾರ್ಮಿಕ ಇಲಾಖೆ ಪ್ರಾದೇಶಿಕ ಆಯುಕ್ತರ ಸಮ್ಮುಖದ ಸಭೆಯಲ್ಲೂ ತಮಗೆ ನ್ಯಾಯ ಸಿಗದಿದ್ದರೆ ಕುಟುಂಬದವರ ಸಮೇತ ಕಾರ್ಮಿಕರು ಉಗ್ರ ಹೋರಾಟ ರೂಪಿಸಲಾಗುವುದು ಎಂದು ಹೇಳಿದರು. ಪ್ರತಿಭಟನೆಯಲ್ಲಿ ಕಾರ್ಮಿಕ ಸಂಘದ ಅಧ್ಯಕ್ಷ ಎನ್‌.ಚಂದ್ರ, ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್‌, ಖಜಾಂಚಿ ಗಿರೀಶ್‌ ಇನ್ನಿತರರು ಉಪಸ್ಥಿತರಿದ್ದರು.

Share This Article
Leave a Comment