ಪಬ್ಲಿಕ್ ಅಲರ್ಟ್ ನ್ಯೂಸ್:-ಮೈಸೂರಿನಲ್ಲಿ ಮುದ್ರಾ ಡಾನ್ಸ್ ಅಂಡ್ ಯೋಗ ಶಾಲೆಯ ದಶಮಾನೋತ್ಸವ ಸಂಭ್ರಮ
ಮೈಸೂರು
ಸಂಸ್ಥೆಯ ಸಂಸ್ಥಾಪಕರು ಹಾಗೂ ಗುರುಗಳಾದ ವಿದುಷಿ ಸ್ವರ್ಣಲತಾ ಶಾಸ್ತ್ರಿ ಅವರ ಮಾರ್ಗದರ್ಶನದಲ್ಲಿ ‘ಮುದ್ರಾ ಡಾನ್ಸ್ ಅಂಡ್ ಯೋಗ ಶಾಲಾ’ ತನ್ನ 10ನೇ ವರ್ಷದ ದಶಮಾನೋತ್ಸವ ಮುದ್ರಾ ಸಂಭ್ರಮವನ್ನು ವೈಭವದ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಆಚರಿಸಲಿದೆ.
ಮುಖ್ಯ ಅತಿಥಿಗಳು ಮತ್ತು ಗಣ್ಯರು
ಈ ಐತಿಹಾಸಿಕ ಸಮಾರಂಭದಲ್ಲಿ ಸಾಂಸ್ಕೃತಿಕ ಹಾಗೂ ರಾಜಕೀಯ ಕ್ಷೇತ್ರದ ಹಲವು ಪ್ರಮುಖ ಗಣ್ಯರು ಭಾಗವಹಿಸಲಿದ್ದಾರೆ:
ಶ್ರೀ ಕೆ. ಹರೀಶ್ ಗೌಡ, ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕರು
ಶ್ರೀ ನಾಟ್ಯಾಚಾರ್ಯ ಪ್ರೊ. ಕೆ. ರಾಮಮೂರ್ತಿ ರಾವ್, ಖ್ಯಾತ ನೃತ್ಯ ಗುರುಗಳು
ಶ್ರೀಮತಿ ಡಾ. ಕೃಪಾ ಫಡ್ಕೆ, ಹಿರಿಯ ನೃತ್ಯ ಕಲಾವಿದೆ ಹಾಗೂ ಕಲಾ ಪೋಷಕರು
ಶ್ರೀ ಚೇತನ್, ಕಾಂಗ್ರೆಸ್ ಮುಖಂಡರು
ಮುದ್ರಾ ಡಾನ್ಸ್ ಅಂಡ್ ಯೋಗ ಶಾಲೆಯ ಬಗ್ಗೆ
ಸ್ಥಾಪನೆಯಾದಂದಿನಿಂದ ಸಂಸ್ಥೆಯು ಮೈಸೂರಿನ ಎರಡು ಶಾಖೆಗಳ ಮೂಲಕ ಶಾಸ್ತ್ರೀಯ ಕಲೆ ಮತ್ತು ಯೋಗಾಭ್ಯಾಸವನ್ನು ಪೋಷಿಸಿಕೊಂಡು ಬರುತ್ತಿದೆ:
ಸಂಗೀತ ಮತ್ತು ನೃತ್ಯ ಕಾರ್ಯಕ್ರಮ ಮಕ್ಕಳಿಂದ/ ಶಿಷ್ಯರಿಂದ , ಭರತನಾಟ್ಯ ಮಾರ್ಗಂ ಅದರಲ್ಲಿ ದಶಾವತಾರಂ ಹಾಗೂ ನೃತ್ಯದಲ್ಲಿ “Dance on pot” (ಮಡಕೆಯ ಮೇಲಿನ ನೃತ್ಯ) ಎನ್ನುವುದಕ್ಕೆ ಸಂದರ್ಭಕ್ಕೆ ಅನುಗುಣವಾಗಿ ಎರಡು ಪ್ರಮುಖ ಪರಿಕಲ್ಪನೆಗಳು
ಈ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಶಾಲೆಯ ವಿದ್ಯಾರ್ಥಿಗಳಿಂದ ಶಾಸ್ತ್ರೀಯ ನೃತ್ಯ ರೂಪಕಗಳು ಮತ್ತು ಯೋಗ ಪ್ರದರ್ಶನಗಳು ನೆರವೇರಲಿವೆ. ಮಾಧ್ಯಮ ಮಿತ್ರರು, ಪತ್ರಿಕಾ ವರದಿಗಾರರು ಹಾಗೂ ಕಲಾಪ್ರೇಮಿಗಳು ಈ ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿಗೊಳಿಸಿಕೊಡಬೇಕಾಗಿ ವಿನಂತಿ.
ಸಂಪರ್ಕ / ಆಯೋಜಕರು:
ವಿದುಷಿ ಸ್ವರ್ಣಲತಾ ಶಾಸ್ತ್ರಿ
ಸಂಸ್ಥಾಪಕರು ಹಾಗೂ ನಿರ್ದೇಶಕರು, ಮುದ್ರಾ ಡಾನ್ಸ್ ಅಂಡ್ ಯೋಗ ಶಾಲಾ
ಮೈಸೂರು
