ಸೇವಾ ಕಾರ್ಯಗಳ ಮೂಲಕ ಸಚಿವರ ಜನ್ಮ ದಿನಾಚರಣೆ

latha prabhukumar
1 Min Read

ಪಬ್ಲಿಕ್ ಅಲರ್ಟ್ ನ್ಯೂಸ್:- ಸೇವಾ ಕಾರ್ಯಗಳ ಮೂಲಕ ಸಚಿವರ ಜನ್ಮ ದಿನಾಚರಣೆ
ಮೈಸೂರು: ರಕ್ತದಾನ ಶಿಬಿರ, ರೋಗಿಗಳಿಗೆ ಹಣ್ಣು ಹಂಪಲು ವಿತರಣೆ, ಮಕ್ಕಳಿಗೆ ಪುಸ್ತಕ ವಿತರಣೆ, ಮಹಿಳೆಯರಿಗೆ ಸೀರೆ ವಿತರಣೆ ಹಾಗೂ ಹಿರಿಯರಿಗೆ ಸನ್ಮಾನದ ಮೂಲಕ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಸಚಿವ ರಿಜ್ವಾನ್‌ ಹರ್ಷದ್‌ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.
ಜೆ.ಪಿ.ನಗರದ ಡಿ.ದೇವರಾಜ ಅರಸು ಕಾಲೋನಿಯ ಮುಖಂಡ ಹಾಗೂ ರಿಜ್ವಾನ್‌ ಹರ್ಷದ್‌ ಅಭಿಮಾನಿಗಳ ಬಳಗದ ಅಧ್ಯಕ್ಷ ಎಸ್‌.ಎಂ.ಪಳನಿಸ್ವಾಮಿ ನೇತೃತ್ವದಲ್ಲಿ ಹಲವು ಸೇವಾ ಕಾರ್ಯ ಜರುಗಿದವು. ಬೆಳಿಗ್ಗೆ ಕೆ.ಆರ್‌.ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿದರು. ಬಳಿಕ 30ಕ್ಕೂ ಹೆಚ್ಚು ಪೌರ ಬಂಧುಗಳು ರಕ್ತದಾನದ ಮೂಲಕ ಸಚಿವರ ಹುಟ್ಟುಹಬವನ್ನು ಅರ್ಥಪೂರ್ಣಗೊಳಿಸಿದರು. ಬಳಿಕ ಕಾಲೋನಿಯ ದೇವರಿಗೆ ವಿಶೇಷಪೂಜೆ ಸಲ್ಲಿಸಿದರು. ಕಾಲೋನಿಯ ಮಕ್ಕಳಿಗೆ ನೋಟ್‌ ಪುಸ್ತಕಗಳನ್ನು ವಿತರಿಸಿದರು. ಅಲ್ಲದೆ, ಕಾಲೋನಿಯ 100ಕ್ಕೂ ಹೆಚ್ಚು ಮಹಿಳೆಯರಿಗೆ ಸೀರೆ, ಸಿಹಿ ವಿತರಿಸಿದರು. ಅಲ್ಲದೆ, ಕಾಲೋನಿಯ ಹಿರಿಯ ದಂಪತಿಗಳನ್ನು ಇದೇ ವೇಳೆ ಸನ್ಮಾನಿಸಿ ಗೌರವಿಸಿ ಸಂಭ್ರಮಿಸಿದರು. ಇದೇ ವೇಳೆ ಮಾತನಾಡಿದ ಪಳನಿಸ್ವಾಮಿ ಮಾತನಾಡಿ, ರಿಜ್ವಾನ್‌ ಹರ್ಷದ್‌ ಅವರ ಹುಟ್ಟುಹಬ್ಬವನ್ನು ಹಲವು ವರ್ಷಗಳಿಂದ ಆಚರಿಸಿಕೊಂಡು ಬರುತ್ತಿದ್ದೇವೆ. ಪೌರ ಕಾರ್ಮಿಕರನ್ನು ವಾರ್ಡ್‌ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಕಲ್ಪಿಸಿಕೊಟ್ಟವರಾಗಿದ್ದಾರೆ. ನಮ್ಮ ಕಾಲೋನಿಗೆ ಮೂರಕ್ಕೂ ಹೆಚ್ಚು ಬಾರಿ ಆಗಮಿಸಿ ಅಗತ್ಯ ಸೌಲಭ್ಯ ದೊರಕಿಸಿಕೊಡುವಲ್ಲಿ ಪ್ರಮುಖರಾಗಿದ್ದಾರೆಂದು ಸ್ಮರಿಸಿದರು.
ಮುಂದಿನ ದಿನಗಳಲ್ಲಿ ಅವರು ಸಹ ಉಪಮುಖ್ಯಮಂತ್ರಿ ಆಗಬೇಕು. ಆಗ ಮಾತ್ರವೇ ಹಿಂದುಳಿದ ಪೌರ ಕಾರ್ಮಿಕರ ಕಷ್ಟಗಳು ಪೂರ್ಣ ಪ್ರಮಾಣದಲ್ಲಿ ಬಗೆಹರಿಯಲಿವೆ. ಈ ದಿಸೆಯಲ್ಲಿ ಅವರಿಗೆ ಮತ್ತಷ್ಟು ಶಕ್ತಿ ತುಂಬಲಿ ಎಂಬ ಕಾರಣಕ್ಕೆ ನಾವೆಲ್ಲರೂ ಚಾಮುಂಡೇಶ್ವರಿ, ಆದಿಶಕ್ತಿ ಸೇರಿ ದೇವರನ್ನು ಪ್ರಾರ್ಥಿಸುವುದಾಗಿ ಹೇಳಿದರು. ರಿಜ್ವಾನ್‌ ಹರ್ಷದ್‌ ಅಭಿಮಾನಿಗಳ ಬಳಗದ ಗೌರವಾಧ್ಯಕ್ಷ ಎಂ.ಕೆ.ಮಹದೇವು, ಉಪಾಧ್ಯಕ್ಷೆ ನಾಗರತ್ನ, ಕಾರ್ಯದರ್ಶಿ ಮುರುಗ, ಸಂಘಟನಾ ಕಾರ್ಯದರ್ಶಿ ಆರ್‌.ಕೃಷ್ಣ, ಗೌರವ ಸಲಹೆಗಾರ ಎಂ.ರಾಮಚಂದ್ರ, ಆರ್‌.ಶಂಕರ್‌ ಇನ್ನಿತರರು ಉಪಸ್ಥಿತರಿದ್ದರು.

Share This Article
Leave a Comment