ಪಬ್ಲಿಕ್ ಅಲರ್ಟ್ ನ್ಯೂಸ್:-ಮಾವುತರು ಮತ್ತು ಕಾವಾಡಿಗರ ಉಪಹಾರ ಕೂಟದಲ್ಲಿ ಹೈಡ್ರಾಮಾ
ಮೈಸೂರಿನ ಅರಮನೆ ಆವರಣದಲ್ಲಿ ಆಯೋಜಿಸಿದ್ದ ಉಪಹಾರ ಕೂಟ
ನಿಗದಿತ ಸಮಯಕ್ಕೆ ಆರಂಭವಾಗದಿದ್ದಕ್ಕೆ ಅಸಮಾಧಾನ
ಶಾಸಕ ತನ್ವೀರ್ ಸೇಠ್, ಅಧಿಕಾರಿಗಳ ವಿರುದ್ಧ ಬೇಸರ
ಸ್ಥಳದಿಂದ ನಿರ್ಗಮಿಸಿದ ಶಾಸಕ ತನ್ವೀರ್ ಸೇಠ್
ಇಂದು ಬೆಳಿಗ್ಗೆ 9 ಗಂಟೆಗೆ ಆಯೋಜಿಸಿದ್ದ ಕಾರ್ಯಕ್ರಮ
ಜಿಲ್ಲಾ ಉಸ್ತುವಾರಿ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರ ನೇತೃತ್ವ051988
ಕೂಡಲೇ ಕಾರ್ಯಕ್ರಮ ಆರಂಭಿಸುವಂತೆ ಅಧಿಕಾರಿಗಳಿಗೆ ಸೂಚನೆ
ಕಾರ್ಯಕ್ರಮ ಆರಂಭಿಸಲು ಮತ್ತಷ್ಟು ವಿಳಂಬವಾದ ಹಿನ್ನೆಲೆ
ಶಾಸಕರು ತೀವ್ರ ಅಸಮಾಧಾನಗೊಂಡು ಸ್ಥಳದಿಂದ ನಿರ್ಗಮನ
ಮೈಸೂರಿನ ಅರಮನೆ ಆವರಣದಲ್ಲಿ ಆಯೋಜಿಸಿದ್ದ ಮಾವುತರು ಮತ್ತು ಕಾವಾಡಿಗರ ಉಪಹಾರ ಕೂಟದಲ್ಲಿ ಹೈಡ್ರಾಮಾ ನಡೆದಿದೆ..
ಕಾರ್ಯಕ್ರಮ ನಿಗದಿತ ಸಮಯಕ್ಕೆ ಆರಂಭವಾಗದಿದ್ದಕ್ಕೆ ಅಸಮಾಧಾನಗೊಂಡ ಶಾಸಕ ತನ್ವೀರ್ ಸೇಠ್, ಅಧಿಕಾರಿಗಳ ವಿರುದ್ಧ ಬೇಸರ ವ್ಯಕ್ತಪಡಿಸಿ ಸ್ಥಳದಿಂದ ನಿರ್ಗಮಿಸಿದ್ದಾರೆ..
ಮಾವುತರು ಹಾಗೂ ಕಾವಾಡಿಗರ ಉಪಹಾರ ಕೂಟ ಮತ್ತು ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ವಿಳಂಬ.. ಇದರಿಂದ ಸಿಟ್ಟಾದ ಶಾಸಕ ತನ್ವೀರ್ ಸೇಠ್ ಸ್ಥಳದಿಂದ ನಿರ್ಗಮನ..
ಮೈಸೂರಿನ ಅರಮನೆ ಆವರಣದಲ್ಲಿ ಇಂದು ಬೆಳಿಗ್ಗೆ 9 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಮಾವುತರು ಮತ್ತು ಕಾವಾಡಿಗರಿಗಾಗಿ ಉಪಹಾರ ಕೂಟ ಆಯೋಜಿಸಲಾಗಿತ್ತು..
ಆದರೆ ಬೆಳಿಗ್ಗೆ 9.30 ಆದರೂ ಕಾರ್ಯಕ್ರಮ ಆರಂಭವಾಗಿರಲಿಲ್ಲ.. ಇದರಿಂದ ಅಸಮಾಧಾನಗೊಂಡ ಶಾಸಕ ತನ್ವೀರ್ ಸೇಠ್, ಸ್ಥಳದಿಂದ ಹೊರನಡೆದರು..
ಬೆಳಗ್ಗೆಯಿಂದಲೇ ಕಾಯುತ್ತಿದ್ದ ಮಾವುತರು ಮತ್ತು ಕಾವಾಡಿಗರಿಗೆ ಗೌರವ ನೀಡಬೇಕು.. ಅವರಿಗೆ ಸಮಯಕ್ಕೆ ಸರಿಯಾಗಿ ಉಪಹಾರ ನೀಡಬೇಕು.. ಊಟಕ್ಕಾಗಿ ಅವರನ್ನು ಕಾಯಿಸುವುದು ಸರಿಯಲ್ಲ ಎಂದು ಶಾಸಕ ತನ್ವೀರ್ ಸೇಠ್ ಬೇಸರ ವ್ಯಕ್ತಪಡಿಸಿದರು..
ಕೂಡಲೇ ಕಾರ್ಯಕ್ರಮ ಆರಂಭಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು..
ಆದರೆ ಅಧಿಕಾರಿಗಳಿಂದ ಕಾರ್ಯಕ್ರಮ ಆರಂಭಿಸಲು ಮತ್ತಷ್ಟು ವಿಳಂಬವಾದ ಹಿನ್ನೆಲೆಯಲ್ಲಿ ಶಾಸಕರು ತೀವ್ರ ಅಸಮಾಧಾನಗೊಂಡು ಸ್ಥಳದಿಂದ ನಿರ್ಗಮಿಸಿದರು..
ಮಾವುತರು ಮತ್ತು ಕಾವಾಡಿಗರಿಗಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿನ ವಿಳಂಬ ಇದೀಗ ರಾಜಕೀಯ ವಲಯದಲ್ಲೂ ಗಮನ ಸೆಳೆದಿದೆ..
