ಸಂಸ್ಕೃತಿ ಉಳಿಸುವ ಶಕ್ತಿ ಸಂಸ್ಕೃತಕ್ಕಿದೆ: ಶಾಸಕ ಶ್ರೀವತ್ಸ

Pratheek
1 Min Read

ಪಬ್ಲಿಕ್ ಅಲರ್ಟ್


ಮೈಸೂರು: ಸಂಸ್ಕೃತವು ಭಾರತದ ಸಂಸ್ಕೃತಿ ಉಳಿಸುವ ಒಂದು ಪ್ರಾಚೀನ ಮತ್ತು ಶಾಸ್ತ್ರೀುಂ ಭಾಷೆಾಂಗಿದೆ ಎಂದು ಶಾಸಕ ಟಿ.ಎಸ್.ಶ್ರೀವತ್ಸ ತಿಳಿಸಿದರು.
ನಗರದ ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ಶುಕ್ರವಾರ ನಡೆದ ಸಂಸ್ಕೃತೋತ್ಸವ ಕಾರ್ಯಕ್ರಮದಲ್ಲಿ ವಾತನಾಡಿದ ಅವರು, ಸಂಸ್ಕೃತ ಕಲಿುಂಬೇಕು. ಅಳವಾದ ಅಧ್ಯಯನ ಮಾಡಬೇಕು ಎನ್ನುವ ಆಸಕ್ತಿ ಎಲ್ಲರಲ್ಲಿಯೂ ಮೂಡಿದೆ ಎಂದರು.
ಸಂಸ್ಕೃತ ಸಾಂಸ್ಕೃತಿಕ ಪರಂಪರೆಯಲ್ಲಿ ತನ್ನದೆ ಸ್ಥಾನ ಪಡೆದಿದೆ. ಜಗತ್ತಿನ ಎಲ್ಲ ಮೌಲಿಕ ಗ್ರಂಥಗಳು ಸಂಸ್ಕೃತದ ಲ್ಲಿರುವುದು ಹೆಮ್ಮೆಯ ವಿಷಯ. ಸಂಸ್ಕೃತ ಮೇಲ್ವರ್ಗದವರಿಗೆ  ಮಾತ್ರ ಸೀಮಿತವಾಗಿಲ್ಲ. ಮೈಸೂರಲ್ಲಿ ಸಂಸ್ಕೃತ ಕಲಿಸಲು ಅನೇಕ ಸೇವಾ ಸಂಸ್ಥೆ ತೊಡಗಿಕೊಂಡಿದ್ದು, ಸಂಸ್ಕೃತದ ಕೆಲಸ ಅಗಾಧವಾಗಿ ನಡೆುುಂತ್ತಿದೆ ಎಂದು ತಿಳಿಸಿದರು.
ವಿದ್ಯೆ, ಪ್ರತಿಭೆ ಯಾರ ಸ್ವತ್ತಲ್ಲ. ಪರಿಶ್ರಮಕ್ಕೆ ಯಶಸ್ಸು ಖಚಿತ. ಕಷ್ಟಪಡದೆ ಯಾರಿಗೂ ಏನೂ ಲಭಿಸುವುದಿ ಲ್ಲ. ಮೈಸೂರಿನ ಬಾಲ ಪ್ರತಿಭೆಗಳು ಸಂಸ್ಕೃತ ಶ್ಲೋಕ ಪಠಣದಲ್ಲಿ ವಿಶ್ವ ದಾಖಲೆಯಲ್ಲಿ ತೊಡಗಿದ್ದು, ನಮ್ಮ ಸಂಸ್ಕೃತಿ ಇದಕ್ಕೆ ಕಾರಣವಾಗಿದೆ. ಅಲ್ಲದೆ, ಸಂಸ್ಕೃತ ಕ್ಷೇತ್ರಕ್ಕೆ ಕೊಡುಗೆ ನೀಡಿದ ವಿದ್ವಾಂಸರನ್ನು ಸನ್ಮಾನಿಸುತ್ತಿರುವುದು ಹೆಮ್ಮೆಯ ವಿಷಯ ಎಂದರು.
ಜೆಎಸ್‌ಎಸ್ ಸಂಸ್ಥೆುಂ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಬೆಂಗಳೂರು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ವಿ.ಗಿರೀಶ್ ಚಂದ್ರ ಮತ್ತಿತರರು ಹಾಜರಿದ್ದರು.
ಮೂವರಿಗೆ ಸನ್ಮಾನ: ಸಮಾರಂಭದಲ್ಲಿ ಆಗಮ ವಿದ್ವಾಂಸ ಪ್ರೊ.ಎಂ.ಮಲ್ಲಣ್ಣ, ಸಂಸ್ಕೃತ ವಿದ್ವಾಂಸ ಎಚ್.ವಿ.ನಾಗರಾಜ್ ರಾವ್, ಜ್ಯೋತಿಷ್ಯ ವಿದ್ವಾಂಸ ಕೆ.ಜಿ.ಪುಟ್ಟಹೊನ್ನಯ್ಯ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

Share This Article
Leave a Comment