ಪಬ್ಲಿಕ್ ಅಲರ್ಟ್
ಮೈಸೂರು: ನಗರದ ಪ್ರದರ್ಶಕ ಕಲೆಗಳ ತರಬೇತಿ ಸಂಸ್ಥೆ ಕಲಾಧಾರೆ ಕಲ್ಚರಲ್ ಟ್ರಸ್ಟ್ವತಿಯಿಂದ ೨೫ನೇ ವರ್ಷದ ಬೆಳ್ಳಿಹಬ್ಬದ ಅಂಗವಾಗಿ ಸಾಂಸ್ಕೃತಿಕ ನಡಿಗೆ ಸರ್ಕಾರಿ ಶಾಲಾ ಕಾಲೇಜುಗಳ ಕಡೆಗೆ ಶೀರ್ಷಿಕೆಯಡಿ ಭಾರತೀಯ ಮತ್ತು ಜಾನಪದ ಹಾಗೂ ವಿವಿಧ ಕಲಾ ಪ್ರಕಾರಗಳ ಒಂದು ತಿಂಗಳ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ಇದು ನೃತ್ಯ ಪ್ರಕಾರ, ಸಂಗೀತ ಪ್ರಕಾರ, ರಂಗ ಪ್ರಯೋಗ, ಜಾನಪದ ಹಾಗೂ ವಿವಿಧ ಕಲಾ ಪ್ರಕಾರಗಳ ತರಬೇತಿ ಶಿಬಿರವರಾಗಿದೆ. ನಮ್ಮ ಸಂಸ್ಥೆಯಲ್ಲಿ ತರಬೇತಿ ಪಡೆದ ಅನೇಕರು ರಾಜ್ಯ ಮಟ್ಟದಲ್ಲಿ ಸಾಧನೆ ಮಾಡುತ್ತಿದ್ದಾರೆ ಎಂದು ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಚಾಮರಾಜ್ ಗುರುವಾರ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದರು.
ವಿವೇಕಾನಂದ ನಗರ ಪೆಟ್ರೋಲ್ ಬಂಕ್ ಹತ್ತಿರದ ಶ್ರೀರಾಂಪುರ ೨ ನೇ ಹಂತದ ಟ್ರಸ್ಟ್ ಕಟ್ಟಡದಲ್ಲಿ ಶಿಬಿರ ನಡೆಯಲಿದೆ. ನಿತ್ಯ ಸಂಜೆ ೫ ರಿಂದ ರಾತ್ರಿ ೮ ರವರೆಗೆ ತರಗತಿ ಇರಲಿದೆ.
ಪ್ರತಿ ಶನಿವಾರ ಸಂಜೆ ೪ ಗಂಟೆಯಿಂದ ೭ ಗಂಟೆಯವರೆಗೆ ಹಾಗೂ ಪ್ರತಿ ಭಾನುವಾರ ಬೆಳಿಗ್ಗೆ ೧೦ರಿಂದ ಮಧ್ಯಾಹ್ನ ೧ರವರೆಗೆ ವಾರಾಂತ್ಯ ತರಗತಿಗಳೂ ನಡೆಯಲಿವೆ.
ಶಿಬಿರಕ್ಕೆ ಸರ್ಕಾರಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶವಿದೆ. ಖಾಸಗಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಮಾತ್ರ ನಿರ್ವಹಣಾ ವೆಚ್ಚಕ್ಕಾಗಿ ೩ ಸಾವಿರ ರೂ. ಶುಲ್ಕ ನಿಗದಿ ಪಡಿಸಲಾಗಿದೆ ಎಂದರು.
ಶಿಬಿರದ ಉದ್ಘಾಟನಾ ಕಾರ್ಯಕ್ರಮ ನ.೫ರಂದು ಸಂಜೆ ೬ಕ್ಕೆ ನಡೆಯಲಿದೆ.
ಆಸಕ್ತರು ಹೆಚ್ಚಿನ ಮಾಹಿತಿಗೆ ದೂ. ೯೮೮೦೭ ೭೭೧೨೧ ಸಂಪರ್ಕಿಸಬಹುದಾಗಿದೆ ಎಂದರು.
ಟ್ರಸ್ಟ್ ನಿರ್ದೇಶಕರಾದ ಸೋಸಲೆ ಸಿದ್ದರಾಜು, ರಾಬರ್ಟ್ ಕವನ್ರಾಗ್, ಮಹೇಶ್ ಜೈನ್ ಸುದ್ದಿಗೋಷ್ಠಿಯಲ್ಲಿ ಇದ್ದರು.
