ಪಬ್ಲಿಕ್ ಅಲರ್ಟ್
ಮೈಸೂರು: ಯೋಗವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ವಿಸ್ತಾರ ಗೊಳಿಸಿದ ಕೀರ್ತಿ ಮೈಸೂರಿಗೆ ಸಲ್ಲುತ್ತದೆ ಎಂದು ಶಾಸಕ ಶ್ರೀವತ್ಸ ಹೇಳಿದರು.
ನಗರದ ವಸ್ತು ಪ್ರದರ್ಶನ ಪ್ರಾಧಿಕಾರ ಆವರಣದಲ್ಲಿರುವ ಪಿ.ಕಾಳಿಂಗರಾವ್ ಸಭಾಂಗಣದಲ್ಲಿ ನಡೆದ ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೇ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದಕ್ಷಿಣ ಭಾರತದ ಕರ್ನಾಟಕ ರಾಜ್ಯದಲ್ಲಿರುವ ಮೈಸೂರು ವಿಶ್ವ ರಾಜಧಾನಿ ಎಂದು ಗುರುತಿಸಲ್ಪಟ್ಟಿದೆ. ರಾಜಮನೆತನದ ಗತಕಾಲವನ್ನು ಹೊಂದಿರುವ ಮೈಸೂರು ನಗರವು ಯೋಗ ಅಭ್ಯಾಸವನ್ನು ಮಾಡಲು ಬರುವ ಯೋಗ ಆಸಕ್ತರಿಗೆ ಜನಪ್ರಿಯ ತಾಣವಾಗಿದೆ. ಯೋಗವನ್ನು ನಾನು ಅಭ್ಯಾಸ ಮಾಡುತ್ತಿದ್ದೇನೆ. ಮುಂದಿನ ದಸರಾದಲ್ಲಿ ಯೋಗ ಪ್ರದರ್ಶನ ಮಾಡಲು ಪ್ರಶಂಶಿಸುತ್ತೇನೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಯೋಗ ದಸರ ಉಪ ಸಮಿತಿಯ ಅಧ್ಯಕ್ಷ ಎನ್.ನಾಗೇಶ್ ಮಾತನಾಡಿ ದಸರಾ ರಾಜ್ಯಮಟ್ಟದ ಯೋಗ ಸ್ಪರ್ಧೆಯಲ್ಲಿ 2000 ಸ್ಪರ್ಧಾರ್ಥಿಗಳು ಭಾಗವಹಿಸಿದ್ದಾರೆ. ಯೋಗ ಮಾಡುವುದು ದೇಹದ ಕಸರತ್ತಿಗಲ್ಲ ಇದು ವಾನಸಿಕ ನೆಮ್ಮದಿ ಹಾಗೂ ಏಕಾಗ್ರತೆ , ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ. ಯೋಗ ದಸರಾ ಸ್ಫರ್ಧೆ ಕೇವಲ ಸ್ಫರ್ಧೆಯಾಗಿರುವುದಿಲ್ಲ ಉತ್ತಮ ಆರೋಗ್ಯ ತಮತೋಲನ ಕಾಪಾಡಿಕೊಳ್ಳುವ ಸಂದೇಶವನ್ನು ಸಾರುತ್ತದೆ. ಮುಂದಿನ ತಲೆವಾರುಗಳಿಗೆ ಯೋಗದ ಬಗ್ಗೆ ಅರಿವು ಮೂಡಿಸಬೇಕು ಹಾಗೂ ಎಲ್ಲರೂ ಯೋಗ ಮಾಡುವುದರ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದರು.


ಸ್ಫರ್ಧೆಯಲ್ಲಿ 10 ರಿಂದ 12 ವರ್ಷದ ವಯೋಮಿತಿಯಲ್ಲಿ 385, 12 ರಿಂದ 14 ವರ್ಷದ ವಯೋಮಿತಿಯ 361 ಸ್ಪರ್ಧಿ, 14 ರಿಂದ 18 ವರ್ಷದ ವಯೋಮಿತಿಯ 219 ಸ್ಪರ್ಧಿ, 21 ರಿಂದ ವರ್ಷದ ವಯೋಮಿತಿಯಲ್ಲಿ 94 ಸ್ಪರ್ಧಿ, 35 ರಿಂದ 45 ವರ್ಷದ ವಯೋಮಿತಿಯ 138 ಸ್ಪರ್ಧಿ, 45 ರಿಂದ 50 ವರ್ಷದ ವಯೋಮಿತಿಯಲ್ಲಿ 106 ಸ್ಪರ್ಧಿ, 55 ರಿಂದ 65 ವರ್ಷದ ವಯೋಮಿತಿಯಲ್ಲಿ 49 ಸ್ಪರ್ಧಿ, 65 ವರ್ಷ ಮೇಲ್ಪಟ್ಟವರು 42 ಸ್ಪರ್ಧಿ ಹಾಗೂ ವಿಶೇಷ ಚೇತನ ವಿಭಾಗದಲ್ಲಿ 27 ಸ್ಪರ್ಧಿಗಳು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಸಮಿತಿಯ ಉಪವಿಶೇಷ ಅಧಿಕಾರಿ ಕೆ.ರಮ್ಯಾ, ಸಮಿತಿಯ ಕಾರ್ಯಧ್ಯಾಕ್ಷ ನಿರೂಪ್ ವೆಸ್ಲಿ, ಸಹ ಕಾರ್ಯಧ್ಯಕ್ಷಿ ಶಿಲ್ಪ, ರೇಣುಕಾದೇವಿ, ಉಪ ಸಮಿತಿಯ ಉಪಾಧ್ಯಕ್ಷರಾದ ಪ್ರಸಾದ್ ನಾಡನಹಳ್ಳಿ , ನಂಜುoಡಸ್ವಾಮಿ, ಕೆ.ಜಿ.ದೇವರಾಜ್, ಮಹೇಶ್ ಮತ್ತಿತ್ತರು ಉಪಸ್ಥಿತರಿದ್ದರು.
