ಪಬ್ಲಿಕ್ ಅಲರ್ಟ್
ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರ 75ನೇ ಹುಟ್ಟುಹಬ್ಬವನ್ನು ವಿವಿಧ ಸೇವಾ ಕಾರ್ಯಗಳ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಅಪೂರ್ವ ಸ್ನೇಹ ಬಳಗದ ವತಿಯಿಂದ ಚಾಮುಂಡಿಪುರಂ ವೃತ್ತದಲ್ಲಿ ಪೌರ ಕಾರ್ಮಿಕರಿಗೆ ಚಹಾ, ಬನ್ನು, ಬಾಳೆಹಣ್ಣು ವಿತರಿಸಲಾಯಿತು. ಈ ವೇಳೆ ಶಾಸಕ ಟಿ.ಎಸ್.ಶ್ರೀವತ್ಸ ಮಾತನಾಡಿ, ದೇಶದ ಮುಂದಿನ ಭವಿಷ್ಯಕ್ಕಾಗಿ ಆರ್ಥಿಕವಾಗಿ ಭದ್ರ ಬುನಾದಿ ಮತ್ತು ದೇಶದ ಗಡಿಯನ್ನು ಬಲಿಷ್ಠಗೊಳಿಸಿದ ಪ್ರಧಾನಿ ನರೇಂದ್ರ ಮೋದಿ ಅತ್ಯುತ್ತಮ ಸೇವೆ ಸಲ್ಲಿಸುತ್ತಿದ್ದಾರೆ. ಅಯೋಧ್ಯೆ ರಾಮಮಂದಿರ ನಿರ್ಮಾಣದ ಸಂದರ್ಭದಲ್ಲಿ ಪೌರಕಾರ್ಮಿಕರ ಪಾದಪೂಜೆ ಮಾಡುವ ಅವರಿಗೆ ಗೌರವ ಸಲ್ಲಿಸಿದ್ದಾರೆ. ಆರೋಗ್ಯಕರ ಸಮಾಜ ನಿರ್ಮಾಣಕ್ಕೆ, ದೇಶದ ಪ್ರಗತಿಗೆ ಪೌರಕಾರ್ಮಿಕರ ಸೇವೆ ಅತ್ಯಗತ್ಯ ಎಂದರು.
ನಗರಪಾಲಿಕೆ ಮಾಜಿ ಸದಸ್ಯ ಮಾ.ವಿ.ರಾಮಪ್ರಸಾದ್, ಎಂ.ಡಿ.ಪಾರ್ಥಸಾರಥಿ, ಅಪೂರ್ವ ಸ್ನೇಹ ಬಳಗದ ಅಧ್ಯಕ್ಷ ಅಪೂರ್ವ ಸುರೇಶ್, ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೇಬಲ್ ಮಹೇಶ್, ಉಪಾಧ್ಯಕ್ಷ ಜೋಗಿ ಮಂಜು, ಜಯರಾಮ್, ನಿರೂಪಕ ಅಜಯ್ ಶಾಸ್ತ್ರಿ, ಜೀವದಾರ ರಕ್ತನಿಧಿ ಕೇಂದ್ರದ ಗಿರೀಶ್, ಪ್ರದೀಪ್, ಸಂದೀಪ್, ಕಿಶೋರ್, ದೂರ ರಾಜಣ್ಣ, ಶಿವಲಿಂಗ ಸ್ವಾಮಿ, ಆನಂದ್, ಸಚೀಂದ್ರ ಮತ್ತಿತರರಿದ್ದರು.
ನಿವೃತ್ತ ಸೈನಿಕರಿಗೆ ಗೌರವ: ಪ್ರತಾಪ್ ಸಿಂಹ ಅಭಿಮಾನಿ ಬಳಗದ ವತಿಯಿಂದ ಪ್ರಧಾನಿಮಂತ್ರಿ ನರೇಂದ್ರ ಮೋದಿ ಅವರ ಜನುಮ ದಿನದ ಪ್ರಯುಕ್ತ ದಿವಾನ್ಸ್ ರಸ್ತೆಯಲ್ಲಿರುವ ಖಾಸಗಿ ಹೋಟೆಲ್‌ನಲ್ಲಿ 75 ನಿವೃತ್ತ ಸೈನಿಕರನ್ನು ಗೌರವಿಸಲಾಯಿತು.
ಪ್ರತಾಪ್ ಸಿಂಹ ಮಾತನಾಡಿ, ಜನರು ನಿರ್ಭಯವಾಗಿ ಜೀವನ ನಡೆಸುತ್ತಿದ್ದಾರೆ ಎಂದರೆ ಅದಕ್ಕೆ ಕಾರಣ ನಮ್ಮ ದೇಶದ ಸೈನಿಕರು. ಯೋಧರು ಗಡಿ ಕಾಯದೆ ಹೋದರೆ ನಾವೆಲ್ಲರೂ ಪರದಾಡುವ ಸ್ಥಿತಿ ನಿರ್ಮಾಣವಾಗುತ್ತಿತ್ತು ಎಂದು ತಿಳಿಸಿದರು.
ದೇಶದ ರಕ್ಷಣೆಯ ವಿಚಾರ ಬಂದಾಗ ಅದೆಷ್ಟು ವೀರ ಯೋಧರ ತ್ಯಾಗ ಬಲಿದಾನಗಳು ಕಣ್ಣಮುಂದೆ ಹಾದು ಹೋಗುತ್ತವೆ. ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ದೇಶ, ದೇಶವಾಸಿಗಳ ರಕ್ಷಣೆಗೆ ಮಹಾತ್ಯಾಗ ಮಾಡಿದವರು ಯೋಧರು. ತಮ್ಮ ಕುಟುಂಬ ಹಾಗೂ ತಮ್ಮ ಎಲ್ಲ ವೈಯಕ್ತಿಕತೆಗಳನ್ನು ಬದಿಗಿರಿಸಿ ದೇಶದ ರಕ್ಷಣೆಗೆ ಮೊದಲ ಆದ್ಯತೆ ನೀಡಿದ್ದಾರೆ. ಹೀಗಾಗಿ ನಮ್ಮ ಹೆಮ್ಮೆಯ ಸೈನಿಕರನ್ನು ಗೌರವಿಸುವ ಕಾರ್ಯವಾಗಬೇಕೆಂದು ತಿಳಿಸಿದರು.
ಮಾಜಿ ನಗರ ಪಾಲಿಕೆ ಸದಸ್ಯರಾದ ಎಂ.ಸತೀಶ್, ಗಿರೀಶ್ ಪ್ರಸಾದ್, ಬೊ.ಉಮೇಶ, ಸುಬ್ಬಯ್ಯ, ಬಿಜೆಪಿ ಮುಖಂಡರಾದ ಎಸ್.ಕೆ.ದಿನೇಶ್, ದಿನೇಶ್‌ಗೌಡ, ರಾ.ಪರಮೇಶಗೌಡ, ಚೇತನ್‌ಗೌಡ, ಗುರು ವಿನಾಯಕ್, ಬೈರಪ್ಪ, ಕೇಬಲ್ ವೆಂಕಟೇಶ್, ಪ್ರಮೋದ್, ಸುರೇಂದ್ರ, ಶ್ರವಣ್ ಮಾಲಿ, ವಿನೋದ್, ಸಂದೇಶ್, ಜಗದೀಶ್, ವಸಂತ ಮನೀಶ್, ಕಲ್ಕೆರೆ ನಾಗರಾಜ್, ಗಂಗಣ್ಣ, ಕಿರಣ್, ಚಂದ್ರಕಲಾ, ಪ್ರಕಾಶ್, ನಿಖಿಲ್, ಜಯಪ್ಪ, ಗುರುವಿನಾಯಕ್, ಮಹೇಶ್, ರಾಜೇಶ್, ಪ್ರಜ್ವಲ್, ಅಶೋಕ್, ಜಯಣ್ಣ, ಮಧು, ಚರಣ್ ಉಪಸ್ಥಿತರಿದ್ದರು.
ಬಾಕ್ಸ್
ದೇವಸ್ಥಾನದಲ್ಲಿ ವಿಶೇಷ ಪೂಜೆ
ಪ್ರಧಾನಿ ನರೇಂದ್ರ ಮೋದಿ ಅವರ 75ನೇ ಜನ್ಮದಿನದ ಹಿನ್ನೆಲೆಯಲ್ಲಿ ಮೈಸೂರಿನ ದೇವರಾಜ ಮೊಹಲ್ಲಾದಲ್ಲಿರುವ ಅಮೃತೇಶ್ವರಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಬಿಜೆಪಿ ವತಿಯಿಂದ ವಿಶೇಷ ಪೂಜೆ ಹೋಮ, ಹವನ ನಡೆಸಿ, ವಿಶ್ವದ ಶಾಂತಿಗಾಗಿ ಸಂಕಲ್ಪ ಪೂಜೆ ಮಾಡಿಸಲಾಯಿತು. ನರೇಂದ್ರ ಮೋದಿ ಅವರ ಭಾವಚಿತ್ರ ಹಿಡಿದು ಹೋಮ ನಡೆಸಲಾಯಿತು. ಈ ವೇಳೆ ಶಾಸಕ ಟಿ.ಎಸ್.ಶ್ರೀವತ್ಸ ಹಾಗೂ ಬಿಜೆಪಿ ಕಾರ್ಯಕರ್ತರು ಪ್ರಧಾನಿ ನರೇಂದ್ರಮೋದಿ ಪರ ಘೋಷಣೆ ಕೂಗಿ ಶುಭಕೋರಿದರು.
ಬಾಕ್ಸ್
ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬದ ಪ್ರಯುಕ್ತ ಮೋದಿ ಅವರಿಗೆ ಹಾಗೂ ಲೋಕಕ್ಕೆ ಒಳತಾಗಲಿ ಎಂದು ಪೂಜೆ ಸಲ್ಲಿಸಲಾಗಿದೆ. ವಿಶ್ವದ ಶಾಂತಿಗೆ ಸಂಕಲ್ಪ ಮಾಡಿಕೊಳ್ಳಲಾಗಿದೆ.
-ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಸಂಸದ
