ಆ.೩೧ಕ್ಕೆ ಸಪ್ತರ್ಷಿ ಸಂಘದ ಕಾರ್ಯಕ್ರಮ  

Pratheek
1 Min Read

ಪಬ್ಲಿಕ್ ಅಲರ್ಟ್


ಮೈಸೂರು: ಸಪ್ತರ್ಷಿ ಸೌಹಾರ್ದ ಸಹಕಾರಿ ಸಂಘ ನಿಯಮಿತದ‌ ಸ್ಥಾಪಕ‌ ಅಧ್ಯಕ್ಷ ದಿವಂಗತ ಬಿ.ಎಸ್‌.ನಾಗರಾಜ್ ಪುತ್ಥಳಿ ಅನಾವರಣ ಹಾಗೂ ಸಹಕಾರಿ ಮೊಬೈಲ್ ಅಪ್ಲಿಕೇಷನ್‌ ಬಿಡುಗಡೆ ಸಮಾರಂಭವನ್ನು ಆ.31ರಂದು ಹಮ್ಮಿಕೊಳ್ಳಲಾಗಿದೆ ಎಂದು ನಿರ್ದೇಶಕ‌ ಎನ್.ನಾಗಚಂದ್ರ ತಿಳಿಸಿದರು.
ನಗರದ ಕೃಷ್ಣಮೂರ್ತಿಪುರಂನಲ್ಲಿರುವ ಶಾರದಾ ವಿಲಾಸ ಶತಮಾನೋತ್ಸವ ಭವನದಲ್ಲಿ ಅಂದು ಬೆಳಗ್ಗೆ 10ಕ್ಕೆ ನಡೆಯಲಿರುವ ಕಾರ್ಯಕ್ರಮವನ್ನು ಮುಡಾ‌ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್ ಉದ್ಘಾಟಿಸುವರು. ಬಿ.ಎಸ್.ನಾಗರಾಜ್ ಅವರ ಪುತ್ಥಳಿಯನ್ನ ಹಿರಿಯ ವರದಿಗಾರ ಅಂಶಿ ಪ್ರಸನ್ನಕುಮಾರ್ ಅನಾವರಣಗೊಳಿಸುವರು. ಸಹಕಾರಿ ಮೊಬೈಲ್ ಅಪ್ಲಿಕೇಷನ್ ಅನ್ನು ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ವ್ಯವಸಸ್ಥಾಪಕ ನಿರ್ದೇಶಕ ಶರಣಗೌಡ ಜಿ.ಪಾಟೀಲ್ ಅವರು ಬಿಡುಗಡೆ ಮಾಡುವರು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಖಜಾಂಚಿ ಎಂ.ಜಿ.ಕೃಷ್ಞವೇಣಿ ಮಾತನಾಡಿ, ಬಿ.ಎಸ್.ನಾಗರಾಜ್ ರಾವ್ ಅವರು ಈ ಬ್ಯಾಂಕ್ ಅನ್ನು ಸ್ಥಾಪಿಸಿದರು.6  ಲಕ್ಷ ರೂ.,ಷೇರು ಬಂಡವಾಳದೊಂದಿಗೆ ಪ್ರಾರಂಭಿಸಲಾಯಿತು.5ಸಾವಿರ ಸದಸ್ಯರನ್ನು ಹೊಂದಿರುವ ಈ ಬ್ಯಾಂಕ್ 2ಕೋಟಿ ಷೇರು ಬಂಡವಾಳ,24 ಕೋಟಿ ಠೇವಣಿಯೊಂದಿಗೆ ಮತ್ತು 4ಕೋಟಿ ನಿಧಿಯೊಂದಿಗೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷೆ ಎಸ್.ಶ್ಯಾಮಲ, ನಿರ್ದೇಶಕ‌‌ ಎಚ್.ವಿ.ಸುಬ್ಬಣ್ಣ, ಬ್ಯಾಂಕ್ ನ‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್‌.ಎ.ಪುರುಷೋತ್ತಮ ಇದ್ದರು.

TAGGED:
Share This Article
Leave a Comment