ಪಬ್ಲಿಕ್ ಅಲರ್ಟ್
ಮೈಸೂರು:ಸಂಚಲನ ಮೈಸೂರು ತಂಡದ ವತಿಯಿಂದ ನ. ೨ ರಂದು ಸಂಜೆ ೬.೩೦ಕ್ಕೆ ರಾಮಕೃಷ್ಣ ನಗರದ ನಟನ ರಂಗಶಾಲೆಯಲ್ಲಿ ಎರಡೆರಡ್ಲಾ ಐದು ಎಂಬ ನಾಟಕ ಪ್ರದರ್ಶನ ಆಯೋಜಿಸಲಾಗಿದೆ ಎಂದು ತಂಡದ ಮುಖ್ಯಸ್ಥ ದೀಪಕ್ ಮೈಸೂರು ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಡನೆ ಮಾತನಾಡಿ, ರಚನೆ ಆಸಿಫ್ ಕ್ಷತ್ರಿಯ ಅವರದ್ದಾಗಿದೆ. ಇದು ನಗೆಗಡಲಿನಲ್ಲಿ ತೇಲಿಸುವ ವಿಶಿಷ್ಟ ನಾಟಕವಾಗಿದೆ. ಪ್ರವೇಶ ದರ ೨೦೦ ರೂ.ಗಳೆಂದರು.
ಹಿರಿಯ ರಂಗಕರ್ಮಿ ರಾಜಶೇಖರ ಕದಂಬ ಪೋಸ್ಟರ್ ಬಿಡುಗಡೆಗೊಳಿಸಿದರು. ಅಶ್ವತ್ ಕದಂಬ, ತಿಪ್ಪಣ್ಣ, ಶ್ರೀರಾಂ, ಪ್ರಿಯಾಗೌಡ, ಸುಶ್ಮಿತಾ ಹಾಜರಿದ್ದರು.
