ಆರ್‌ ಎಸ್‌ ಎಸ್‌ ನಿಷೇಧ ನಿಮ್ಮಿಂದ ಸಾಧ್ಯವೇ: ಸುಬ್ಬಣ್ಣ ಪ್ರಶ್ನೆ

Pratheek
2 Min Read

ಪಬ್ಲಿಕ್ ಅಲರ್ಟ್

ಮೈಸೂರು: ಸಚಿವ ಪ್ರಿಯಾಂಕ ಖರ್ಗೆ ದೇಶಭಕ್ತಿಯಿಂದ ಕೂಡಿರುವ ಆರ್‌ಎಸ್‌ಎಸ್ ಅನ್ನು ಬ್ಯಾನ್ ಮಾಡುತ್ತೀವಿ ಎಂಬ ಹೇಳಿಕೆ ನೀಡಿರುವುದು ಸರಿಯಲ್ಲ. ಆರ್‌ಎಸ್‌ ಎಸ್‌ ನಿಷೇಧ ನಿಜಕ್ಕೂ ನಿಮ್ಮಿಂದ ಸಾಧ್ಯವೇ ಎಂದು ಮೈಸೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಕೆ.ಎನ್.ಸುಬ್ಬಣ್ಣ ಕಿಡಿಕಾರಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸರ್ಕಾರಿ ಸ್ಥಳಗಳಲ್ಲಿ ಆರ್‌ ಎಸ್‌ ಎಸ್‌ ಪಥ ಸಂಚಲನ ಮಾಡಬೇಡಿ ಎಂದು ಹೇಳುತ್ತಾರೆ. ಆರ್‌ಎಸ್‌ಎಸ್ ಅನ್ನು ಬ್ಯಾನ್ ಮಾಡಲು ನಿಮ್ಮಿಂದ ಸಾಧ್ಯವೇ?. ಇಂದಿರಾಗಾಂಧಿ, ಜವಹಾರ್‌ಲಾಲ್ ನೆಹರು, ಮಲ್ಲಿಕಾರ್ಜುನ ಖರ್ಗೆ ಅವರೇ ಸ್ವತಃ ಆರ್‌ಎಸ್‌ಎಸ್ ಕಚೇರಿಗೆ ಭೇಟಿ ನೀಡಿದ್ದರು ಎಂದು ತಿಳಿಸಿದರು.
ತಿಂಗಳಿಗೊಮ್ಮೆ ಅಧಿಕಾರಿಗಳ ಮೇಲೆ ದಾಳಿ ನಡೆದು ಕೋಟಿ ಕೋಟಿ ಹಣ ವಶಕ್ಕೆ ಸಿಗುತ್ತಿದೆ. ಇದು ಸರ್ಕಾರದೊಳಗೆ ನಡೆಯುತ್ತಿರುವ ಭ್ರಷ್ಟಚಾರದ ಭಾಗವಾಗಿ ಕಾಣುತ್ತಿದೆ. ಸರ್ಕಾರವೇ ಅವರನ್ನು ಭ್ರಷ್ಟಚಾರಕ್ಕೆ ಬಿಡುತ್ತಿರುವಂತಿದೆ. ಗೂಗಲ್‌ ಕಂಪನಿಯೊಂದು ಆಂದ್ರಕ್ಕೆ ಹೋಗಿದೆ. ಇಲ್ಲಿನ ಸರ್ಕಾರವನ್ನು ಉದ್ಯಮಿಯೊಬ್ಬರು ರಸ್ತೆ ಗುಂಡಿ ಮುಚ್ಚಿ ಎಂದರೆ ನೀವೇ ಗುಂಡಿ ಮುಚ್ಚಿ ಎಂಬ ಉಡಾಫೆ ಉತ್ತರ ಸರ್ಕಾರದ ಸಚಿವರು ನೀಡುವ ಮೂಲಕ ರಾಜ್ಯದ ಅಭಿವೃದ್ಧಿ ಮಾಡುವ ಉದ್ಯಮಿಗಳಿಗೆ ಅಪಮಾನ ಮಾಡುತ್ತಿರುವುದು ರಾಜ್ಯದ ಬೆಳವಣಿಗೆ ಕುಂಠಿತಗೊಳಿಸಿದೆ ಎಂದರು. 
ದೇಶ, ವಿದೇಶಗಳಲ್ಲದೇ ರಾಜ್ಯದ ನಾನಾ ಭಾಗಗಳಿಂದಲೂ ದಸರೆ ನೋಡಲು ಬರುವ ಪ್ರವಾಸಿಗರಿಗೆ ಗೋಲ್ಡ್‌ ಪಾಸ್‌ ನೀಡಿದರು. ಆದರೂ ದಸರಾ ವೀಕ್ಷಣೆಗೆ ಅವಕಾಶ ನೀಡದೇ ವಂಚಿಸಿದರು. ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ನಡೆಯುತ್ತಿಲ್ಲ. ಬದಲಿಗೆ ಜನರು ನಾನಾ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಇದನ್ನು ಮುಚ್ಚು ಮರೆ ಮಾಡಲು ಆರ್‌ಎಸ್‌ ಎಸ್‌ ಸೇರಿ ಹಲವು ಅನಗತ್ಯ ವಿಚಾರಗಳ ಚರ್ಚೆ ಮಾಡುತ್ತಾ ಐದು ವರ್ಷ ಪೂರ್ಣಗೊಳಿಸುವ ಪ್ರಯತ್ನ ಸರ್ಕಾರ ನಡೆಸುತ್ತಿದೆ ಎಂದು ತಿಳಿಸಿದರು. 
ಜಿಲ್ಲಾ ಆತ್ಮನಿರ್ಬರ ಸಂಚಾಲಕ ದಾಸಯ್ಯ ಮಾತನಾಡಿ, ಆತ್ಮನಿರ್ಬರ ಭಾರತದ ಮೂಲಕ ದೇಶ ಸ್ವಾವಲಂಬನೆಯತ್ತ ಸಾಗುತ್ತಿದೆ. ವಿದೇಶಿ ವಸ್ತುಗಳನ್ನು ಖರೀದುಸುವುದನ್ನು ಬೀಡಬೇಕು. ನಮ್ಮ ದೇಶದಲ್ಲಿ ಉತ್ಪಾದನೆಯಾದ ವಸ್ತುಗಳನ್ನು ಖರೀದಿಸಿ ಉಪಯೋಗಿಸಿದಾಗ ಮಾತ್ರ ನಮ್ಮಲ್ಲಿರುವ ಕಾರ್ಖನೆಗಳು, ನೌಕರರು ಹಾಗೂ ನಮ್ಮ ದೇಶ ಅಭಿವೃದ್ಧಿಯಾಗುತ್ತದೆ ಎಂದು ತಿಳಿಸಿದರು. ಆತ್ಮನಿರ್ಭರ ಸಂಚಾಲಕರಾದ ಶ್ರೀನಿವಾಸ್ ರೆಡ್ಡಿ, ಗುರುಸ್ವಾಮಿ, ಶರತ್ ಪುಟ್ಟಬುದ್ದಿ, ಜಿಲ್ಲಾ ವಕ್ತಾರ ದಯಾನಂದ ಪಟೇಲ್, ಜಿಲ್ಲಾ ಸಂಚಾಲಕ ಮಹದೇವಸ್ವಾಮಿ ಹಾಜರಿದ್ದರು.

ಕೋಟ್…
ದಸರಾ ಮುಗಿಯುತ್ತಿದ್ದಂತೆ ಮೈಸೂರಿನ ಹೃದಯ ಭಾಗದಲ್ಲೇ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಲಾಗಿದೆ. ಇದಕ್ಕೆಲ್ಲಾ ಕಾರಣ ರಾಜ್ಯದ ಕಾನೂನಿನ ವ್ಯವಸ್ಥೆ. ಕಾನೂನನ್ನು ಸರಿಯಾಗಿ ಜಾರಿ ಮಾಡದೇ ಕೇವಲ ಗ್ಯಾರಂಟಿ ಯೋಜನೆ ಬಗ್ಗೆ ಗಮನ ಹರಿಸುತ್ತಿರುವ ರಾಜ್ಯ ಸರ್ಕಾರ ಜನರ ಮೇಲೆ ಗಮನ ಹರಿಸುತ್ತಿಲ್ಲ.
– ಕೆ.ಎನ್.ಸುಬ್ಬಣ್ಣ, ಜಿಲ್ಲಾ ಬಿಜೆಪಿ ಅಧ್ಯಕ್ಷ

ಬಾಕ್ಸ್‌
ಮನೆ ಮನೆಗೆ ಆತ್ಮನಿರ್ಭರ ಅಭಿಯಾನ
ಸೆ.೨೫ರ ದೀನ್‌ ದಯಾಳ್‌ ಉಪಾಧ್ಯಾಯವರ ಜನ್ಮದಿನಂದು ಪ್ರಧಾನಿ ನರೇಂದ್ರಮೋದಿ ಆತ್ಮನಿರ್ಭರ ಭಾರತಕ್ಕೆ ಚಾಲನೆ ನೀಡಿದರು. ಡಿ.೨೫ರ ಅಟಲ್‌ ಬಿಹಾರಿ ವಾಜಪೇಯಿಯವರು ರಂದು ಮುಕ್ತಾಯಗೊಳ್ಳಲಿದ್ದು, ಅಲ್ಲಿಯವರೆಗೂ ಪ್ರತಿ ಮನೆ ಮನಗೆ ಆತ್ಮನಿರ್ಭರ ಭಾರತದ ಸ್ವಾವಲಂಬಿ ಕಲ್ಪನೆ ಕೊಂಡೊಯ್ಯುವುದಾಗಿ ಆತ್ಮನಿರ್ಭರ ಸಂಚಾಲಕ ಗುರುಸ್ವಾಮಿ ತಿಳಿಸಿದರು.
ದೇಶ ಸ್ವಾವಲಂಬನೆಯಾಗುವ ಜತೆಗೆ ವಿದೇಶಗಳಿಗೂ ರಫ್ತು ಮಾಡುವ ಶಕ್ತಿ ತುಂಬುವ ಯೋಜನೆಯಾಗಿದೆ. ಅಮೆರಿಕ ನಮ್ಮ ದೇಶದ ಮೇಲಿನ ವಸ್ತುಗಳಿಗೆ ಶೇ.೫೦ರಷ್ಟು ಸುಂಕ ವಿಧಿಸಿದ್ದು, ಹೀಗಾಗಿ ನಮ್ಮ ದೇಶದ ಉತ್ಪನ್ನಗಳನ್ನು ಕೊಳ್ಳಲು ನಾವು ಮೊದಲ ಆದ್ಯತೆ ನೀಡಿ ಪ್ರತಿ ಮನೆ ಮನೆಗೂ ಜಾಗೃತಿ ಮೂಡಿಸಲು ಕಾರ್ಯಕ್ರಮ ರೂಪಿಸಲಾಗಿದೆ. ಈ ಅಭಿಯಾನ ಅಂತ್ಯಗೊಳ್ಳುವುದಿಲ್ಲ. ನಿರಂತರವಾಗಿರುತ್ತದೆ. ಹಾಲಿ, ಮಾಜಿ ಜನಪ್ರತಿನಿಧಿಗಳಾದಿಯಾಗಿ ಬೂತ್‌ ಅಧ್ಯಕ್ಷರ ಮೂಲಕ  ಪ್ರತಿ ಮನೆ ಮನೆಗೂ ಕಾರ್ಯಕ್ರಮ ಕೊಂಡೊಯ್ಯಲಿದ್ದೇವೆಂದರು.

Share This Article
Leave a Comment