ಪಬ್ಲಿಕ್ ಅಲರ್ಟ್
ಮೈಸೂರು: ರಾಜ್ಯ ಒಕ್ಕಲಿಗರ ಸಂಘದ ವತಿಯಿಂದ ಅ. ೧೯ ರ ಬೆಳಗ್ಗೆ ೧೧ಕ್ಕೆ ವಿಜಯನಗರ ೧ ನೇ ಹಂತದ ಸಪ್ತಪದಿ ಕಲ್ಯಾಣ ಮಂಟಪದಲ್ಲಿ ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆಗಳಲ್ಲಿ ಶೇ. ೯೫ ಕ್ಕಿಂತ ಹೆಚ್ಚು ಅಂಕ ಗಳಿಸಿದ ಒಕ್ಕಲಿಗ ಸಮುದಾಯದ ವಿದ್ಯಾರ್ಥಿಗಳು ಹಾಗೂ ಸಮುದಾಯದ ವಿವಿಧ ಸಾಧಕರ ಸನ್ಮಾನ ಸಮಾರಂಭ ಆಯೋಜಿಸಲಾಗಿದೆ ಎಂದು ಪಾಲಿಕೆ ಮಾಜಿ ಸದಸ್ಯ ಹಾಗೂ ಸಂಘದ ನಿರ್ದೇಶಕರಾದ ಕೆ.ವಿ. ಶ್ರೀಧರ್ ತಿಳಿಸಿದರು.
ರಾಜ್ಯಒಕ್ಕಲಿಗರ ಸಂಘದ ಕಾಮಗಾರಿ ಸಮಿತಿ ಅಧ್ಯಕ್ಷ ಸಿ.ಜಿ. ಗಂಗಾಧರ್ ಮಾತನಾಡಿ, ಕೃಷ್ಣಪ್ಪ ರಂಗಮ್ಮ ಎಜುಕೇಷನ್ ಟ್ರಸ್ಟ್ ಸಹಯೋಗದೊಂದಿಗೆ ನಡೆಯುವ ಕಾರ್ಯಕ್ರಮದಲ್ಲಿ ಡಾ.ನಂಜಾವಧೂತ್ ಸ್ವಾಮೀಜಿ, ಸೋಮೇಶ್ವರ ನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಶಾಸಕ ಜಿ.ಟಿ. ದೇವೇಗೌಡ ಉದ್ಘಾಟಿಸುವರು. ಸಂಘದ ಅಧ್ಯಕ್ಷ ಬಿ. ಕೆಂಚಪ್ಪ ಅಧ್ಯಕ್ಷತೆ ವಹಿಸುವರೆಂದರು.
ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಡಾ.ಎಂ.ಬಿ. ಮಂಜೇಗೌಡ ಮಾತನಾಡಿ, ಸಾಧಕರಾದ ಡಾ.ಡಿ.ಮಾದೇಗೌಡ, ಡಾ.ಎಂ.ಎಸ್. ರಾಮೇಗೌಡ, ಕೆ.ಅರ್ಕೇಶ್, ಶ್ರೇಯಸ್, ಶಾಂತ ಮಲ್ಲಪ್ಪ, ವಿನೋದ್ ಬೈರಪ್ಪ ಅವರನ್ನು ಗೌರವಿಸಲಾಗುವುದು. ಶಾಸಕರಾದ ಕೆ.ಹರೀಶ್‌ಗೌಡ, ಜಿ.ಟಿ. ಹರೀಶ್‌ಗೌಡ ಇನ್ನಿತರರು ಅತಿಥಿಗಳಾಗಿರುವರು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ೫ ಸಾವಿರ ನಗದು, ಪಾರಿತೋಷಕ ನೀಡಲಾಗುವುದೆಂದರು. ಮುಖಂಡರಾದ ವೆಂಕಟೇಶ್‌ಗೌಡ, ಲೋಕೇಶ್‌ಗೌಡ, ಹನುಮಂತಯ್ಯ ಹಾಜರಿದ್ದರು.
