ಪಬ್ಲಿಕ್ ಅಲರ್ಟ್
ಮೈಸೂರು: ಮೈಸೂರಿನ ವಿಜಯನಗರ ಒಂದನೇ ಹಂತದಲ್ಲಿರುವ ಡಿ. ಸಂಜೀವಯ್ಯ ಮೆಮೋರಿಯಲ್ ಎಜುಕೇಷನ್ ಸೊಸೈಟಿಯ 2024-25ನೇ ಸಾಲಿನ ವಾರ್ಷಿಕ ಮಹಾಸಭೆ ನಡೆಯಿತು.
ಸೊಸೈಟಿಯ ಅಧ್ಯಕ್ಷೆ ಜಿ. ಶೀಲಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಆಡಳಿತ ಮಂಡಳಿ ನಡೆಸುತ್ತಿರುವ ಅಭಿವೃದ್ಧಿ ಕಾರ್ಯಗಳು, ಪ್ರಸಕ್ತ ಶೈಕ್ಷಣಿಕ ವರ್ಷದಿಂದ 50 ಬಾಲಕರಿಗಾಗಿ ಸುಸಜ್ಜಿತವಾದ ಉಚಿತ ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯ ಆರಂಭಿಸಿರುವುದು ಹಾಗೂ ಕಳೆದ ಸಾಲಿನಲ್ಲಿ ಹತ್ತನೇ ತರಗತಿಯಲ್ಲಿ ಶಾಲೆಯು ಉತ್ತಮ ಫಲಿತಾಂಶ ಪಡೆದಿರುವುದಕ್ಕೆ ಸೊಸೈಟಿ ಸದಸ್ಯರು ಆಡಳಿತ ಮಂಡಳಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಅಲ್ಲದೇ ಶಾಲೆಯ ಅಭಿವೃದ್ದಿಗೆ ಅಗತ್ಯವಿರುವ ನಿಧಿ ಸಂಗ್ರಹಿಸಲು ವೈಯಕ್ತಿಕ ಶ್ರಮವಹಿಸುತ್ತಿರುವ ಅಧ್ಯಕ್ಷೆ ಶೀಲಾ ಅವರ ಪ್ರಯತ್ನವನ್ನು ಅಭಿನಂದಿಸಿದ ಸೊಸೈಟಿ ಸದಸ್ಯರು, ಮುಂದಿನ ಸಾಲಿನಲ್ಲಿ ಸಂಸ್ಥೆಯು ಇಂಜಿನಿಯರಿಂಗ್ ಮತ್ತು ಇತರೆ ಪದವಿ ಕಾಲೇಜು ಪ್ರಾರಂಭಿಸಲು ಮತ್ತು 2024-25ನೇ ಸಾಲಿನ ಲೆಕ್ಕಗಳಿಗೆ ಸರ್ವಾನುಮತದ ಅನುಮೋದನೆ ನೀಡಿತು.
ಈ ವೇಳೆ ಮಾತನಾಡಿದ ಸೊಸೈಟಿ ಅಧ್ಯಕ್ಷೆ ಜಿ.ಶೀಲಾ, ಸೊಸೈಟಿ ಅಭಿವೃದ್ಧಿಗೆ ಪೂರಕವಾಗಿ ಸಹಾಯ ನೀಡಿ ಸಹಕರಿಸಿದ ಎಲ್ಲರಿಗೂ ಅಭಿನಂದಿಸುತ್ತಾ, ಮುಂದಿನ ಸಾಲಿನಿಂದ ಸಭೆ ಅನುಮತಿಸಿರುವಂತೆ ಇಂಜಿನಿಯರಿಂಗ್ ಮತ್ತು ಇತರೆ ಪದವಿ ಕಾಲೇಜುಗಳನ್ನು ಪ್ರಾರಂಭಿಸಲು ಕ್ರಮವಹಿಸುವುದರೊಂದಿಗೆ, ಸೊಸೈಟಿ ಅಭಿವೃದ್ಧಿಗೆ ಧನ ಸಹಾಯ ನಿರೀಕ್ಷಿಸುವುದಾಗಿ ತಿಳಿಸಿದರು.
ಸಭೆಯಲ್ಲಿ ಸಂಸ್ಥೆಯ ಕಾರ್ಯಧ್ಯಕ್ಷ ದಯಾನಂದಮೂರ್ತಿ, ಉಪಾಧ್ಯಕ್ಷ ಪ್ರಭು, ಕಾರ್ಯದರ್ಶಿ ನಾಗಮಲ್ಲೇಶ್ ಸೇರಿ ಇನ್ನಿತರರು ಇದ್ದರು.
