ದಿನೇಶ್‌ಕುಮಾರ್ ಬಂಧನ ಸ್ವಾಗತಾರ್ಹ: ಶ್ರೀವತ್ಸ

Pratheek
1 Min Read

ಪಬ್ಲಿಕ್ ಅಲರ್ಟ್


ಮೈಸೂರು,ಸೆ.೧೭-ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ) ಅಕ್ರಮದಲ್ಲಿ ಮಾಜಿ ಆಯುಕ್ತ ದಿನೇಶ್‌ಕುಮಾರ್ ಅವರನ್ನು ಇ.ಡಿ. ಅಧಿಕಾರಿಗಳು ಬಂಧಿಸಿರುವುದನ್ನು ಶಾಸಕ ಟಿ.ಎಸ್.ಶ್ರೀವತ್ಸ ಸ್ವಾಗತಿಸಿ, ಹಿಂದಿನ ಅಧ್ಯಕ್ಷರು ಸೇರಿದಂತೆ ಆಯುಕ್ತರು ಮತ್ತು ಅಧಿಕಾರಿಗಳ ಬಂಧನವಾಗಬೇಕು ಎಂದು ಒತ್ತಾಯಿಸಿದರು.
ನಗರದಲ್ಲಿ ಬುಧವಾರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ನಾನು ಈ ಹಿಂದೆಯೇ ಹೇಳಿದ್ದೆ. ಮುಡಾದಲ್ಲಿ ಅಕ್ರಮ ಆಗಿರೋದು ನಿಜ. ಸಾವಿರಾರು ಸೈಟುಗಳನ್ನು ಅಕ್ರಮವಾಗಿ ಹಂಚಿಕೆ ಮಾಡಲಾಗಿದೆ. ಕೇವಲ ದಿನೇಶ್‌ಕುಮಾರ್ ಅವರ ಬಂಧನವಾದರೆ ಸಾಲದು. ಇನ್ನೂ ಅನೇಕರ ವಿರುದ್ಧ ತನಿಖೆಯಾಗಬೇಕು. ಅಲ್ಲಿಯವರೆಗೂ ನಮ್ಮ ಹೋರಾಟ ಮುಂದುವರೆಯಲಿದೆ ಎಂದರು.
ದರ್ಗಾ ನಿರ್ಮಾಣಕ್ಕೆ ಆಕ್ಷೇಪ: ಗಾಡಿ ಚೌಕದ ಆವರಣದಲ್ಲಿ ಈಗಾಗಲೇ ದರ್ಗಾವಿದ್ದರೂ ಮತ್ತೊಂದು ದರ್ಗಾ ನಿರ್ಮಾಣಕ್ಕೆ ನೋಟಿಫಿಕೇಶನ್ ನೀಡಲಾಗಿದೆ. ಇರುವ ದರ್ಗಾದ ಬಗ್ಗೆ ನಾವು ಪ್ರಶ್ನೆ ಮಾಡುವುದಿಲ್ಲ. ದರ್ಗಾ ಇದ್ದರೂ ಇನ್ನೊಂದು ದರ್ಗಾ ಯಾಕೆ ಅನ್ನೋದು ನಮ್ಮ ಪ್ರಶ್ನೆ ಎಂದರು.
ಅಲ್ಲಿ ಆಟೋಗಳನ್ನು ನಿಲ್ಲಿಸುತ್ತಾರೆ ಬೆಂಕಿ ಹಚ್ಚಿ ನಮ್ಮ ಮೇಲೆ ಹಾಕಿದರೆ ಯಾರು ಹೊಣೆ? ಈ ಕೂಡಲೇ ಅಲ್ಲಿ ಇರುವ ಎಲ್ಲವನ್ನೂ ಖಾಲಿ ಮಾಡಿಸಬೇಕು. ಒಂದು ಧಾರ್ಮಿಕ ಕೇಂದ್ರವಿದೆ. ಅದನ್ನು ಬಿಟ್ಟು ಮಿಕ್ಕ ಏನು ಕೂಡ ಅಲ್ಲಿರೋದು ಬೇಡ. ಈ ಬಗ್ಗೆ ಪಾಲಿಕೆ ಆಯುಕ್ತರಿಗೆ ದೂರು ನೀಡುವುದಾಗಿ ಹೇಳಿದರು.

Share This Article
Leave a Comment