ಪಬ್ಲಿಲ್ ಅಲರ್ಟ್
ಹೊಸಕೋಟೆ: ಹೊಸಕೋಟೆ ತಾಲ್ಲೂಕಿನಲ್ಲಿ ದಸರ ಪ್ರಯುಕ್ತ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ಮತ್ತು ಅಲಂಕಾರಗಳನ್ನು ಮಾಡಲಾಗಿತ್ತು
ಹೊಸಕೋಟೆ ನಗರದ ಕೋಟೆಯಲ್ಲಿರುವ ಖಿಲ್ಲೇ ಆಂಜಿನೇಯಸ್ವಾಮಿಗೆ ಬೆಣ್ಣೆ ಅಲಂಕಾರ, ಕುರುಬರಹಳ್ಳಿ ಗ್ರಾಮದಲ್ಲಿ ದಸರ ಮೂರನೇ ದಿನವಾದ ಇಂದು ದೂಡ್ಡಮ್ಮನವರಿಗೆ ವಿಶೇಷವಾಗಿ ಹತ್ತಿಯಿಂದ ಅಲಂಕಾರ ಮತ್ತು ಹೂವ್ವಿನ ಅಲಂಕಾರ ಮಾಡಲಾಗಿತ್ತು.
ಹೊಸಕೋಟೆಯಲ್ಲಿ ದುರ್ಗಾದೇವಿ ಮೇರವಣಿಗೆಯನ್ನು ನಗರದ ಪ್ರಮುಖ ಬೀದಿಗಳಲ್ಲಿ ಮಾಡಲಾಗಿತ್ತು. ಹೊಸಕೋಟೆ ನಗರದಲ್ಲಿ ದರಸ ಪ್ರಯುಕ್ತ ಗಣೇಶೋತ್ಸವ ಮೇರವಣಿಗೆ ಮಾಡಲಾಯಿತು.
೬೦ ಲಕ್ಷಗಳ ಅಭಿವೃದ್ಧಿ ಕಾಮಗಾರಿಗಳಿಗೆ ಶರತ್ ಬಚ್ಚೇಗೌಡ ಚಾಲನೆ
ಸಂಜೆಎಕ್ಸ್ ಪ್ರೆಸ್ ಸುದ್ದಿ
ಹೊಸಕೋಟೆ,ಸೆ.೨೯- ಹೊಸಕೋಟೆ ತಾಲ್ಲೂಕಿನ ಹರಳುರು ಗ್ರಾಮದಲ್ಲಿ ಮುಖ್ಯ ಮಂತ್ರಿಗಳ ವಿಶೇಷ ಅನುದಾನ ೩೦-೫೪ ಅಡಿಯಲ್ಲಿ ೨೦ ಲಕ್ಷಗಳ ವೆಚ್ಚದಲ್ಲಿ ಹರಳೂರಲ್ಲಿ ಸಿಸಿ ರಸ್ತೆ ಕಾಮಗಾರಿ,ಸೂಲೂರು ಗ್ರಾಮದಲ್ಲಿ ೧೦ ಲಕ್ಷ, ದೂಡ್ಡತಗ್ಗಲಿ ಗ್ರಾಮದಲ್ಲಿ ಶಾಸಕರ ವಿಶೇಷ ಅನುದಾನಡಿಯಲ್ಲಿ ಲೆಕ್ಕ ಶಿರ್ಷಿಕೆ ಎಸ್.ಸಿ.ಪಿ,ಟಿ.ಎಸ್.ಪಿ ೧೦ ಲಕ್ಷಗಳ ಸಿಸಿ ರಸ್ತೆ ಮತ್ತು ಹೈಮಾಸ್ಕ್ ದೀಪಗಳ ಅಭಿವೃದ್ಧಿ ಕಾಮಗಾರಿಗೆ ಶಾಸಕರು ಹಾಗೂ ಕಿಯೋನಿಕ್ಸ್ ಅಧ್ಯಕ್ಷರಾದ ಶರತ್ ಬಚ್ಚೇಗೌಡ ಭೂಮಿ ಪೂಜೆಯನ್ನು ನೆರವೇರಿಸಿದರು.



ಕಾರ್ಯಕ್ರಮದಲ್ಲಿ ಜಡಿಗೇನಹಳ್ಳಿ ರೇಷ್ಮೆ ಬೆಳಗಾರರ ಸಂಘದ ಅಧ್ಯಕ್ಷ ಕೋಡಿಹಳ್ಳಿ ಸುರೇಶ್,ಬಿ.ಎಂ.ಆರ್.ಡಿ ನಿರ್ದೇಶಕ ಶಿವಕುಮಾರ್,ಜಡಿಗೇನಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ವೆಂಕಟೇಗೌಡ, ಶಂಕರನಾರಾಯಣ,ಮುನಿರಾಜು ಹೆಗ್ಗಡೆ,ಹೆಚ್.ಎಂ ರವಿ,ಮಾಜಿ ಉಪಾಧ್ಯಕ್ಷ ರವಿ, ವರದರಾಜು, ನಂಜುಂಡೇಗೌಡ, ಮುನಿಯಪ್ಪ, ಹನುಮಂತೇಗೌಡ, ನಾರಾಯಣಗೌಡ, ಯೇಸುಕೃಷ್ಣ, ಸೂಲೂರು ರಮೇಶ್, ಭೂಮಂಜೂರಾತಿ ಸದಸ್ಯ ನಂಜಪ್ಪ, ಅಪ್ಪಸಂದ್ರ ನಾರಾಯಣಸ್ವಾಮಿ, ಮುನಿನಾರಾಯಣ, ಮುನಿರಾಜು ಇತರರು ಹಾಜರಿದ್ದರು.
