ರಕ್ತದಾನಿಗಳ ಸತ್ಕರಿಸಿದ ಜೀವದಾರ ರಕ್ತ ನಿಧಿ ಕೇಂದ್ರ

Pratheek
1 Min Read

ಪಬ್ಲಿಕ್ ಅಲರ್ಟ್

ಮೈಸೂರು: ನ್ಯೂ ಸಯ್ಯಾಜಿರಾವ್ ರಸ್ತೆಯಲ್ಲಿರುವ ಜೀವದಾರ ರಕ್ತ ನಿಧಿ ಕೇಂದ್ರದ ಆವರಣದಲ್ಲಿ ಬ್ಲಡ್ ಆನ್ ಕಾಲ್ ಕ್ಲಬ್ ಸಹಯೋಗದೊಂದಿಗೆ ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ 15 ಬಾರಿ ಮೇಲ್ಪಟ್ಟು ಸ್ವಯಂ ಪ್ರೇರಿತ ರಕ್ತದಾನ ಮಾಡಿದ ರಕ್ತದಾನಿಗಳಾದ ನವೀನ್ ಕಾಂತಿಲಾಲ್ ಸಂದೇಶ, ವೈ.ಎಸ್.ಮಂಜುನಾಥ್, ಯಶ್ವಂತ್, ರಶ್ಮಿ ಶರ್ಮಾ, ಪರಾಶ್ರಮ ಬೋರನ,  ರಾಹುಲ್ ಕೊಠಾರಿ, ಮೀನಾಕ್ಷಿ ಕೊಠಾರಿ, ಮನೀಶ್ ಜೈನ್, ವನಿತಾ ಡಕ್,  ಮುಕೇಶ್ ರವರನ್ನು ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ 100ಕ್ಕೂ ಹೆಚ್ಚು ಬಾರಿ  ಸ್ವಯಂ ಪ್ರೇರಿತ ರಕ್ತದಾನ ಮಾಡಿದ ದೇವೇಂದ್ರ ಪರಿಹಾರಿಯ  ರವರಿಗೆ ವಿಶೇಷವಾಗಿ ಸನ್ಮಾನಿಸಲಾಯಿತು. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಜೀವದಾರ ರಕ್ತನಿಧಿ ಕೇಂದ್ರದ ನಿರ್ದೇಶಕ  ಗಿರೀಶ್, ರಕ್ತದಾನದಿಂದ ಶರೀರದಲ್ಲಿ ಚೈತನ್ಯ ಶಕ್ತಿಯು ಹೆಚ್ಚಾಗಿ ದೇಹದಲ್ಲಿ ಆರೋಗ್ಯಕರ ಬದಲಾವಣೆಗಳನ್ನು ಕಾಣಬಹುದು. ರಕ್ತದಾನದ ಬಗ್ಗೆ ಸುತ್ತಲಿನ ಗೆಳೆಯರಿಗೆ ತಿಳಿಸಿ ಅವರನ್ನೂ ಇಂತಹ ಉತ್ತಮ ಕಾರ್ಯಗಳಲ್ಲಿ ಭಾಗಿಯಾಗಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ’ ಎಂದರು.

ರಕ್ತದಾನದ ಬಗ್ಗೆ ಎಲ್ಲರೂ ತಿಳಿದುಕೊಳ್ಳಬೇಕು. ರಕ್ತ ಅವಶ್ಯಕವಾದಾಗ ಹುಡುಕುವುದಕ್ಕಿಂತ ಮುಂಚೆಯೇ ಸಾಕಷ್ಟು ರಕ್ತವನ್ನು ಸಂಗ್ರಹಿಸಿಟ್ಟುಕೊಳ್ಳಲು ಕ್ರಮ ವಹಿಸಿಕೊಳ್ಳಬೇಕು. ಜಿಲ್ಲೆಯಲ್ಲಿ ರಕ್ತದ ಕೊರತೆಯು ಹೆಚ್ಚಾಗಿರುವುದರಿಂದ ರಕ್ತದಾನದ ಅವಶ್ಯಕತೆಯಿದೆ. ದಾನಿಗಳು ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡುವುದರಿಂದ ರಕ್ತದ ಕೊರತೆಯನ್ನು ಸಾಧ್ಯವಾದ ಮಟ್ಟಿಗೆ ನಿಭಾಯಿಸಬಹುದು’ ಎಂದರು.
ಈ ಸಂದರ್ಭದಲ್ಲಿ ಕೆಎಂಪಿಕೆ ಟ್ರಸ್ಟ್  ಅಧ್ಯಕ್ಷ ವಿಕ್ರಮ ಅಯ್ಯಂಗಾರ್, ಬ್ಲಡ್ ಆನ್ ಕಾಲ್ ಕ್ಲಬ್ ಮೈಸೂರು ದೇವೇಂದ್ರ ಪರಿಹಾರಿಯ, ಆನಂದ್ ಮಾಂದೋಟ್,  ಮಹಾವೀರ ಜೈನ,  ಸಪ್ನ, ಮಮತಾ,  ಸದಾಶಿವ್ ಸೇರಿ ಇನ್ನಿತರರು ಹಾಜರಿದ್ದರು.

Share This Article
Leave a Comment