ಮಾದಿಗರಿಗೆ ಅನ್ಯಾಯವಾದರೇ ಸಹಿಸುವುದಿಲ್ಲ, ಉಗ್ರ ಹೋರಾಟಕ್ಕೂ ಸಿದ್ದ

Pratheek
2 Min Read

ಪಬ್ಲಿಕ್ ಅಲರ್ಟ್


ಹೊಸಕೋಟೆ,ಅ.13- ರಾಜ್ಯದಲ್ಲಿ ಮಾದಿಗರ ಸಂಖ್ಯೆ ಹೆಚ್ಚಿದ್ದು, ೪೦ ವರ್ಷಗಳ ಹೋರಾಟದ ಫಲವಾಗಿ ಒಳಮೀಸಲು ಸಿಕ್ಕಿದೆ.ಇದರ ಅನುಷ್ಠಾನವೊಂದೇ ನಮ್ಮ ಮುಖ್ಯ ಗುರಿಯಾಗಿದೆ.ರಾಜ್ಯದಲ್ಲಿ ಮಾದಿಗರಿಗೆ ಅನ್ಯಾಯವಾದರೇ ಸಹಿಸುವುದಿಲ್ಲ.ಎಲ್ಲ ಹೋರಾಟಕ್ಕೂ ಸಿದ್ದ ಎಂದು ಮಾಜಿ ಸಚಿವ ಹೆಚ್.ಆಂಜಿನೇಯ ಹೇಳಿದರು.

ಹೊಸಕೋಟೆ ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ಸಾಮಾಜಿಕ ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆಯ ಬಗ್ಗೆ ಜಾಗೃತಿ ಮೂಡಿಸುವ ಕರ‍್ಯಕ್ರಮದಲ್ಲಿ ಅವರು ಮಾತನಾಡಿ, ಈ ಸಮೀಕ್ಷೆಯಲ್ಲಿ ಪ್ರತಿಯೊಬ್ಬರು ಮಾದಿಗ ಎಂದು ನಮೂದಿಸುವ ಮೂಲಕ ರಾಜ್ಯದಲ್ಲಿ ನಮ್ಮ ಸಂಖ್ಯೆಯನ್ನು ಕಾಪಾಡಿಕೊಳ್ಳಬೇಕಿದೆ. ಇನ್ನೂ ಕೆಲವೇ ದಿನಗಳಲ್ಲಿ ಉದ್ಯೋಗದಲ್ಲಿ ಮೀಸಲು ನಿಗಧಿಯಾಗಲಿದೆ. ಈ ಸಮುದಾಯದವರಿಗೆ ಅನ್ಯಾಯವಾಗಲು ಬಿಡುವುದಿಲ್ಲ.ಅಂಥ ಸಂದರ್ಭ ಬಂದಲ್ಲಿ ಉಗ್ರ ಹೋರಾಟಕ್ಕೆ ಸಿದ್ದ.ಜನಾಂಗಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡಿದ್ದು, ಒಳಮೀಸಲು ಜಾರಿಯೊಂದೇ ನಮ್ಮ ಗುರಿಯಾಗಿದೆ.ಈ ಸಮೀಕ್ಷೆಯಲ್ಲಿ ತಪ್ಪದೆ ಮಾದಿಗ ಎಂದು ನಮೂದಿಸಲು ಮುಖಂಡರು ಗ್ರಾಮಗಳಲ್ಲಿರುವ ಜನರಿಗೆ ಅರಿವು ಮೂಡಿಸಬೇಕು ಎಂದರು.

ಕೇಂದ್ರ ಮಾಜಿ ಸಚಿವ ಎ.ನಾರಾಯಣಸ್ವಾಮಿ ಮಾತನಾಡಿ, ಯಾವ ಶಿಕ್ಷಣ ಕೊಡಿಸಿದರೇ ಈ ಸಮುದಾಯದ ಮಕ್ಕಳು ಸ್ವಾವಲಂಬಿ ಮತ್ತು ಆರ್ಥಿಕವಾಗಿ ಸದೃಡರಾಗುತ್ತಾರೆ ಎಂಬುದನ್ನು ಸಮುದಾಯದವರು ಚಿಂತನೆ ಮಾಡಬೇಕಿದೆ. ತಾಂತ್ರಿಕ ಶಿಕ್ಷಣ ಪಡೆದವರಿಗೆ ಹೆಚ್ಚಿನ ಉದ್ಯೋಗವಕಾಶಗಳು ಸಿಗುತ್ತವೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ರಾಜ್ಯದಲ್ಲಿ ೫೦ ಲಕ್ಷ ಇರುವ ಮಾದಿಗರ ರಾಜಕೀಯವಾಗಿ ತಮ್ಮ ಸ್ಥಾನಮಾನಗಳಿಗಾಗಿ ತೊಡೆ ತಟ್ಟಲಿಲ್ಲ. ಮುಂಬರುವ ತಾಪಂ,ಜಿಪಂ ಚುನಾವಣೆಯಲ್ಲಿ ಮೀಸಲು ಜಾರಿಯಾಗಬೇಕು ಎಂದರು

ಪಾವಗಡ ಮಾಜಿ ಶಾಸಕ ತಿಮ್ಮರಾಯಪ್ಪ ಮಾತನಾಡಿ, ಮಾದಿಗ ಸಮುದಾಯದವರು ಮೀಸಲು ಅನ್ವಯ ಜಾತಿ ಪ್ರಮಾಣ ಪತ್ರಗಳನ್ನು ಪಡೆಯುವಾಗ ಎಚ್ಚರಿಕೆ ವಹಿಸಬೇಕು.ಕಳೆದ ಕೆಲವು ವರ್ಷಗಳಿಂದ ಈ ಸಮುದಾಯ ಸಾಕಷ್ಟು ನೋವು ಅನುಭವಿಸಿದ್ದು,ಮುಂದಿನ ದಿನಗಳಲ್ಲಿ ಒಳ ಮೀಸಲು ಜಾರಿಯಿಂದ ಅನುಕೂಲವಾಗಲಿದೆ.ಶಿಕ್ಷಣದಿಂದ ಸಮುದಾಯದ ಮಕ್ಕಳು ವಂಚಿತರಾಗದಂತೆ ಜಾಗೃತಿವಹಿಸಬೇಕು ಎಂದರು

ಮಾಜಿ ಸಂಸದ ಚಂದ್ರಪ್ಪ ಮಾತನಾಡಿ, ಮಾದಿಗ ಸಮಾಜ ಹಿಂದುಳಿದಿದ್ದು,ಆನೇಕ ನಾಯಕರ ಹೋರಾಟದ ಫಲವಾಗಿ ಮೀಸಲು ಜಾರಿಯಾಗಿದೆ. ಇನ್ನೂ ಶೇ.೧ ರಷ್ಟು ನಮ್ಮಗೆ ಒಳ ಮೀಸಲು ಹೆಚ್ಚಾಗಬೇಕು. ಇದಕ್ಕೆ ಮುಂದಿನ ದಿನಗಳಲ್ಲಿ ಹೋರಾಟ ರೂಪಿಸಲಾಗುವುದು.ಸಮೀಕ್ಷೆಯಲ್ಲಿ ಮಾದಿಗ ಎಂದು ನಮೂದಿಸುವ ಬಗ್ಗೆ ಎಲ್ಲಡೆ ಮುಖಂಡರು ಜಾಗೃತಿ ಮೂಡಿಸಬೇಕು ಎಂದರು

ಮಾದಾರ ಮಹಾಸಭಾ ಅಧ್ಯಕ್ಷ ಡಾ.ಹೆಚ್.ಎಂ ಸುಬ್ಬರಾಜ್,ಜಾಗೃತಿ ಸಮಿತಿಯ ವಿಜಯಕುಮಾರ್, ಚಿಕ್ಕನಲ್ಲಾಳ ನರಸಿಂಹಯ್ಯ,ದೇವನಹಳ್ಳಿ ತಾಪಂ ಮಾಜಿ ಅಧ್ಯಕ್ಷ ಬಿ.ಕೆ ಶಿವಪ್ಪ, ,ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಶಿವಾನಂದ್,ಹಿರಿಯ ಮುಖಂಡ ಗುರುಪ್ಪ,ಡಿ.ಎಂ ಮುನಿರಾಜ್,ಗುಟ್ಟಹಳ್ಳಿ ನಾಗರಾಜ್, ಹೆಚ್.ವಿ ವೆಂಕಟೇಶ್,ಕAಬಳೀಪುರ ರಮೇಶ್,ಸಿದ್ದಾರ್ಥ ನಗರ ನರಸಿಂಹ,ಹರೀಶ್ ಚಕ್ರವರ್ತಿ,ರಮೇಶ್ ಚಕ್ರವರ್ತಿ,ದೊಡ್ಡಗಟ್ಟಿನೆಬ್ಬೆ ಗ್ರಾಪಂ ಅಧ್ಯಕ್ಷ ಸುರೇಶ್, ಸೂಪರ್ ನಾರಾಯಣಸ್ವಾಮಿ.ಮಂಜುಸರ‍್ಯ ಸೇರಿ ಇತರರು ಭಾಗವಹಿಸಿದ್ದರು.

Share This Article
Leave a Comment