ಅಧ್ಯಕ್ಷರಿಂದ ಅನಗತ್ಯ ಹೇಳಿಕೆ ಆರೋಪ

Pratheek
1 Min Read

ಪಬ್ಲಿಕ್ ಅಲರ್ಟ್

ಮೈಸೂರು: ಎಚ್.ಡಿ. ಕೋಟೆ, ಸರಗೂರಿನ ಕಾಳಿದಾಸ ಜನಾಂಗದ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರನ್ನಾಗಿ ಕಳೆದ ಫೆ. ೨೫ ರಂದು ನಡೆದ ಸಂಘದ ವಿಶೇಷ ಸರ್ವ ಸದಸ್ಯರ ಸಭೆ ತಮ್ಮನ್ನು ಆಯ್ಕೆ ಮಾಡಿದೆ. ಇದೇ ವೇಳೆ ಹಿಂದಿನ ಅಧ್ಯಕ್ಷರ ಮೇಲೆ ಕೆಲ ಆರೋಪಗಳಿದ್ದು, ಇದಕ್ಕೆ ಸಂಬಂಧಿಸಿದಂತೆ ಪ್ರಕರಣ ನ್ಯಾಯಾಲಯದಲ್ಲಿದೆ. ಹೀಗಾಗಿ ಹೀಗಿದ್ದರೂ ಉಚ್ಚಾಟಿತ ಅಧ್ಯಕ್ಷ ಈ ಕುರಿತು ಅನಗತ್ಯ ಹೇಳಿಕೆ ನೀಡಿ ಗೊಂದಲ ಸೃಷ್ಟಿಸುತ್ತಿದ್ದಾರೆಂದು ಅಧ್ಯಕ್ಷ ಕೆ.ಎಸ್. ಮಾಲೇಗೌಡ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಡನೆ ಮಾತನಾಡಿ, ಈ ಹಿಂದಿನ ಅಧ್ಯಕ್ಷರು ಸಂಘದ ಹಣ ದುರುಪಯೋಗ ಪಡಿಸಿಕೊಂಡಿದ್ದಾರೆ. ಕನಕ ಭವನವನ್ನು ಸಾರ್ವಜನಿಕರಿಗೆ ನೀಡಿದುದರಿಂದ ಬಂದ ಹಣ ಸಂಘದ ಖಾತೆಗೆ ಜಮಾ ಮಾಡಿಲ್ಲ ಎಂಬ ಆರೋಪಗಳಿವೆ. ಈ ಕುರಿತು ಸಹಕಾರ ಇಲಾಖೆಗೆ ದೂರು ಸಹಾ ನೀಡಿದ್ದು, ನ್ಯಾಯಾಲಯದಲ್ಲಿಯೂ ಪ್ರಕರಣ ಬಾಕಿ ಇದೆ. ಹೀಗಿದ್ದರೂ ಅವರು ಗೊಂದಲ ಸೃಷ್ಟಿಸುವ ಹೇಳಿಕೆ ನೀಡುತ್ತಿದ್ದಾರೆಂದು ಆರೋಪಿಸಿದರು.
ನ್ಯಾಯಾಲಯದ ಆದೇಶ ನಿರೀಕ್ಷಿಸಿದ್ದು, ಈ ಬಾರಿಯ ಕನಕ ಜಯಂತಿ ತಾಲೂಕು ಆಡಳಿತ ಸರಳವಾಗಿ ಆಚರಿಸಲು ಹಾಗೂ ಆದೇಶ ಬಂದ ನಂತರ ಸಂಘದ ವತಿಯಿಂದ ವಿಜೃಂಭಣೆಯಿAದ ಆಚರಿಸಲು ನಿರ್ಧರಿಸಲಾಗಿದೆ ಎಂದರು.
ಇನ್ನಿತರ ಪದಾಧಿಕಾರಿಗಳಾದ ಯತೀಶ್‌ಕುಮಾರ್, ಕರಿಯಪ್ಪಗೌಡ, ಶಿರಮಳ್ಳಿ ಚಿಕ್ಕಣ್ಣ, ಕೆ.ಸಿ. ಮಹದೇವ ಹಾಗೂ ರಾಜಪ್ಪ ಮೊದಲಾದವರಿದ್ದರು.

Share This Article
Leave a Comment