ಮತಗಳತನದಿಂದ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ: ಡಾ.ಯತೀಂದ್ರ ಸಿದ್ದರಾಮಯ್ಯ

Pratheek
3 Min Read

ಪಬ್ಲಿಕ್ ಅಲರ್ಟ್


ಮೈಸೂರು: ಮತಗಳತನ ಆಗದಿದ್ದರೆ ಕೇಂದ್ರದಲ್ಲಿ ನಮ್ಮ ಒಕ್ಕೂಟದ ಪಕ್ಷವೇ ಅಧಿಕಾರಕ್ಕೆ ಬರುತ್ತಿತ್ತು. ಬಿಜೆಪಿಯವರ ಈ ಮತಗಳತನದಿಂದ ನಾವು ಸೋತಿದ್ದೇವೆ. ಈ ಬಗ್ಗೆ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಅರಿವು ಮೂಡಿಸಿ ಜಾಗೃತರಾಗಬೇಕಿದೆ ಎಂದು ವಿಧಾನಪರಿಷತ್ ಸದಸ್ಯ  ಡಾ.ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.

ವರುಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ನ ತಗಡೂರು ಬ್ಲಾಕ್ ಕಾಂಗ್ರೆಸ್ ನಿಂದ ಆಯೋಜಿಸಿದ್ದ
ವೋಟ್ ಚೋರಿ(ಮತಗಳ್ಳತನ) ವಿರೋಧಿಸಿ ಸಹಿ ಸಂಗ್ರಹ ಅಭಿಯಾನದಲ್ಲಿ ಅವರು ಮಾತನಾಡಿದರು. ಮತಗಳ್ಳತನ ತಡೆಯುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ. ಚುನಾವಣಾ ಆಯೋಗ ಬಿಜೆಪಿ ಕೈಗೊಂಬೆಯಾಗಿ ಕೆಲಸ ಮಾಡುತ್ತಿದೆ. ಮತಗಳ್ಳತನದಿಂದ ಸಾಕಷ್ಟು ಸಮಸ್ಯೆಯಾಗಿದೆ ಎಂದರು.
ರಾಜ್ಯದಲ್ಲಿಯೂ ಕೂಡ ಮತಗಳ್ಳತನವಾಗಿದ್ದು,  ರಾಹುಲ್ ಗಾಂಧಿ ಅವರು ಬೆಂಗಳೂರಿನಲ್ಲಿ ಸಾಕ್ಷಿ ಸಮೇತವಾಗಿ ತೋರಿಸಿದ್ದಾರೆ. ಸಂವಿಧಾನ ಪ್ರಜಾಪ್ರಭುತ್ವ ಉಳಿಯಬೇಕಾದರೆ ನಾವು ಜಾಗೃತರಾಗಿ ಪ್ರತಿ ಗ್ರಾಮದಲ್ಲೂ ಬೂತ್ ಮಠದಲ್ಲಿ ಮತದಾರರ ನೋಂದಣಿಯನ್ನು ಮಾಡಿಸುವ ಮೂಲಕ ಪ್ರಜಾಪ್ರಭುತ್ವವನ್ನು ಉಳಿಸುವ ಮಹತ್ತರವಾದ ಈ ಒಂದು ಕಾರ್ಯಕ್ಕೆ ತಾವೆಲ್ಲರೂ ಕೈಜೋಡಿಸಬೇಕು ಎಂದು ಪಕ್ಷದ ಕಾರ್ಯಕರ್ತರಿಗೆ ತಿಳಿಸಿದರು.
ಸಂವಿಧಾನವನ್ನೇ ಬದಲಾವಣೆ ಮಾಡಬೇಕು, ವಾಮ ಮಾರ್ಗದಿಂದ ಅಧಿಕಾರಕ್ಕೆ ಬರಬೇಕೆಂಬ ಉದ್ದೇಶದಿಂದ ಬಿಜೆಪಿ ಮತಗಳ್ಳತನ ಮಾಡುತ್ತಿದೆ ಎಂದು ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದರು.
ಬಿಜೆಪಿ ಸೇರಿ ಕೋಮುವಾದಿ ಪಕ್ಷಗಳು ದೇಶದಲ್ಲಿ ಸರ್ವಾಧಿಕಾರಿ ಅಧಿಕಾರಕ್ಕೋಸ್ಕರ ಆಯೋಗದ ಮೂಲಕ ನಡೆಸುತ್ತಿರುವ ಮತಗಳ್ಳತನ ನಿಲ್ಲಬೇಕು. ಚುನಾವಣಾ ಆಯೋಗ ನಿಷ್ಪಕ್ಷಪಾತವಾಗಿ ಪಾರದರ್ಶಕವಾಗಿ ಚುನಾವಣೆಗಳನ್ನು ನಡೆಸಬೇಕೆಂಬ ಉದ್ದೇಶದಿಂದ ಜನಜಾಗೃತಿಯನ್ನು ಮೂಡಿಸಲು ಕಾಂಗ್ರೆಸ್ ದೇಶದಾದ್ಯಂತ ಓಟ್ ಕಳುವಿನ (ಚೋರಿ) ವಿರುದ್ಧ ಚಳುವಳಿ ಮಾದರಿಯಲ್ಲಿ ಸಹಿ ಸಂಗ್ರಹ ಅಭಿಯಾನವನ್ನು ನಡೆಸುತ್ತಿದೆ ಎಂದರು.
ಮತಗಳವು ಮುಂದುವರೆದಲ್ಲಿ ಪ್ರಜಾಪ್ರಭುತ್ವ ಇರಲ್ಲ ಎಂಬುದನ್ನು ಮನವರಿಕೆ ಮಾಡಿಕೊಟ್ಟು, ಸಾರ್ವತ್ರಿಕ ಚುನಾವಣೆಗಳಲ್ಲಿ ಪ್ರಜಾಪ್ರಭುತ್ವ ಗೆಲ್ಲಬೇಕು, ಉಳಿಯಬೇಕು, ಆಳ್ವಿಕೆ ನಡೆಸಬೇಕು ಎಂಬ ಸಂದೇಶವನ್ನು ರಾಷ್ಟ್ರದಾದ್ಯಂತ ನೀಡಲಿಕ್ಕೆ ಕಾಂಗ್ರೆಸ್ ಪಕ್ಷವು ಜನಂದೋಲವನ್ನು ಆರಂಭಿಸಿದೆ ಎಂದರು.
ಮತಗಳ್ಳತನದ ಮೂಲಕ ಜನಾದೇಶ ಕಗ್ಗೊಲೆಯಾಗುತ್ತಿದೆ. ಇಂತಹ ಕೃತ್ಯದ ವಿರುದ್ಧ ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರು ಜನಜಾಗೃತಿಯ ಚಳುವಳಿ ನಡೆಸುತ್ತಿದ್ದಾರೆ. ಸಾಂವಿಧಾನಿಕ ಸ್ವಾಯತ್ತ ಸಂಸ್ಥೆಯಾಗಿರುವ ಚುನಾವಣಾ ಆಯೋಗವನ್ನು ಪ್ರತಿಯೊಬ್ಬ ಮತದಾರರು ತಮ್ಮ ಮತದ ಹಕ್ಕನ್ನು ಕದಿಯಲು, ಕಸಿಯಲು ಅವಕಾಶ ನೀಡದಂತೆ ಎಚ್ಚರಿಸಬೇಕು. ಅದಕ್ಕಾಗಿ ಜಾಗೃತಿ ಮೂಡಿಸಲು ಮತದಾರರ ಹಕ್ಕುಗಳಿಗಾಗಿ ಸಹಿ ಸಂಗ್ರಹಣೆ ಅಭಿಯಾನವನ್ನು ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ. ನಮ್ಮ ವರುಣ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 75ರಿಂದ ಒಂದು ಲಕ್ಷದವರೆಗೆ ಇದರ ವಿರುದ್ಧ ಮತದಾರರ ನೋಂದಣಿ ಮಾಡಿಸಬೇಕು ಮಾಡಿಸುವ ಗುರಿ ನಮ್ಮದಾಗಿರಬೇಕು ಎಂದರು
ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ರಾಜ್ಯ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಸ್ ಸಿ ಬಸವರಾಜು ರಾಜ್ಯ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ  ಹಾಡ್ಯ ರಂಗಸ್ವಾಮಿ, ರಮೇಶ್ ಮುದ್ದೇಗೌಡ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮಂಜುಳಾ ಮಂಜುನಾಥ್, ಸುಧಾ ಮಾದೇವಯ್ಯ,  ಬೊಕ್ಕಹಳ್ಳಿ ಸೋಮ ಸುಂದರ್, ಜಿಲ್ಲಾ ಕಾಂಗ್ರೆಸ್ ಕಮಿಟಿ ಪ್ರಧಾನ ಕಾರ್ಯದರ್ಶಿ ಎಂಸಿ ಹುಂಡಿ ಶಿವಪ್ರಸಾದ್ ತಾಲೂಕು ಪಂಚಾಯತಿ ಮಾಯಿ ಸದಸ್ಯ ನಂಜುಂಡೇಗೌಡ ಬಿಳಿಗೆರೆ ರವಿ ಜೈಶೀಲ, ಬುಂಡೆಗೌಡ,  ಹೆಬ್ಬೆರಾಜು, ಬಿಳಿಗಿಳಿ ಕುಮಾರ್ ಪುಟ್ಟಸ್ವಾಮಿ, ಸುತ್ತೂರು ಸೋಮಣ್ಣ, ಎಪಿಎಂಸಿ ಮಾಜಿ ಉಪಾಧ್ಯಕ್ಷ ತಗಡೂರು ಆರ್ ಮಹದೇವ್ ಹೊಸಕೋಟೆ ಬಸವರಾಜು, ರಮೇಶ, ಪ್ರಕಾಶ, , ಆರೋಪುರ ಕುಮಾರ, ಅಶೋಕ್, ಬುಕ್ಕಳ್ಳಿ ದೊರೆ ಸ್ವಾಮಿ, ಹುಳಿಮಾವು ನಟರಾಜ್, ದಕ್ಷಿಣ ಮೂರ್ತಿ ಚಿನ್ನಂಬಳ್ಳಿ ಸಿ ಆರ್ ಮಹದೇವ್, ಕೆಎಸ್ ಹುಂಡಿ ನಂಜಯ್ಯ , ಹೆಜ್ಜೆಗೆ ಗಿರೀಶ್, ಬಸವರಾಜ್. ತಾಂಡವಪುರದ ರವಿಕುಮಾರ್ ಗ್ಯಾರಂಟಿ ಯೋಜನೆಗಳ ಸಮಿತಿಯ ಸದಸ್ಯ ರವಿ ಮುನಿಯಪ್ಪ, ನಗರ್ಲೆ ನಾರಾಯಣ ನಾಯ್ಕ, ಮನು ಅಲ್ತಾಫ್ ಪಾಸ್, ಸುತ್ತೂರು ರವಿಕುಮಾರ್, ನಾಡನಹಳ್ಳಿ ರವಿ,  ಬುಗುತ್ಗಳ್ಳಿ ಮಣಿ ಕಿರುಗುಂದ ಶಿವ ನಾಗಮಲ್ಲಿಪುರ ಪ್ರಕಾಶ್ಹ ಸಿದ್ದರಾಮಯ್ಯನ ಹುಂಡಿ ಸಿದ್ದರಾಮ  ಮೊಳೆ ಸಿದ್ಧ ಶೆಟ್ಟಿ,  ಜವರಪ್ಪ , ಮಾದಪ್ಪ, ಗರ್ಗೆಶ್ವರಿ ಮಾದೇವ, ಸಿಆರ್ .ಮಾದೇವ ಇತರರು ಹಾಜರಿದ್ದರು.

Share This Article
Leave a Comment