ದುಷ್ಟ ಶಕ್ತಿಗಳನ್ನು ಸೋಲಿಸಿ, ದೈವಿಕ ಶಕ್ತಿಯನ್ನು ಮುನ್ನಡೆಸಿಕೊಂಡು ಹೋಗಬೇಕು : ಟಿ.ಎಸ್ ಶ್ರೀವತ್ಸ

latha prabhukumar
1 Min Read

ಪಬ್ಲಿಕ್ ಅಲರ್ಟ್ ನ್ಯೂಸ್:-ದುಷ್ಟ ಶಕ್ತಿಗಳನ್ನು ಸೋಲಿಸಿ, ದೈವಿಕ ಶಕ್ತಿಯನ್ನು ಮುನ್ನಡೆಸಿಕೊಂಡು ಹೋಗಬೇಕು : ಟಿ.ಎಸ್ ಶ್ರೀವತ್ಸ

ಮೈಸೂರು,ಮಾ.19(ಕರ್ನಾಟಕ ವಾರ್ತೆ):-
ದುಷ್ಟ ಶಕ್ತಿಗಳನ್ನು ಸೋಲಿಸಿ, ಜೀವನದಲ್ಲಿ ದೈವಿಕ ಶಕ್ತಿಯನ್ನು ಪಡೆದು ಮುನ್ನಡೆಸಿಕೊಂಡು ಹೋಗಬೇಕು ಎಂದು ಕೃಷ್ಣರಾಜ ಕ್ಷೇತ್ರದ ವಿಧಾನ ಸಭೆ ಶಾಸಕರಾದ ಟಿ.ಎಸ್ ಶ್ರೀವತ್ಸ ಅವರು ತಿಳಿಸಿದರು.

ಇಂದು ಮೈಸೂರು ಅರಮನೆ ಮಂಡಳಿ ವತಿಯಿಂದ ಆಯೋಜಿಸಲಾಗಿದ್ದ ಯುಗಾದಿ ಸಂಗೀತೋತ್ಸವ ಶ್ರೀ ಪರಾಭವ ಸಂವತ್ಸರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹಿಂದೂಗಳ ವರ್ಷದ ಮೊದಲನೆಯ ಹಬ್ಬವೆ ಯುಗಾದಿ, ನಾವೆಲ್ಲರೂ ಬದುಕನ್ನು ಶಕ್ತಿಯುತವಾಗಿ ಮುನ್ನಡೆಸಿಕೊಂಡು ಜೀವನದಲ್ಲಿ ಕಷ್ಟ-ಸುಖಗಳನ್ನು ಸಮದೂಗಿಸಿಕೊಂಡು ಮುನ್ನಡೆಸುವುದೆ ಯುಗಾದಿ ಹಬ್ಬ ಎಂದು ಹೇಳಿದರು.

ವಿಧಾನ ಪರಿಷತ್ತಿನ ಶಾಸಕರಾದ ಡಾ. ಡಿ ತಿಮ್ಮಯ್ಯ ಅವರು ಮಾತನಾಡಿ ಯುಗಾದಿ ಹಬ್ಬವನ್ನು ರೈತ ಭಾಂದವರು ತಮ್ಮ ಜೀವನದಲ್ಲಿ ಅದ್ದೂರಿಯಾಗಿ ಆಚರಣೆ ಮಾಡುತ್ತಾರೆ ಎಂದರು.

ಬೇವು- ಬೆಲ್ಲ ಜೀವನದಲ್ಲಿ ಕಷ್ಟ ಸುಖವನ್ನು ಸಮನಾಗಿ ಸ್ವೀಕರಿಸಿದರೆ ಜೀವನದಲ್ಲಿ ಯುಗಾದಿ ಹಬ್ಬ ಒಂದು ಪರಿಪೂರ್ಣ ಅರ್ಥ ನೀಡುತ್ತೆ, ಮನುಷ್ಯನ ಜೀವನದಲ್ಲಿ  ಒಳ್ಳೆಯ ದಿನಗಳು ಕೆಟ್ಟ ದಿನಗಳೆರೆಡು ಬರುತ್ತವೆ. ಬದುಕಲ್ಲಿ ಅನೇಕ ಸಂದರ್ಭಗಳಲ್ಲಿ ಅನಿರೀಕ್ಷಿತ ಘಟನೆಗಳು ಬರುತ್ತವೆ ಆದರೆ ಆ ಕಷ್ಟಗಳೆಲ್ಲವನ್ನು  ಎದುರಿಸಿ ನಿವಾರಿಸಿಕೊಂಡು  ಹೋದರೆ ಮುಂದೆ ಸುಖ ಬಂದೆ ಬರುತ್ತದೆ ಎಂದರು.

ವಿದ್ಯಾರ್ಥಿಗಳ ಜೀವನದಲ್ಲೂ ಕಷ್ಟಪಟ್ಟು ಅಭ್ಯಾಸ ಮಾಡಿದರೆ ಪರಿಶ್ರಮ ಪಟ್ಟರೆ ಮುಂದಿನ ಭವಿಸ್ಯ ಸಿಹಿಯಾಗಿರುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಜಿ. ಲಕ್ಷ್ಮಿಕಾಂತ ರೆಡ್ಡಿ, ಅರಮನೆ ಮಂಡಳಿಯ ಉಪ ನಿರ್ದೇಶಕರಾದ ಟಿ. ಎಸ್. ಸುಬ್ರಮಣ್ಯ ಮತ್ತಿತರರು ಉಪಸ್ಥಿತರಿದ್ದರು.

Share This Article
Leave a Comment