ಪಬ್ಲಿಕ್ ಅಲರ್ಟ್ ನ್ಯೂಸ್:-ಸಾಲದ ಮೇಲೆ ಸರ್ಕಾರ ನಡೆಯುತ್ತಿದೆ ಎಂಬ ಟೀಕೆ ಬಂದಿದೆ. ಆದರೆ ನಮ್ಮ ಸರ್ಕಾರ 1.32 ಲಕ್ಷ ಕೋಟಿ ಸಾಲ ಮಾಡಿದ್ದು, ಬಜೆಟ್ ಗಾತ್ರ 4,48,0004 ಕೋಟಿ ಇದ್ದಾಗ ಸಾಲದ ಬಜೆಟ್ ಹೇಗೆ ಆಗಲು ಸಾಧ್ಯಸಾಲ ಮೇಲೆ ಸರ್ಕಾರ ನಡೆಯುತ್ತಿದೆ ಎನ್ನುವುದು ಸತ್ಯಕ್ಕೆ ದೂರವಾದ ಮಾತು
ಯಾವುದೇ ರಾಜ್ಯ ಅಥವಾ ದೇಶವಾಗಲಿ ಸಾಲ ಮಾಡದಿರಲು ಸಾಧ್ಯವಿಲ್ಲ, ಸಮಾಜ ಕಲ್ಯಾಣ ಹಾಗೂ ಅಭಿವೃದ್ಧಿಗಾಗಿ ಸಾಲ ಮಾಡಬೇಕು. ಸರ್ಕಾರ ಸಾಲವನ್ನು ನಿಯಮದ ಮಿತಿಯೊಳಗೆ ಮಾಡಲಾಗಿದೆ. ರಾಜ್ಯದ ಸಾಲದ ಮೊತ್ತ 8,24,000 ಕೋಟಿ ರೂ.ಗಳಷ್ಟಿದೆ.
2008 ರಿಂದ 2013 ರವರೆಗೆ ಇದ್ದ ಬಿಜೆಪಿಯೂ ಸಾಲ ಮಾಡಿದೆ. ಐದು ವರ್ಷಕ್ಕೊಮ್ಮೆ ಸಾಲ ದುಪ್ಪಟ್ಟು ಆಗುತ್ತದೆ. ಮೋದಿಯವರು ಪ್ರಧಾನಿಯಾದ ನಂತರ 165 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಜಿಡಿಪಿ ಬೆಳವಣಿಗೆಯಲ್ಲಿ ರಾಜ್ಯಕ್ಕಿಂತ ದೇಶ ಕಡಿಮೆ ಇದೆ. ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ನ ವರದಿಯಲ್ಲಿ , ದಕ್ಷಿಣ ಭಾರತದ ರಾಜ್ಯಗಳು, ದೇಶದ ಜಿಡಿಪಿಗೆ ಹೆಚ್ಚಿನ ಕೊಡುಗೆ ನೀಡುತ್ತಿದ್ದು, ಅದರಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ.
ಗ್ಯಾರಂಟಿಗಳಿಂದ ಸಾಲ ಹೆಚ್ಚಿದೆ ಎಂದು ಟೀಕಿಸಲಾಗಿದೆ. ಇದುವರೆಗೆ 1.31 ಲಕ್ಷ ಕೋಟಿ ಗ್ಯಾರಂಟಿಗಳಿಗೆ ವೆಚ್ಚ ಮಾಡಲಾಗಿದೆ. ಮಹಾರಾಷ್ಟ್ರ ಸರ್ಕಾರ, ಜನಕಲ್ಯಾಣ ಯೋಜನೆಗಳಿಗೆ ವರ್ಷದಿಂದ ವರ್ಷಕ್ಕೆ ಅನುದಾನ ಕಡಿಮೆ ಮಾಡಿದೆ. ಆದರೆ ನಮ್ಮ ಸರ್ಕಾರ ಗ್ಯಾರಂಟಿಗಳಿಗೆ ಪ್ರತಿ ವರ್ಷ ಒಂದೇ ರೀತಿಯಲ್ಲಿ ಅನುದಾನ ನೀಡಿದ್ದೇವೆ. ಯುವನಿಧಿಯಡಿ 600 ಕೋಟಿ ರೂ. ಮೀಸಲಿಡಲಾಗಿದ್ದು, ಈ ಯೋಜನೆಯನ್ನು ಖಂಡಿತವಾಗಿಯೂ ಸ್ಥಗಿತಗೊಳಿಸಿಲ್ಲ.
ನಮ್ಮ ಬಜೆಟ್ ರಿವಿನ್ಯೂ ಡಿಫಿಸಿಟ್ ಆಗಿದೆ. 2026-27ರ ಬಜೆಟ್ ನ್ನು ರೆವಿನ್ಯೂ ಸರ್ಪ್ಲಸ್ ಮಾಡಬೇಕೆಂಬ ಇಚ್ಛೆಯಿದ್ದರೂ, ಕೇಂದ್ರಸರ್ಕಾರದ ಅಸಹಕಾರದಿಂದ ಅದು ಸಾಧ್ಯವಾಗಲಿಲ್ಲ. ರಾಜ್ಯದ ಜಿಎಸ್ ಟಿ ಯಲ್ಲಿ 10% ಬೆಳವಣಿಗೆಯಿತ್ತು, ಆದರೆ ಕೇಂದ್ರಸರ್ಕಾರ, ಜಿಎಸ್ಟಿ ದರವನ್ನು ಕಡಿತಗೊಳಿಸಿದ್ದರಿಂದ , ಜಿಎಸ್ ಟಿ ಬೆಳವಣಿಗೆ 4% ಗೆ ಕುಸಿಯಿತು. ದೇಶದ ಏಳು ರಾಜ್ಯಗಳು ಕೇಂದ್ರದ ಈ ನೀತಿಯನ್ನು ವಿರೋಧಿಸಿ, ಪರಿಹಾರ ಕೇಳಿದ್ದೇವೆ.
ಜಿಎಸ್ ಟಿ ಜಾರಿಯಾದ ನಂತರದಿಂದ 2023-24ರವೆಗೆ ಕೇಂದ್ರ , ಪರಿಹಾರವನ್ನು ನೀಡಿದ್ದು, ನಂತರ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗ, ಈ ಪರಿಹಾರ ನೀಡಲಾಗಿಲ್ಲ. ಇದರಿಂದ ರಾಜ್ಯದ ಬೊಕ್ಕಸಕ್ಕೆ 10 ಸಾವಿರ ಕಡಿಮೆಯಾಗಿ, 2026-27 ರಲ್ಲಿ 15 ಸಾವಿರ ಕೋಟಿ ನಷ್ಟವಾಗಲಿದೆ. ಕೇಂದ್ರ ಈ ಧೋರಣೆಯಿಂದ ರಾಜ್ಯಕ್ಕೆ ನಷ್ಟವುಂಟಾಗಿದೆ.
