ದಸರಾ ಕಂಬಳ ಕ್ರೀಡಾಕೂಟಕ್ಕೆ ನೊಂದಣಿ ಆರಂಭ

latha prabhukumar
1 Min Read

ಪಬ್ಲಿಕ್ ಅಲರ್ಟ್ ನ್ಯೂಸ್:-ದಸರಾ ಕಂಬಳ ಕ್ರೀಡಾಕೂಟಕ್ಕೆ ನೊಂದಣಿ ಆರಂಭ
ಮೈಸೂರು,ಸೆ.19 (ಕರ್ನಾಟಕ ವಾರ್ತೆ):- ಮೈಸೂರು ದಸರಾ-2026 ರ ಅಂಗವಾಗಿ ಮೊದಲ ಬಾರಿಗೆ ದಸರಾ ಕಂಬಳ ಕ್ರೀಡಾಕೂಟವನ್ನು ಸಾತಗಳ್ಳಿ ಹೊರವರ್ತುಲ ರಸ್ತೆಯ vtu ಪ್ರಾದೇಶಿಕ ಕೇಂದ್ರದ ಹತ್ತಿರ ಆಯೋಜಿಸಲಾಗಿದೆ.

ಕಂಬಳದ ಕೋಣಗಳ ಮಾಲೀಕರು ಮತ್ತು ಓಡಿಸುವ ಜಾನಪದ ವೀರರು ವಿವಿಧ ಸ್ಪರ್ಧಾ ವಿಭಾಗಗಳ ಅಡಿಯಲ್ಲಿ ತಮ್ಮ ಹೆಸರುಗಳನ್ನು ನೊಂದಾಯಿಸಕೊಳ್ಳಬಹುದಾಗಿದೆ.

ಆಸಕ್ತರು ಸೆಪ್ಟೆಂಬರ್ 30 ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಆನ್ ಲೈನ್ https://mysoredasara.gov.in ಜಾಲತಾಣದ ಮೂಲಕ ಆನಲೈನ್ ಮೂಲಕ ಅಥವಾ ಭೌತಿಕ ಅರ್ಜಿಗಳನ್ನು ಜಿಲ್ಲಾ ಪಂಚಾಯತ್ ಕಚೇರಿಯಿಂದ ಸಹಿ ಮಾಡಿದ ಪ್ರಾಧಿಕಾರದಿಂದ ಪಡೆದು ಸಲ್ಲಿಸಬಹುದಾಗಿದೆ ಎಂದು ಜಿಲ್ಲಾ ಕಂಬಳ ಉಪ ಸಮಿತಿಯ ಕಾರ್ಯಾಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article
Leave a Comment