218–ನರಸಿಂಹರಾಜ ವಿಧಾನಸಭಾ ಕ್ಷೇತ್ರದಲ್ಲಿ SIR ಪ್ರಗತಿ ಕುರಿತು ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆ – ಮಾಹಿತಿ.

latha prabhukumar
1 Min Read

ಪಬ್ಲಿಕ್ ಅಲರ್ಟ್ ನ್ಯೂಸ್ 218–ನರಸಿಂಹರಾಜ ವಿಧಾನಸಭಾ ಕ್ಷೇತ್ರದಲ್ಲಿ SIR ಪ್ರಗತಿ ಕುರಿತು ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆ– ಮಾಹಿತಿ.

ಮಾನ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಹಾಗೂ ಮಾನ್ಯ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಚುನಾವಣಾಧಿಕಾರಿಗಳ ಮಾರ್ಗದರ್ಶನದಂತೆ, ಇಂದು 15.09.2026 ರಂದು 218–ನರಸಿಂಹರಾಜ ವಿಧಾನಸಭಾ ಕ್ಷೇತ್ರದ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಪ್ರತಿನಿಧಿಗಳ ಸಭೆಯನ್ನು ನಡೆಸಲಾಯಿತು.

ಸಭೆಯಲ್ಲಿ ಕ್ಷೇತ್ರದಲ್ಲಿ ನಡೆಯುತ್ತಿರುವ SIR ಪ್ರಕ್ರಿಯೆಯಡಿ Claims & Objections, Notices, Hearing, Disposal, ASDDO, No Mapping ಹಾಗೂ Anomaly/Logical Discrepancy ಪ್ರಕರಣಗಳ ಪ್ರಸ್ತುತ ಪ್ರಗತಿ ಹಾಗೂ ಅಂಕಿಅಂಶಗಳ ಕುರಿತು ಪ್ರತಿನಿಧಿಗಳಿಗೆ ಮಾಹಿತಿ ನೀಡಲಾಯಿತು.

ಕ್ಷೇತ್ರದಲ್ಲಿ ಒಟ್ಟು 21,696 ಪ್ರಕರಣಗಳಿಗೆ Notice generate ಮಾಡಲಾಗಿದ್ದು, 14,068 Notices serve ಮಾಡಲಾಗಿದೆ. 5,438 ಪ್ರಕರಣಗಳಲ್ಲಿ Hearing ಪೂರ್ಣಗೊಂಡಿದ್ದು, 5,127 ಪ್ರಕರಣಗಳು Disposalಗೊಂಡಿವೆ. ಉಳಿದ ಪ್ರಕರಣಗಳನ್ನೂ ನಿಯಮಾನುಸಾರ ಶೀಘ್ರವಾಗಿ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ.

ಸಭೆಯಲ್ಲಿ ಭಾಗವಹಿಸಿದ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ SIR ಪ್ರಕ್ರಿಯೆಯ ಕುರಿತು ಅಗತ್ಯ ಮಾಹಿತಿ ನೀಡುವುದರೊಂದಿಗೆ, ಅರ್ಹ ಮತದಾರರಿಗೆ ಯಾವುದೇ ತೊಂದರೆಯಾಗದಂತೆ ನಿಯಮಾನುಸಾರ ಹಾಗೂ ಪಾರದರ್ಶಕವಾಗಿ ಕಾರ್ಯನಿರ್ವಹಿಸಲಾಗುತ್ತಿದೆ ಎಂದು ತಿಳಿಸಲಾಯಿತು. SIR N R Political parties Meeting Letter.pdf

ಮತದಾರರ ನೋಂದಣಾಧಿಕಾರಿಗಳು (ERO)
218–ನರಸಿಂಹರಾಜ ವಿಧಾನಸಭಾ ಕ್ಷೇತ್ರ
ಮೈಸೂರು ಮಹಾನಗರ ಪಾಲಿಕೆ, ಮೈಸೂರು.

Share This Article
Leave a Comment