ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ, ಮೈಸೂರು

latha prabhukumar
3 Min Read

ಪಬ್ಲಿಕ್ ಅಲರ್ಟ್ ನ್ಯೂಸ್:-ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ, ಮೈಸೂರು
ಭಾರತ ಸರ್ಕಾರವು 1982ರಲ್ಲಿ ಎಲ್ಲರಿಗೂ, ವಿಶೇಷವಾಗಿ ಜನಸಂಖ್ಯೆಯ ಅತ್ಯಂತ ದುರ್ಬಲ ಮತ್ತು ಹಿಂದುಳಿದ ವರ್ಗದವರಿಗೆ ಕನಿಷ್ಠ ಮಾನಸಿಕ ಆರೋಗ್ಯ ಸೇವೆಗಳನ್ನು ನೀಡುವ ನಿಟ್ಟಿನಲ್ಲಿ ರಾಷ್ಟ್ರೀಯ ಮಾನಸಿಕ ಆರೋಗ್ಯ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಜನಸಂಖ್ಯೆಯ ಶೇ.6 ರಿಂದ 7 ರಷ್ಟು ಜನರು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ. ಚಿಕಿತ್ಸೆಯ ಅಂತರವನ್ನು ಪರಿಹರಿಸಲು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ಪ್ರಾರಂಭವಾಗುವ ಎಲ್ಲಾ ಆರೋಗ್ಯ ಸಿಬ್ಬಂದಿಗೆ ಮಾನಸಿಕ ಅಸ್ವಸ್ಥರನ್ನು ಪ್ರಾರಂಭ ಹಂತದಲ್ಲೇ ಗುರುತಿಸಲು ಮತ್ತು ಚಿಕಿತ್ಸೆ ನೀಡಲು ತರಬೇತಿ ನೀಡುವ ತಂತ್ರಗಳಲ್ಲಿ ರಾಷ್ಟ್ರೀಯ ಮಾನಸಿಕ ಆರೋಗ್ಯ ಕಾರ್ಯಕ್ರಮದಡಿ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮವನ್ನು(ಡಿಎಂಹೆಚ್‌ ಪಿ) ಎಲ್ಲಾ 30 ಜಿಲ್ಲೆಗಳಲ್ಲಿ ಜಾರಿಗೆ ತರಲಾಗಿದೆ. ತಾಲ್ಲೂಕು ಮಾನಸಿಕ ಆರೋಗ್ಯ ಕಾರ್ಯಕ್ರಮ (ಟಿಎಂಹೆಚ್ ಪಿ) ಅಡಿಯಲ್ಲಿ 10 ತಾಲ್ಲೂಕುಗಳನ್ನು ಸಹ ತೆಗೆದುಕೊಳ್ಳಲಾಗಿದೆ. ಪ್ರಸ್ತುತ ಇದು ರಾಜ್ಯದ 146 ತಾಲ್ಲೂಕುಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಮೈಸೂರಿನಲ್ಲಿ ಎಲ್ಲಾ ತಾಲ್ಲೂಕುಗಳ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ತಂಡವು ಪ್ರತಿ ಮಂಗಳವಾರ ಮತ್ತು ಶುಕ್ರವಾರ ಮನೋಚೈತನ್ಯ ಕಾರ್ಯಕ್ರಮವನ್ನು ನಡೆಸುತ್ತಿದ್ದು ಮಾನಸಿಕ ರೋಗಿಗಳಿಗೆ ಚಿಕಿತ್ಸೆ ಮತ್ತು ಔಷಧಿಗಳನ್ನು ನೀಡಲಾಗುತ್ತಿದೆ. ಏಪ್ರಿಲ್ 2025 ರಿಂದ ಮಾರ್ಚ್ 2026 ರವರೆಗೆ, ಮೈಸೂರು ಜಿಲ್ಲೆಯಾದ್ಯಂತ ಸುಮಾರು 47,223 ಹೊರ ವಿಭಾಗದ ಸಮಾಲೋಚನೆ ನಡೆಸಿ ಚಿಕಿತ್ಸೆಯನ್ನು ನೀಡಲಾಗಿದೆ. ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ತಂಡವು ಮನೋವೈದ್ಯರು, ಕ್ಲಿನಿಕಲ್ ಸೈಕಾಲಜಿಸ್ಟ್, ಮನೋಸಾಮಾಜಿಕ ಕಾರ್ಯಕರ್ತರು, ಮನೋವೈದ್ಯಕೀಯ ಶುಷ್ಪಷಾಧಿಕಾರಿಗಳು ಮತ್ತು ಸಮುದಾಯ ಶುಕ್ರೂಷಕರು ಕರ್ತವ್ಯ ನಿರ್ವಹಿಸುತ್ತಿದ್ದು ಬೀದಿಗಳಲ್ಲಿ ಅಲೆದಾಡುವ ಮಾನಸಿಕ ಅಸ್ವಸ್ಥ ರೋಗಿಗಳನ್ನು ಗುರುತಿಸಿದರೆ ಅವರು ರೋಗಿಗಳನ್ನು ECRC ಕೇಂದ್ರಕ್ಕೆ ಕರೆತರುತ್ತಾರೆ. ಜಿಲ್ಲೆಯಲ್ಲಿ ಮಾನಸಿಕ ಸ್ವಾಸ್ಥತೆಯನ್ನು ಸಮತೋಲನದಲ್ಲಿಡಲು ಶ್ರಮ ವಹಿಸುತ್ತಿದ್ದಾರೆ.

ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದಡಿಯಲ್ಲಿ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ನಿರಾಶ್ರಿತರಿಗೆ ಸಮುದಾಯದಲ್ಲಿ ಮಾನವ ಹಕ್ಕುಗಳ ಸ್ನೇಹಿ ಆರೈಕೆ, ಬೆಂಬಲ, ಮೌಲ್ಯಮಾಪನ ಹಾಗೂ ಚಿಕಿತ್ಸೆಯನ್ನು ನೀಡಲು ಹೆಚ್ಚಿನ ಅನುಭವ ಹೊಂದಿರುವ ಸರ್ಕಾರೇತರ ಸಂಸ್ಥೆಯವರಾದ ಆಲದಮರ ಫೌಂಡೇಷನ್ ಬೆಂಗಳೂರು, ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ದಿನಾಂಕ:19/01/2026 ರಂದು ಒಡಂಬಡಿಕೆ ಮಾಡಿಕೊಳ್ಳಲಾಗಿರುತ್ತದೆ. ಅದರಂತೆ (ಇಸಿಆರ್‌ಸಿ) ತುರ್ತು ಚಿಕಿತ್ಸೆ ಆರೈಕೆ ಕೇಂದ್ರವನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ. ಜಿಲ್ಲಾ ಅಸಾಂಕ್ರಾಮಿಕ ರೋಗಗಳ ಘಟಕ ಹಾಗೂ ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ, ಮನೋರೋಗ ವಿಭಾಗ ಕೆ.ಆರ್.ಆಸ್ಪತ್ರೆ ಇವರ ಮೇಲ್ವಿಚಾರಣೆ ಹಾಗೂ ಸಹಯೋಗದೊಂದಿಗೆ 30 ಹಾಸಿಗೆಗಳ ಕೇಂದ್ರವನ್ನು ಇಂದು ಮಾನ್ಯ ಸಮಾಜ ಕಲ್ಯಾಣ ಇಲಾಖೆಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಹೆಚ್ ಸಿ ಮಹಾದೇವಪ್ಪ ಅವರು ಉದ್ಘಾಟಿಸಿದ್ದು, ಹಿತವಿಚನಗಳನ್ನು ನೀಡಿ , ಕಾರ್ಯಕ್ರಮದ ಯಶಸ್ಸಿಗೆ ಹಾರೈಸಿದರು. ಇದರಲ್ಲಿ ಮನೋವೈದ್ಯರು, ಶುಶೂಷಕರು, ಸಾಮಾಜಿಕ ಕಾರ್ಯಕರ್ತರು, ವಾರ್ಡ್ ಅಸಿಸ್ಟೆಂಟ್ ಇವರುಗಳ ತಂಡವಿದ್ದು, 36 ತಿಂಗಳುಗಳಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿರುತ್ತದೆ. ಅಲದಮರ ಫೌಂಡೇಶನ್ ನಿರಾಶ್ರಿತ ಮಾನಸಿಕ ಅಸ್ವಸ್ಥ ಅಲೆಮಾರಿ ರೋಗಿಗಳನ್ನು ECRC ಕೇಂದ್ರಕ್ಕೆ ಕರೆತರುತ್ತದೆ, ಅವರಿಗೆ ಕನಿಷ್ಠ 3 ತಿಂಗಳ ಕಾಲ ಚಿಕಿತ್ಸೆ ನೀಡುತ್ತದೆ, ನಂತರ ಅವರ ಕುಟುಂಬಕ್ಕೆ ಮರುಸೇರ್ಪಡೆ ಮಾಡಿ
, ಕುಟುಂಬ ಸದಸ್ಯರು ಲಭ್ಯವಿಲ್ಲದಿದ್ದರೆ, ಅವರನ್ನು ಪುನರ್ವಸತಿ ಕೇಂದ್ರಕ್ಕೆ ಕಳುಹಿಸಲಾಗುತ್ತದೆ ಮತ್ತು ರೋಗಿಯನ್ನು ಜೀವಿತಾವಧಿಯವರೆಗೆ ಮೇಲ್ವಿಚಾರಣೆ ಮಾಡಲಾಗುತ್ತದೆ. ಇಸಿಆರ್‌ಸಿಯನ್ನು ವಹಿಸಿಕೊಂಡಿರುವ ಆಲದಮರ ಫೌಂಡೇಷನ್ ಬೆಂಗಳೂರು, ರವರು ಸರ್ಕಾರದ ಮಾರ್ಗಸೂಚಿಯಂತೆ ಮಾನಸಿಕ ಮೌಲ್ಯಮಾಪನ ದತ್ತಾಂಶ ನಿರ್ವಹಣೆ ಹಾಗೂ ಮೇಲ್ವಿಚಾರಣೆಯ ದಾಖಲಾತಿಗಳನ್ನೊಳಗೊಂಡ ವರದಿಯನ್ನು ಪ್ರತಿ ತಿಂಗಳು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರಿಗೆ ಸಲ್ಲಿಸುವುದು. ಇದರೊಂದಿಗೆ ಹೊರರೋಗಿ ಚಿಕಿತ್ಸೆ, ಹಾಗೂ ತರಬೇತಿಗೆ ಬೇಕಾದಂತಹ ಸೌಲಭ್ಯದೊಂದಿಗೆ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದು. ಕೆ.ಆ‌ರ್.ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರ ವತಿಯಿಂದ ರೋಗಿಗಳಿಗೆ ರಕ್ತ ಪರೀಕ್ಷೆಗಳು ಮತ್ತು ಅಗತ್ಯವಿರುವ ಸ್ಕ್ಯಾನ್‌ಗಳನ್ನು ಮತ್ತು
ಮುಕ್ತವಾಗಿ ಕುಡಿಯುವ ನೀರು, ಊಟ, ವಿದ್ಯುತ್‌ಚ್ಚಕ್ತಿ ಮತ್ತು ಇನ್ನಿತರೆ ಸಾಮಾನ್ಯ ಸೌಲಭ್ಯಗಳನ್ನು ಒದಗಿಸಿಕೊಡಲಾಗುತ್ತದೆ. ಮಾನಸಿಕ ರೋಗಿಗಳಿಗೆ ಯಾವುದೇ ಇನ್ನಿತರ ಆರೋಗ್ಯ ಸಮಸ್ಯೆಗಳು ಕಂಡುಬಂದಲ್ಲಿ ಸೂಕ್ತ ವೈದ್ಯಕೀಯ ವಿಭಾಗಗಳಿಗೆ ಉಲ್ಲೇಖಿಸಿ ಚಿಕಿತ್ಸೆ ಮಾಡಿಕೊಡಲಾಗುತ್ತದೆ. ಈ ಮೇಲ್ಕಂಡ ಕಾರ್ಯಕ್ರಮದ ಎಲ್ಲಾ ಮೇಲ್ವಿಚಾರಣೆಯನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರು ಅಗತ್ಯ ನಿರ್ದೇಶನಗಳೊಂದಿಗೆ ಅನುಮೋದನೆಯನ್ನು ನೀಡುತ್ತಾರೆ.
ಕಾರ್ಯಕ್ರಮದಲ್ಲಿ ಮಾನ್ಯ ಜಿಲ್ಲಾಧಿಕಾರಿಗಳಾದ ಶ್ರೀ ಲಕ್ಷ್ಮೀಕಾಂತ ರೆಡ್ಡಿ ಅವರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬಕಲ್ಯಾಣಾಧಿಕಾರಿಗಳಾದ ಡಾ.ಕುಮಾರಸ್ವಾಮಿ ಪಿ ಸಿ ಅವರು ,ಜಿಲ್ಲಾ ಅಸಾಂಕ್ರಾಮಿಕ ರೋಗಗಳ ನಿರ್ಮೂಲನಾಧಿಕಾರಿಗಳು ಮತ್ತು ಪ್ರಸ್ತುತ ಕಾರ್ಯಕ್ರಮದ ನೋಡಲ್
ಅಧಿಕಾರಿಗಳಾದ ಡಾ.ಬೃಂದಾ ಬಿ ಅವರು , ಮೈಸೂರು ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಮತ್ತು ನಿರ್ದೇಶಕರು ಡಾ. ಧಾಕ್ಷಾಯಿಣಿ ಅವರು, ವೈದ್ಯಕೀಯ ಅಧೀಕ್ಷಕರು ಡಾ.ಶೋಭಾ ಅವರು, ಆರ್‌ಎಂಒ ಡಾ.ನಯಾಜ್‌ ಪಾಷಾ ಅವರು, ಆಲದಮರ ಫೌಂಡೇಶನ್ ಅಧ್ಯಕ್ಷರಾದ ಡಾ ಕಿಶೋರ್ ಅವರು, ಮತ್ತು ಕಾರ್ಯಕ್ರಮದ ಸಿಬ್ಬಂಧಿ ವರ್ಗದವರು ಉಪಸ್ಥಿತರಿದ್ದರು.

Share This Article
Leave a Comment