ಪಬ್ಲಿಕ್ ಅಲರ್ಟ್
ಮೈಸೂರು: ಟಿ. ನರಸೀಪುರದ ಗ್ರಾಮ ವಿದ್ಯೋದಯ ಸಂಘದ ಎಂ.ಸಿ. ಶಿವಾನಂದ ಶರ್ಮ ಸ್ಮಾರಕ ಪ್ರವೇಶ ದ್ವಾರ, ದಾಸೋಹ ಭವನ, ಡಾ. ಶಿವಕುಮಾರ ಸ್ವಾಮೀಜಿಯವರ ಬಯಲು ರಂಗಮAದಿರ, ಕೆ.ಪಿ. ಮಹದೇವಸ್ವಾಮಿ ಅವರ ಅಮೃತ ಮಹೋತ್ಸವ ಕಾರ್ಯಕ್ರಮ ನ. ೪ ರ ಬೆಳಗ್ಗೆ ೧೦.೩೦ಕ್ಕೆ ಶಿಕ್ಷಣ ಸಂಸ್ಥೆ ಆವರಣದಲ್ಲಿ ನಡೆಯಲಿದೆ ಎಂದು ಅಭಿನಂದನಾ ಸಮಿತಿ ಪದಾಧಿಕಾರಿ ಕುಮಾರಸ್ವಾಮಿ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಡನೆ ಮಾತನಾಡಿ, ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಿದ್ದಲಿಂಗ ಸ್ವಾಮೀಜಿ, ಡಾ. ನಿರ್ಮಲಾನಂದನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸುವರು, ಸಿಎಂ ಸಿದ್ದರಾಮಯ್ಯ ಉದ್ಘಾಟಿಸುವರು, ಸಂಸದ ಎಚ್.ಡಿ. ದೇವೇಗೌಡ ಅಧ್ಯಕ್ಷತೆ ವಹಿಸುವರು, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಡಾ. ಶಾಮನೂರು ಶಿವಶಂಕರಪ್ಪ ವಿವಿಧ ಉದ್ಘಾಟನೆ ನೆರವೇರಿಸುವರು, ಸಚಿವ ಡಾ.ಎಚ್.ಸಿ. ಮಹದೇವಪ್ಪ ಅಭಿನಂದನಾ ನುಡಿ ಆಡುವರು, ಕೆ. ವೆಂಕಟೇಶ್ ಅಭಿನಂದನಾ ಗ್ರಂಥ ಬಿಡುಗಡೆಗೊಳಿಸುವರು, ಸಂಸದ ಸುನಿಲ್ ಬೋಸ್ ಶರ್ಮರ ಭಾವಚಿತ್ರ ಅನಾವರಣಗೊಳಿಸುವರೆಂದರು.
ಗೌರವಾಧ್ಯಕ್ಷ ಡಿ. ಸೋಮಣ್ಣ, ಎಸ್.ಎನ್. ಸಿದ್ಧಾರ್ಥ, ಕೆ.ಪಿ. ಉದಯ್‌ಕುಮಾರ್, ಪ್ರೊ.ಡಿ.ಎಸ್. ಸದಾಶಿವಮೂರ್ತಿ, ಬಿ.ಎಂ. ಶಿವಮಲ್ಲಪ್ಪ, ಟಿ.ಎಸ್. ಬಸವಣ್ಣಸ್ವಾಮಿ, ಡಾ.ಸಿ.ಕೆ. ಚಂದ್ರಪ್ಪ, ನಂಜುAಡಸ್ವಾಮಿ ಮೊದಲಾದವರು ಇದ್ದರು.
