ಶ್ರೀ ಯೋಗಾನರಸಿಂಹಸ್ವಾಮಿಯಕುಂಭಾಭಿಷೇಕ ಮಹೋತ್ಸವ

latha prabhukumar
1 Min Read

ಪಬ್ಲಿಕ್ ಅಲರ್ಟ್ ನ್ಯೂಸ್:-ಶ್ರೀ ಯೋಗಾನರಸಿಂಹಸ್ವಾಮಿಯ ಕುಂಭಾಭಿಷೇಕ ಮಹೋತ್ಸವ
ಮೈಸೂರು: ಇಲ್ಲಿನ ವಿಜಯನಗರದಲ್ಲಿರುವ ಶ್ರೀ ಯೋಗಾ ನರಸಿಂಹಸ್ವಾಮಿ ದೇವಾಲಯದಲ್ಲಿ ಶ್ರೀ ಸ್ವಾಮಿಯ ಕುಂಭಾಭಿಷೇಕ ಮಹೋತ್ಸವ ಹಲವು ಧಾರ್ಮಿಕ ಕಾರ್ಯಗಳು ಹಾಗೂ ವಿಶೇಷ ಪೂಜಾ ಕೈಂಕರ್ಯಗಳೊಂದಿಗೆ ಸೋಮವಾರದಿಂದ ಆರಂಭಗೊಂಡಿದೆ.
ಬೆಳಗ್ಗಿನಿಂದಲೇ ದೇವಾಲಯದ ಸಂಸ್ಥಾಪಕರಾದ ನಾಡೋಜ ಪ್ರೊ.ಡಾ. ಭಾಷ್ಯಂ ಸ್ವಾಮೀಜಿಯವರ ನೇತೃತ್ವದಲ್ಲಿ ಪೂಜಾ ಕಾರ್ಯಗಳು ನಡೆಯಿತಲ್ಲದೇ, ದೇವಾಲಯಕ್ಕೆ ಆಗಮಿಸಿ ಶ್ರೀ ಸ್ವಾಮಿಯ ದರ್ಶನ ಪಡೆದ ಭಕ್ತರಿಗೆ ಪ್ರಸಾದವನ್ನು ಸಹ ವಿತರಿಸಲಾಯಿತು.
ಮೇ.೨೫ರ ಸೋಮವಾರ ಬೆಳಗ್ಗೆ ಶ್ರೀ ಯೋಗಾನರಸಿಂಹಸ್ವಾಮಿಗೆ ಅಭಿಷೇಕ ಮತ್ತು ಲಕ್ಷಾರ್ಚನೆ ಕಾರ್ಯಗಳು ಜರುಗಿದ್ದು, ಬಳಿಕ ಮಹಿಳಾ ಸಂಘದವರಿಂದ ಲಲಿತಾ ಸಹಸ್ರನಾಮ ಪಾರಾಯಣ ಸಹ ನಡೆಯಿತು.
ಮೇ.೨೬ರ ಮಂಗಳವಾರ ಬೆಳಗ್ಗೆ ೯ ಗಂಟೆಗೆ ಶ್ರೀ ಯೋಗಾ ನರಸಿಂಹ ಸ್ವಾಮಿಯವರಿಗೆ ಸಹಸ್ರ ಕಳಶಾಭಿಷೇಕ ಮತ್ತು ಮಹಿಳಾ ಸಂಘದವರಿಂದ ಸೌಂದರ್ಯ ಲಹರಿ ಪಾರಾಯಣ ನಡೆಯಲಿದೆ.
ಹಾಗೇಯೇ ಮೇ.೨೭ರ ಬುಧವಾರ ಬೆಳಗ್ಗೆ ೯ ಗಂಟೆಗೆ ಶ್ರೀ ಯೋಗಾನರಸಿಂಹಸ್ವಾಮಿಗೆ ಕುಂಭಾಭಿಷೇಕ ಮತ್ತು ಅಖಂಡ ಮಹಾ ಸುದರ್ಶನ ಹೋಮ ಜರುಗಲಿದ್ದು, ತದನಂತರ ಮಹಿಳಾ ಸಂಘದವರಿಂದ ವಿಷ್ಣು ಸಹಸರನಾಮ ಪಾರಾಯಣ ಜರುಗಲಿದೆ. ಅಂತೆಯೇ ಬಳಿಕ ಮಧ್ಯಾಹ್ನ ೧೨ಗಮಟೆಗೆ ಪೂರ್ಣಾಹುತಿ ನಡೆಯಲಿದ್ದು, ೧೨.೩೦ರನಂತರ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಲಿದೆ ಎಂದು ದೇವಾಲಯದ ಆಡಳಿತಾಧಿಕಾರಿ ಎನ್.ಶ್ರೀನಿವಾಸನ್ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article
Leave a Comment