ಪಬ್ಲಿಕ್ ಅಲರ್ಟ್ ನ್ಯೂಸ್:-ಸಾವಿನ ಭಯಕ್ಕೆ ಆತ್ಮದ ಜ್ಞಾನದ ಕೊರತೆಯೇ ಮೂಲ ಕಾರಣ- ರಾಜಯೋಗಿನಿ ಶಿವಮಣೀಜೀ ಅಭಿಮತ
ಚಾಮರಾಜನಗರ- ಇಂದು ಜಗತ್ತಿನ ಜನರು ಸಾವಿನ ಭಯದ ದವಡೆಯಲ್ಲಿದ್ದು, ಅದರಿಂದ ಪಾರಾಗುವ ಹಲವು ಸಂಶೋಧನೆಗಳನ್ನು ನಡೆಸುತ್ತಿದ್ದಾರೆ. ಗೀತೆಯ ಸಾರವೇ ಆಗಿದೆ, ಪುನಃರಪಿ ಜನನಂ ಪುನಃರಪಿ ಮರಣಂ. ಸಾವಿಗೆ ಭಯಪಡುವ ಅಗತ್ಯವಿಲ್ಲ. ಸಾವಿನ ಭಯಕ್ಕೆ ಆತ್ಮದ ಜ್ಞಾನದ ಕೊರತೆಯೇ ಮೂಲ ಕಾರಣವಾಗಿದೆ ಎಂದು ಟಿವಿ ಚಾನೆಲ್, ಸೋಶಿಯಲ್ ಮೀಡಿಯಾ ಪ್ರವಚನಕಾರರು ಹಾಗೂ ಮೋಟಿವೇಷನಲ್ ಸ್ಪೀಕರ್ ರವರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಶಿವಮಣೀಜೀಯವರು ಅಭಿಪ್ರಾಯಪಟ್ಟಿ ರು.ಅವರು ಪಟ್ಟಣದಲ್ಲಿರುವ ಅಂತರಾಷ್ಟ್ರೀಯ ಆಧ್ಯಾತ್ಮಿಕ ಸಂಸ್ಥೆ, ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಪ್ರಕಾಶ ಭವನದಲ್ಲಿ ಏರ್ಪಡಿಸಿದ್ದ ಭಗವದ್ಗೀತೆಯ ಸಾರ ಹಾಗೂ ಶಿವಶರಣರ ಶಿವಯೋಗ ಪ್ರವಚನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಜಗತ್ತಿನಲ್ಲಿ ಇರುವವರೆಲ್ಲರೂ ನಾವು ಆತ್ಮಗಳು ಒಬ್ಬ ಪರಮಾತ್ಮನ ಮಕ್ಕಳಾಗಿದ್ದೇವೆ. ಆತ್ಮವು ಶರೀರವನ್ನು ಪಡೆಯುವುದಕ್ಕೆ ಜನ್ಮವೆಂತಲೂ, ಶರೀರವನ್ನು ಬಿಡುವುದಕ್ಕೆ ಮರಣವೆಂಲೂ ಕರೆಯುತ್ತಾರೆ. ಆತ್ಮವು ತನ್ನ ಶರೀರವೆಂಬ ವಸ್ತ್ರ ಹಳೆಯದದಾಗ ಕಳಚುವುದಕ್ಕೆ ಸಾವು ಎಂತಲೂ ಶರೀರವೆಂಬ ಹೊಸ ವಸ್ತ್ರವನ್ನು ಧರಿಸಿದಾಗ ಜನ್ಮ ಎಂತಲೂ ಕರೆಯಲಾಗುತ್ತದೆ. ಎಲ್ಲರೂ ಆತ್ಮ ಹತ್ಯೆ ಎಂದು ಕರೆಯುತ್ತಾರೆ. ಆತ್ಮ ಎಂದೂ ಹತ್ಯೆ ಆಗುವುದಿಲ್ಲ. ಜೀವ ಹತ್ಯೆಯಾಗುತ್ತದೆ. ಆದ್ದರಿಂದ ನಮ್ಮನ್ನು ನಾವು ಶರೀರ ಎಂದು ತಿಳಿದುಕೊಂಡಿರುವರಿಂದ ದುಃಖ ಶಾಂತಿ ಉಂಟಾಗುತ್ತದೆ. ನಮ್ಮನ್ನು ನಾವು ಆತ್ಮ ಎಂದು ತಿಳಿದು ಕೊಂಡಾಗ ಸದಾ ಸುಖ ಶಾಂತಿ ಯಲ್ಲಿರುತ್ತೇವೆ. ಶರಣರು ಹೇಳುವ ಹಾಗೆ ಸಾವು ಎಂಬುದು ಮಹಾನವಮಿ ಯಾಗಬೇಕೆಂದರು. ಭಗವದ್ಗೀತೆಯ ಸಾರವೇ ಆಗಿದೆ, ಹಿಂದೆಯೂ ಒಳ್ಳೆಯದಾಗಿತ್ತು. ಈಗಲೂ ಒಳ್ಳೆಯದೇ ಆಗುತ್ತಿದೆ. ಮುಂದೆಯೂ ಬಹಳ ಒಳ್ಳೆಯದೇ ಆಗುತ್ತದೆ ಎಂದರು.
ಬಸವ ಸಮಿತಿ ಕೇಂದ್ರದ ಜಿಲ್ಲಾಧ್ಯಕ್ಷರಾದ ಮಹದೇವಸ್ವಾಮಿ ಮಾತನಾಡಿ ಮಕ್ಕಳಿಗೆ ಒಳ್ಳೆಯ ಸಂಸ್ಕಾರವನ್ನು ಕೊಡಬೇಕೇ ಹೊರತು ಹಣವನ್ನು ಶೇಖರಿಸಬಾರದು ಎಂದರು. ಮನೋಬಲ ತರಬೇತುದಾರೆ ರಾಜಯೋಗಿನಿ ಬ್ರಹ್ಮಾಕುಮಾರಿ ದಾನೇಶ್ವರೀಜೀ ಸರ್ವರನ್ನು ಸ್ವಾಗತಿಸಿ ಮಾತನಾಡಿ, ಗೀತಾ ಬೋಧನೆ ಒಂದು ವೇಳೆ ದ್ವಾಪರಯುಗದಲ್ಲಿ ನಡೆದಿದ್ದೇ ಆದರೆ ಕಲಿಯುಗ ಬರುವ ಅವಶ್ಯಕತೆ ಇರುತ್ತಿರಲಿಲ್ಲ. ಸತ್ಯಯುಗ ಬರಬೇಕಿತ್ತು ಆದರೆ ವರ್ತಮಾನ ಕಲಿಯುಗದ ಸಮಯದಲ್ಲಿ, ಈ ಧರ್ಮ ಗ್ಲಾನಿಯ ಸಮಯದಲ್ಲೇ ಗೀತಾ ಬೋಧನೆ ನಡೆಯುತ್ತಿದೆ. ಅದು ಎಲ್ಲಿ ಹೇಗೆ ನಡೆಯುತ್ತಿದೆ ಎಂಬುದನ್ನು ಈಶ್ವರೀಯ ವಿಶ್ವವಿದ್ಯಾಲಯ ಸಾಪ್ತಾಹಿಕ ರಾಜಯೋಗ ಶಿಕ್ಷಣದಲ್ಲಿ ಹೇಗೆ ತಿಳಿಸಿಕೊಡುತ್ತಾರೆ ಎಂಬುದನ್ನು ಸ್ಪಷ್ಟಪಡಿಸಿದರು. ಕಾರ್ಯಕ್ರಮದಲ್ಲಿ ಓಂ ಶಾಂತಿ ನ್ಯೂಸ್ ಸರ್ವಿಸ್ನ ಬಿ ಕೆ ಆರಾಧ್ಯ, ವೇದ ಮೂರ್ತಿ, ಶಿವಪುತ್ರ ಹೊನ್ನ ಮೇಟಿ ಸುಂದ್ರಪ್ಪ, ಅಕ್ಷತಾ ಜೈನ್, ನಾಗರಾಜ್, ಶಿವಸ್ವಾಮಿ, ಕೆಲಂಬಳ್ಳಿ, ಪುಟ್ಟಶೇಖರ ಮೂರ್ತಿ, ಶ್ರೀನಿವಾಸ್, ಶಿವಕುಮಾರ್, ಗೀತಾ, ಪುಷ್ಪ, ತ್ರಿವೇಣಿ, ಶಿವ ಕಮಲ, ಜಯಲಕ್ಷ್ಮಿ, ಶ್ರೀನಿವಾಸ್ ಮೂರ್ತಿ, ಸಿದ್ದಯ್ಯ ಮುಂತಾದವರು ಹಾಜರಿದ್ದರು
ಸಾವಿನ ಭಯಕ್ಕೆ ಆತ್ಮದ ಜ್ಞಾನದ ಕೊರತೆಯೇ ಮೂಲ ಕಾರಣ-
Leave a Comment
Leave a Comment
