ಆಧ್ಯಾತ್ಮಿಕ ಪರಿಸರದಲ್ಲಿ ಸಂಭ್ರಮದ ತ್ರಿವರ್ಣ ಧ್ವಜಾರೋಹಣ

latha prabhukumar
1 Min Read

ಪಬ್ಲಿಕ್ ಅಲರ್ಟ್ ನ್ಯೂಸ್:-ಆಧ್ಯಾತ್ಮಿಕ ಪರಿಸರದಲ್ಲಿ ಸಂಭ್ರಮದ ತ್ರಿವರ್ಣ ಧ್ವಜಾರೋಹಣ
ಮೖಸೂರು-ನಗರದ ಹುಣಸೂರು ರಸ್ತೆಯಲ್ಲಿರುವಅಂತರಾಷ್ಟ್ರೀಯ ಆಧ್ಯಾತ್ಮಿಕ ಸಂಸ್ಥೆ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಜ್ಞಾನ ಸರೋವರ ರಿಟ್ರೀಟ್ ಸೆಂಟರ್ ನಲ್ಲಿ ಸಂಭ್ರಮದ 80ನೇ ತ್ರಿವರ್ಣ ಧ್ವಜಾರೋಹಣವನ್ನು ಪ್ರಸಿದ್ಧ ಕನ್ನಡ ಚಿತ್ರ ನಟ ಜಯಪ್ರಕಾಶ್ ನೆರವೇರಿಸಿ ಸಂಭ್ರಮಿಸಿದರು.ನಂತರ ಮಾತನಾಡಿ ಅವರು, ನಮ್ಮ ಭಾರತ ದೇಶ ಹೆಮ್ಮೆಯ ದೇಶ. ಜಗತ್ತಿನಲ್ಲಿ 2ನೇ ದೇಶವಾಗಿ ಹೊರಹೊಮ್ಮುತ್ತಿದ್ದು, ವಿಶ್ವ ಗುರುವಾಗುವಲ್ಲಿ ಮುನ್ನುಗ್ಗುತ್ತಿದೆ ಎಂದು ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದರು. ಮೌಂಟ್ ಅಬುವಿನ ಯುವ ಸೇವಾ ವಿಭಾಗದ ವೈಸ್ ಚೇರ್ ಪರ್ಸನ್ ರಾಜಯೋಗಿ ಬ್ರಹ್ಮಾಕುಮಾರ ಆತ್ಮಪ್ರಕಾಶ್ ಭಾಯೀಜೀ ಮಾತನಾಡಿ ಆಧ್ಯಾತ್ಮಿಕತೆಯಿಂದ ಮಾತ್ರ ಯುವಕರು ಸಧೃಢರಾಗಿ ದೇಶ ಕಟ್ಟಲು ಸಾಧ್ಯ ಎಂದರು. ಪ್ರಾಂಶುಪಾಲರಾದ ಬಿಕೆ ರಂಗನಾಥಶಾಸ್ತ್ರೀಜೀ ಮಾತನಾಡಿ ತ್ರಿವರ್ಣ ಧ್ವಜವು 3 ಲೋಕ, 3 ಕಾಲ, ಸೃಷ್ಟಿ ಚಕ್ರ, ರಚೖತನ ಜ್ಞಾನದ ಧ್ಯೋತಕವಾಗಿದೆ. ಹಾಗೆಯೇ ಧ್ವಜರೋಹಣ, ಧ್ವಜ ಅನಾವರಣದ ಸಾಮ್ಯತೆಯನ್ನು ತಿಳಿಸಿದರು.ಆಧ್ಯಕ್ಷತೆವಹಿಸಿದ್ದ ರಾಜಯೋಗಿನಿ ಬ್ರಹ್ಮಾಕುಮಾರಿ ಡಾ||ಲಕ್ಷ್ಮೀಜೀ ಸಂದೇಶ ನೀಡಿ ಇಂದು ಇಡೀ ಜಗತ್ತು ಒಂದಲ್ಲ ಒಂದು ಕುಕರ್ಮಗಳಿಂದ ಪರತಂತ್ರದಲ್ಲಿದೆ. ಎಲ್ಲರಿಗೂ ಸತ್ಯ ಸ್ವತಂತ್ರ ಕೊಡಿಸಲು ಬಾಪೂಜಿಗೂ ಬಾಪೂ ಇಡೀ ಜಗತ್ತಿಗೇ ಬಾಪೂ ಆಗಿರುವ ತಂದೆ ಪರಮಾತ್ಮ ಬಂದು ಪಂಚವಿಕಾರಗಳ ಸರಪಳಿಯಲ್ಲಿ ಬಂಧಿತವಾಗಿರುವ ಮನುಷ್ಯಾತ್ಮರಿಗೆ ಸತ್ಯ ಸ್ವಾತಂತ್ರ್ಯ ಕೊಡಿಸಿರುವುದಕ್ಕೆ ಮುಕ್ತಿದಾತ ಎಂದು ಕರೆಯುತ್ತಾರೆ ಎಂದು ಆಶೀರ್ವಾದಿಸಿದರು.ಇಂದು ಇಡೀ ಯೋಗ ಭವನವು ತ್ರಿವರ್ಣ ಧ್ವಜ, ತ್ರಿಮೂರ್ತಿ ಶಿವ ಧ್ವಜ ಬಂಟಿಂಗ್ಸಗಳಿಂದ, ದೇಶ ಭಕ್ತಿಗೀತೆಗಳಿಂದರಾರಾಜಿಸುತ್ತಿತ್ತು.ಕಾರ್ಯಕ್ರಮದಲ್ಲಿ ರಾಜಯೋಗಿ ಬ್ರಹ್ಮಾಕುಮಾರ ಪ್ರಾಣೇಶ್, ಬಿಕೆ ಶಾರದಾಜೀ,ಶೋಭಾಜೀ, ಆರೋಗ್ಯ ಅಧಿಕಾರಿ ಪುಷ್ಪ ಗೀತಾ, ಮಂಜುಳಾಜೀ, ಶೋಭಾಜೀ, ಛಾಯಾಚಿತ್ರಗ್ರಾಹಕ ಕುಮಾರ್, ಪೃಥ್ವಿಜಿತ್ ಭಟ್ಟಾಚಾರ್ಯ,ಓಂ ಶಾಂತಿ ನ್ಯೂಸ್ ಸರ್ವಿಸ್ ನ ಬಿಕೆ ಆರಾಧ್ಯ, ರಾಜ್ಯಾದಂತ್ಯ ಆಗಮಿಸಿದ್ದ ಯುವ ರಾಜಯೋಗ ವಿದ್ಯಾರ್ಥಿ ಬ್ರಹ್ಮಾಕುಮಾರ, ಬ್ರಹ್ಮಾಕುಮಾರಿಯರು, ರಾಜಯೋಗ ಶಿಕ್ಷಕಿಯರು ಹಾಜರಿದ್ದು ಸಂಭ್ರಮಿಸಿದರು

Share This Article
Leave a Comment