ಮೈಸೂರಿನ ದೇವರಾಜ ಉಪವಿಭಾಗದ ದೇವರಾಜ ಠಾಣೆ ಪೊಲೀಸರು ಭರ್ಜರಿ ಕಾರ್ಯಾಚರಣೆ

latha prabhukumar
0 Min Read

ಪಬ್ಲಿಕ್ ಅಲರ್ಟ್ ನ್ಯೂಸ್:-ಮೈಸೂರಿನ ದೇವರಾಜ ಉಪವಿಭಾಗದ ದೇವರಾಜ ಠಾಣೆ ಪೊಲೀಸರು ಭರ್ಜರಿ ಕಾರ್ಯಾಚರಣೆ
ನಡೆಸಿದ್ದು, ಬೈಕ್ ಕಳ್ಳತನ ಮಾಡುತ್ತಿದ್ದ ಖದೀಮನನ್ನು ಬಂಧಿಸಿ ₹15 ಲಕ್ಷ ಮೌಲ್ಯದ 33 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಮತ್ತೊಂದೆಡೆ, ಲಷ್ಕರ್ ಠಾಣೆ ಪೊಲೀಸರು ಮೂವರು ಅಂತರರಾಜ್ಯ ಮಹಿಳಾ ಆರೋಪಿಗಳನ್ನು ಸೆರೆಹಿಡಿದು ₹13 ಲಕ್ಷ ಮೌಲ್ಯದ 107 ಗ್ರಾಂ ಚಿನ್ನದ ಸರಗಳನ್ನು ಜಪ್ತಿ ಮಾಡಿದ್ದಾರೆ.
ಡಿಸಿಪಿ ಸುಂದರರಾಜ್ ಕೆ.ಎಸ್ ರವರ ಮಾರ್ಗದರ್ಶನ ಹಾಗೂ ಎಸಿಪಿ ಕೆ.ರಾಜೇಂದ್ರ ನೇತೃತ್ವದಲ್ಲಿ ನಡೆದ ಈ ಯಶಸ್ವಿ ಕಾರ್ಯಾಚರಣೆಯನ್ನು ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ IPS ರವರು ಪ್ರಶಂಸಿಸಿದ್ದಾರೆ.

Share This Article
Leave a Comment