ಸದ್ವಿದ್ಯಾ ಕಾಲೇಜಿನಲ್ಲಿ ಸ್ವಾಗತ ಸಮಾರಂಭದಿನಾಂಕ : 23-05-2026 ರಂದು ಪ್ರಥಮ ಪಿ. ಯು. ಸಿ ವಿದ್ಯಾರ್ಥಿಗಳಿಗೆ ಜಗನ್ಮೋಹನ ಅರಮನೆಯ ಸಭಾಂಣದಲ್ಲಿ ಸ್ವಾಗತ ಸಮಾರಂ ಭವನ್ನು ಹಮ್ಮಿಕೊಳ್ಳಲಾಗಿತ್ತು.

latha prabhukumar
2 Min Read

ಪಬ್ಲಿಕ್ ಅಲರ್ಟ್ ನ್ಯೂಸ್:-ಸದ್ವಿದ್ಯಾ ಕಾಲೇಜಿನಲ್ಲಿ ಸ್ವಾಗತ ಸಮಾರಂಭ
ದಿನಾಂಕ : 23-05-2026 ರಂದು ಪ್ರಥಮ ಪಿ. ಯು. ಸಿ ವಿದ್ಯಾರ್ಥಿಗಳಿಗೆ ಜಗನ್ಮೋಹನ ಅರಮನೆಯ ಸಭಾಂಣದಲ್ಲಿ ಸ್ವಾಗತ ಸಮಾರಂ ಭವನ್ನು ಹಮ್ಮಿಕೊಳ್ಳಲಾಗಿತ್ತು. ಆಡಳಿತ ಮಂಡಳಿಯ ಗಣ್ಯರು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಆಡಳಿತ ಮಂಡಳಿಯ ಗಣ್ಯರನ್ನು ಹಾಗೂ ನೆರೆದಿರುವ ವಿದ್ಯಾರ್ಥಿಗಳನ್ನು ಮತ್ತು ಪೋಷಕರನ್ನು ಪ್ರಾಂಶುಪಾಲಾರದ ಶ್ರೀ ವೈ. ಆರ್. ರಮೇಶ ಅವರು ಪ್ರೀತಿಪೂರ್ವಕವಾಗಿ ಸ್ವಾಗತಿಸಿದರು. ಶೈಕ್ಷಣಿಕ ವರ್ಷದ ಬಗೆಗೆ ಮಾರ್ಗದರ್ಶನ ಹಾಗೂ ಮಾಹಿತಿಗಳನ್ನು ನೀಡಿದರು. ಇದೇ ವೇಳೆ ಬೋಧಕ ಹಾಗೂ ಬೋಧಕೇತರರನ್ನು ಪರಿಚಯಿಸಲಾಯಿತು. ದ್ವಿತೀಯ ಪಿ. ಯು. ಸಿ. ಯಲ್ಲಿ ಅತೀ ಹೆಚ್ಚು ಅಂಕಗಳಿಸಿ ರಾಜ್ಯಕ್ಕೆ ರಾಂಕ್ ಪಡೆದ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಾದ ಕೆ. ಚಿತ್ರಸ್ಫೂರ್ತಿ (ರಾಜ್ಯಕ್ಕೆ ನಾಲ್ಕನೇ ಸ್ಥಾನ), ಸಂಜನಾ ಎಸ್ , ಭಕ್ತಿ ಎ ಜೈನ್, ಮಾನ್ಯ ಆರ್, ರಿಷಿತ್ ಗೌಡ ಎಂ. ಎನ್, ರಿಯಾ ಪಿ. ಜೈನ್, ವಿದ್ಯಾ ಎಂ. ಇವರಿಗೆ ರಜತ ಫಲಕ ಮತ್ತು ಪದಕಗಳನ್ನು ನೀಡಿ ಪುರಸ್ಕಾರಿಸಲಾಯಿತು. ಇದೇ ವೇಳೆ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಉಪಾಧ್ಯಕ್ಷರಾದ ಶ್ರೀ ಎಸ್. ಬಾಲಾಜಿ ಅವರು ಮಾತನಾಡುತ್ತಾ ಕಲಿತ ವಿದ್ಯೆಯನ್ನು ಸದ್ವಿನಿಯೋಗ ಮಾಡಿಕೊಳ್ಳಿ, ಇದು ಅತ್ಯಂತ ಪ್ರಮುಖ ಘಟ್ಟ, ಯಶಸ್ಸು ನಿಮ್ಮದಾಗಲಿ ಎಂದರು. ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಶ್ರೀ ಎಂ. ಡಿ. ಗೋಪಿನಾಥ್ ಅವರು ನಮ್ಮಲ್ಲಿರುವ ಶಿಕ್ಷಕರೇ ನಮ್ಮ ಶಕ್ತಿ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಗೌರವ ಅಧ್ಯಕ್ಷರಾದ ಪ್ರೊ. ಎಂ. ಎಸ್. ಕೆ. ನರಹರಿ ಬಾಬು ಅವರು ಮಾತನಾಡುತ್ತಾ ಇದು ನಿಮ್ಮ ಜೀವನದ ಪ್ರಮುಖ ಹಂತ ಹಾಗಾಗಿ ಸಮಯವನ್ನು ಸರಿಯಾಗಿ ಉಪಯೋಗಿಸಿಕೊಳ್ಳಿ, ಸಾಧನೆ ಮಾಡಿ, ಅಸಾಧ್ಯವಾದದ್ದು ಯಾವುದೂ ಇಲ್ಲ ಎಂದರು . ಸಹಕಾರ್ಯದರ್ಶಿಗಳಾದ ಕೆ. ಎನ್. ಫಣೀಶ್ ಹಾಗೂ ಆಡಳಿತ ಮಂಡಳಿಯ ಹಿರಿಯ ಸದಸ್ಯರಾದ ಸಿ. ಎನ್. ನಾಗರಾಜು ಅವರು ಉಪಸ್ಥಿತರಿದ್ದರು. ಉಪ ಪ್ರಶುಪಾಲಾರದ ಶ್ರೀಮತಿ ಇಂದುಮತಿ ಜಿ. ಕೆ. ಅವರು ಎಲ್ಲರನ್ನೂ ವಂದಿಸಿದರು. ಶೀಮತಿ ಶ್ರೀವಿದ್ಯಾ ಟಿ. ಎನ್. ಅವರು ಕಾರ್ಯಕ್ರಮಕ್ಕೆ ಪ್ರಾರ್ಥನೆ ಸಲ್ಲಿಸಿದರು. ಡಾ. ಕೃ ಪಾ ಮಂಜುನಾಥ್ ಅವರು ಕಾರ್ಯಕ್ರಮದ ನಿರೂಪಣೆಯನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟರು.

Share This Article
Leave a Comment