ಪಬ್ಲಿಕ್ ಅಲರ್ಟ್ ನ್ಯೂಸ್:-ಮದುವೆ, ಹಾಗೂ ಶುಭಕಾರ್ಯಗಳಿಗೆ ಮೆರಗು ನೀಡಲು ಮೈಸೂರಿನಲ್ಲಿ ವಿನೂತನ ಆಭರಣ ಪ್ರದರ್ಶನ ಮತ್ತು ಮಾರಟವನ್ನು ಒಂದೇ ವೇದಿಕೆಯಲ್ಲಿ ಪ್ರಸ್ತುತಪಡಿಸುತ್ತಿದ್ದೇವೆ
ದೇಶದ 20 ಅಗ್ರ ಶ್ರೇಣಿಯ ಆಭರಣ ತಯಾರಕರು ಭಾಗವಹಿಸುತ್ತಿರುವ “ದ ಜ್ಯುವೆಲರಿ ಷೋ” ಪ್ರದರ್ಶನ ಮತ್ತು ಮಾರಾಟದ ಉತ್ಸವಕ್ಕೆ ನಿಮಗೆ ಆದರದ ಸ್ವಾಗತ.
ಅಮೋಘವಾದ ಭಾರತೀಯ ಒಡವೆಗಳ ಉತ್ಸವವನ್ನು ಇದೇ ಸೆಪ್ಟೆಂಬರ್ 04, 05 & 06, 2026 ರಂದು ರ್ಯಾಡಿಸನ್ ಬ್ಲೂ ಹೋಟಲ್”ನಲ್ಲಿ ಆಯೋಜಿಸಲಾಗಿದ್ದು, ಈ ಆಭರಣ ಮೇಳವನ್ನು ಜನಪ್ರಿಯ ನಟಿ “ಸೋನಲ್ ಮೊಂಥೆರೋ” ಅವರು ಶುಕ್ರುವಾರ ಸೆಪ್ಟೆಂಬರ್ 04, 2026 ಮಧ್ಯಾಹ್ನ 12:30 ಕ್ಕೆ ಉದ್ಘಾಟಿಸಲಿದ್ದಾರೆ.
ಆಭರಣ ಎಂದರೆ ಮಹಿಳೆಯರಿಗೆ ಅಚ್ಚುಮೆಚ್ಚಿನದಾಗಿದ್ದು, ನಂಬಿಕಸ್ತ ಹೂಡಿಕೆಯೂ ಆಗಿದೆ. ಈ ಮೇಳದಲ್ಲಿ ಪ್ರಶಸ್ತಿ ವಿಜೇತ ಹಾಗೂ ಹೆಸರಾಂತ ಆಭರಣ ಮಳಿಗೆಗಳವರು ಭಾಗವಹಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಮುಂಬರುವ ಮದುವೆ ಸಮಾರಂಭ ಹಾಗೂ ಹಬ್ಬದ ಶುಭ ಸಂದರ್ಭದಲ್ಲಿ ಆಭರಣಗಳನ್ನು ಕೊಳ್ಳಲು ಇದೊಂದು ಉತ್ತಮ ವೇದಿಕೆಯಾಗಿದೆ. ಮೈಸೂರು ನಗರ ಮತ್ತು ಸುತ್ತಮುತ್ತಲಿನ ನಾಗರೀಕರಿಗೆ ಆಭರಣಗಳನ್ನು ನೋಡಲು ಮತ್ತು ಕೊಳ್ಳಲು ಈ ಮೇಳದ ಮೂಲಕ ಅನುವು ಮಾಡಿಕೊಡಲಾಗಿದೆ. ಭಾರತ ದೇಶದ ವಿವಿಧ ಕುಶಲಕರ್ಮಿಗಳು ತಯಾರಿಸಿದಂತಹ ವಿಭಿನ್ನ ಶೈಲಿಯ ಆಭರಣಗಳು ಈ ಮೇಳದಲ್ಲಿ ದೊರೆಯಲಿವೆ.
ಈ ಮೇಳವನ್ನು ಗೋಲ್ಡನ್ ಕ್ರೀಪರ್ ಸಂಸ್ಥೆಯ ಜಗದೀಶ ಬಿ.ಎನ್ ಮತ್ತು ಹೇಮಲತಾ ಜಗದೀಶ್ ಆಯೋಜಿಸಿದ್ದಾರೆ.
ಹೆಸರಾಂತ ಆಭರಣ ಮಳಿಗೆಗಳು ಭಾಗವಹಿಸಲಿರುವ ಈ ಮೇಳದಲ್ಲಿ ವಿಶೇಷ ವಿನ್ಯಾಸಗಳನ್ನೊಳಗೊಂಡ ಆಭರಣಗಳನ್ನು ಪ್ರದರ್ಶನ ಹಾಗೂ ಮಾರಟಕ್ಕೆs ಇಟ್ಟಿರುತ್ತಾರೆ. ಎಲ್ಲಾ ಚಿನ್ನದ ಆಭರಣಗಳು BIS ಹಾಲ್ ಮಾರ್ಕ್ ಹೊಂದಿರುತ್ತದೆ, ವಜ್ರಾಭರಣಗಳು ಅಂತರರಾಷ್ಟ್ರೀಯ ಗುಣಮಟ್ಟದ GIA/IGI ಪ್ರಮಾಣಿತ ಹೊಂದಿರುತ್ತದೆ. ಆಭರಣ ಮಳಿಗೆಗಳ ಸದಸ್ಯರು, ಚಿನ್ನಾಭರಣ ಮತ್ತು ವಜ್ರಾಭರಣ ಬಗ್ಗೆ ಎಲ್ಲಾ ತರಹದ ಉಚಿತ ಮಾಹಿತಿಯನ್ನು ನೀಡುತ್ತಾರೆ. ಖರೀದಿದಾರರು ಹಳೇ ಚಿನ್ನವನ್ನು ಬದಲಾಯಿಸಿಕ್ಕೊಳ್ಳುವ ಅವಕಾಶವನ್ನು ಕಲ್ಪಿಸಲಾಗಿದೆ. ಮೇಳದ ನಂತರವೂ ಗ್ರಾಹಕರಿಗೆ ಆಭರಣಗಳಿಗೆ ಸಂಬoಧಿಸಿದ ಸೇವೆಯನ್ನು ಒದಗಿಸಲಾಗುವುದು. ಮೈಸೂರಿನ ಸುತ್ತ ಮುತ್ತಲಿನ ಜನರ ಅಭಿರುಚಿಯನ್ನು ಅರಿತು ಅವರ ಇಚ್ಛೆಗನುಗುಣವಾಗಿ ಆಭರಣಗಳನ್ನು ತಯಾರಿಸಲಾಗಿದೆ. ಮುಂದಿನ ದಿನಗಳಲ್ಲಿ ಬರುವಂತಹ ಹಬ್ಬ ಹರಿದಿನಗಳಿಗೆ ಹಾಗೂ ಮದುವೆ ಸಮಾರಂಭಗಳಿಗೆ ಆಭರಣ ಖರೀದಿಸಲು ಒಂದೇ ವೇದಿಕೆಯಲ್ಲಿ ಭಾರತದ 20 ಹೆಸರಾಂತ ಆಭರಣ ಮಳಿಗೆಗಳು ಕಣ್ಣುಗಳಿಗೆ ರಸದೌತಣ ನೀಡಲಿವೆ.
ಬೆಂಗಳೂರಿನಿoದ ಗಜರಾಜ್, ಸಿಂಹ ಜ್ಯುವೆರ್ಸ್, ಪಂಚಕೇಸರಿ ಬಡೇರಾ, ಶ್ರೀ ಗಣೇಶ್ ಡೈಮೆಂಡ್ಸ್, ನಿರ್ಮಲ್ ಜ್ಯುವೆರ್ಸ್, ಲುವೇರಾ, ಪನ್ನ ಜ್ಯುವೆರ್ಸ್(ಹೈದರಬಾದ್), ಅರ್ಹಮ್(ಕೋಲ್ಕತ), ಆರ್ಟ ಇಂಡಿಯಾ ಸಪ್ತೋಷಿ, ರೂಪಂ ಸಿಲ್ವರ್, ಸ್ಟೈಲ್ ಓರಾ , ಮದನ್ ಜೆಮ್ಸ್. ಮೈಸೂರಿನಿಂದ ಡಾರ್ಲ ಗೋಲ್ಡ್, ರಾಜ್ ಡೈಮೆಂಡ್ಸ್, ಪ್ರಕಾಶ್ ಜ್ಯುವೆರ್ಸ್, ಓರಾ ಬೈ ನೀಲಕಂಠ, ಭಾಗವಹಿಸುತ್ತಿರುವ ಆಭರಣ ಮಳಿಗೆಗಳು.
ಗ್ರಾಹಕರ ಅಭಿರುಚಿ ಮತ್ತು ಬಜೆಟ್ಗನುಗುಣವಾಗಿ ಚಿನ್ನ ಮತ್ತು ವಜ್ರದ ಆಭರಣಗಳು ಮೈಸೂರಿನ ಜನತೆಗೆ ದೊರೆಯಲಿವೆ. ಈ ಬಾರಿಯ ಮೇಳದಲ್ಲಿ ಎಲ್ಲಾ ಆಭರಣ ಪ್ರಿಯರು ಪ್ರದರ್ಶನದಲ್ಲಿಟಿರುವಂತಹ ಆಭರಣವನ್ನು ಕಂಡು ರೋಮಾಂಚನಗೊಳ್ಳುತ್ತಾರೆoಬ ಭರವಸೆ ನಮಗಿದೆ, ಈ ಮೇಳವು ಎಲ್ಲಾ ರೀತಿಯ ಗ್ರಾಹಕರಿಗೆ ಖಂಡಿತವಾಗಿಯೂ ತೃಪ್ತಿದಾಯಕವಾಗಿರುತ್ತದೆ, ಈ ಪ್ರದರ್ಶನ ಕೇವಲ 3 ದಿನಗಳಾಗಿದ್ದು, ಸರ್ವರು ಇದರ ಲಾಭ ಪಡೆಯಬೇಕೆಂದು ಗೋಲ್ಡನ್ ಕ್ರೀಪರ್ ಸಂಸ್ಥೆ ಕೋರಿದೆ.
ಮದುವೆ, ಹಾಗೂ ಶುಭಕಾರ್ಯಗಳಿಗೆ ಮೆರಗು ನೀಡಲು ಮೈಸೂರಿನಲ್ಲಿ ವಿನೂತನ ಆಭರಣ ಪ್ರದರ್ಶನ ಮತ್ತು ಮಾರಟವನ್ನು ಒಂದೇ ವೇದಿಕೆಯಲ್ಲಿ
Leave a Comment
Leave a Comment
