ದತ್ತಾಂಶದ ಮೂಲಕ ಪರಿಹಾರ ಕಂಡುಕೊಳ್ಳಲು ಹಾಗೂ ವೆಬ್ ಮತ್ತು ಮೊಬೈಲ್ ಅನ್ವಯಿಕೆಗಳನ್ನು ತಯಾರಿಸಲು, ಈ ಜಿಲ್ಲಾ ಮಟ್ಟದ ಕೆ-ಜಿಐಎಸ್ 2.0 ಕಾರ್ಯಾಗಾರ ಸಹಕಾರಿ: ಡಾ ರಾಜೇಶ್ ಎಲ್ ಎನ್

latha prabhukumar
3 Min Read

ಪಬ್ಲಿಕ್ ಅಲರ್ಟ್ ನ್ಯೂಸ್:-ದತ್ತಾಂಶದ ಮೂಲಕ ಪರಿಹಾರ ಕಂಡುಕೊಳ್ಳಲು ಹಾಗೂ ವೆಬ್ ಮತ್ತು ಮೊಬೈಲ್ ಅನ್ವಯಿಕೆಗಳನ್ನು ತಯಾರಿಸಲು, ಈ ಜಿಲ್ಲಾ ಮಟ್ಟದ ಕೆ-ಜಿಐಎಸ್ 2.0 ಕಾರ್ಯಾಗಾರ ಸಹಕಾರಿ: ಡಾ ರಾಜೇಶ್ ಎಲ್ ಎನ್

ಏಪ್ರಿಲ್ 22 (ಕರ್ನಾಟಕ ವಾರ್ತೆ) ದತ್ತಾಂಶದ ಮೂಲಕ ಪರಿಹಾರ ಕಂಡುಕೊಳ್ಳಲು ಹಾಗೂ ವೆಬ್ ಮತ್ತು ಮೊಬೈಲ್ ಅನ್ವಯಿಕೆಗಳನ್ನು ತಯಾರಿಸಲು, ಈ ಜಿಲ್ಲಾ ಮಟ್ಟದ ಕೆ-ಜಿಐಎಸ್ 2.0 ಕಾರ್ಯಾಗಾರ ಸಹಕಾರಿ ಎಂದು ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರ ನಿರ್ದೇಶಕರಾದ ಡಾ. ರಾಜೇಶ್ ಎನ್.ಎಲ್, ಅವರು ತಿಳಿಸಿದರು.

ಇಂದು ಜಿಲ್ಲಾ ಪಂಚಾಯತ್ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸ್ಥಳೀಯ ಆಡಳಿತಕ್ಕಾಗಿ ಜಿ ಐ ಎಸ್ ಆಧಾರಿತ ಮಾಹಿತಿಯನ್ನು ತಲುಪಿಸುವ ತಾಂತ್ರಿಕ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಇ-ಆಡಳಿತ), ಕರ್ನಾಟಕ ಸರ್ಕಾರ ವು ಸ್ಥಾಪನೆಗೊಂಡ ಬಗ್ಗೆ ಹಾಗೂ ನಂತರದ ದಿನಗಳಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಹಲವು ಮಹತ್ವದ ಯೋಜನೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಬಗ್ಗೆ ವಿವರಿಸಿದರು. ಕೆ-ಜಿಐಎಸ್ ಆವೃತ್ತಿ 1.0 ಅನ್ನು 2016 ರಲ್ಲಿ ಅನುಷ್ಟಾನಗೊಳಿಸಲಾಗಿದ್ದು, ಸುಮಾರು 600 ಜಿಐಎಸ್ ಪದರಗಳು ಮತ್ತು 20 ಲಕ್ಷ ಸರ್ಕಾರಿ ಆಸ್ತಿಗಳ ಮಾಹಿತಿಯನ್ನು ಕೆ-ಜಿಐಎಸ್ ಪೋರ್ಟಲ್‌ನಲ್ಲಿ ಒಂದೇ ಸೂರಿನಲ್ಲಿ ಲಭ್ಯವಾಗುವಂತೆ ತಂತ್ರಜ್ಞಾನವನ್ನು ಕೆಎಸ್‌ಆರ್‌ಎಸ್‌ಎಸಿ ಕೇಂದ್ರವು ಅಭಿವೃದ್ಧಿಪಡಿಸಿದೆ. ಇದರಲ್ಲಿ41 ಮೊಬೈಲ್ ಅನ್ವಯಿಕೆಗಳು ಮತ್ತು 60 ವೆಬ್ ಅನ್ವಯಿಕೆಗಳು ಲಭ್ಯವಿದ್ದು, ನಾಗರಿಕರು ಮತ್ತು ಇಲಾಖೆಗಳು ಬಳಸಿಕೊಳ್ಳುತ್ತಿರುವುದಾಗಿ ತಿಳಿಸಿದರು.

ದಿಶಾಂಕ್ ಆ್ಯಪ್ ನಲ್ಲಿ ಯಾವ ಆಸ್ತಿ ಯಾರ ಹೆಸರಿನಲ್ಲಿ ಇದೆ ಎಂಬುದನ್ನು ತಿಳಿಯಬಹುದಾಗಿದೆ. ಅದೇ ರೀತಿ ಎರಡು ಮೂರು ದಿನಗಳ ಮುಂಚೆ ಹವಾಮಾನದ ವರದಿಯನ್ನು ನಿರ್ದಿಷ್ಟ ಆಪ್ ಮೂಲಕ ಪಡೆಯಬಹುದಾಗಿದೆ. ಮೈಸೂರು ಮೂಡಾ ಗೆ 2009 ರಲ್ಲಿ ಮೂಡಾ ವ್ಯಾಪ್ತಿಯ ಆಸ್ತಿಗಳ ಬಗ್ಗೆ ಜಿಯೋ ಮ್ಯಾಪ್ ಮಾಡಿಕೊಡಲಾಗಿತ್ತು. 2016 ರಲ್ಲಿ ಕೆ ಜಿ ಐ ಎಸ್ 1.0 ಜಾರಿಗೆ ತರಲಾಗಿತ್ತು. 2024 ರಲ್ಲಿ ಕೆ ಜಿ ಐ ಎಸ್ 2.0 ಅನ್ನು ಅಭಿವೃದ್ಧಿ ಪಡಿಸಲಾಗಿದೆ. ಇದಕ್ಕೆ ಗೋಲ್ಡ್ ಅವಾರ್ಡ್ ದೊರೆತಿದೆ ಎಂದು ಮಾಹಿತಿ ನೀಡಿದರು.

ಕೆ-ಜಿಐಎಸ್ ಯೋಜನೆಗೆ 2024 ನೇ ಸಾಲಿನ ರಾಷ್ಟ್ರೀಯ ಇ-ಆಡಳಿತ ಚಿನ್ನದ ಪ್ರಶಸ್ತಿಯು ಕೇಂದ್ರಕ್ಕೆ ಲಭಿಸಿರುವುದನ್ನು ಉಲ್ಲೇಖಿಸಿದರು..
ಮುಂದುವರೆದು ಕೆ-ಜಿಐಎಸ್ 2.0 ಜಿಲ್ಲಾ ಮಟ್ಟದ ಕಾರ್ಯಾಗಾರದ ಮುಖ್ಯ ಉದ್ದೇಶಗಳ ಕುರಿತು ಮಾತನಾಡುತ್ತಾ, ಪ್ರತಿ ಜಿಲ್ಲೆ,ತಾಲ್ಲೂಕು, ಗ್ರಾಮ ಪಂಚಾಯಿತಿ ತನ್ನದೇ ಆದ ವೈಶಿಷ್ಟ್ಯಗಳ ಜೊತೆಗೆ ಸ್ಥಳೀಯ ಸಮಸ್ಯೆ ಹೊಂದಿದ್ದು, ಈ ಸಮಸ್ಯೆಗಳಿಗೆ ಭೂದೈಶಿಕ ದತ್ತಾಂಶದ ಮೂಲಕ ಪರಿಹಾರ ಕಂಡುಕೊಳ್ಳಲು ಹಾಗೂ ವೆಬ್ ಮತ್ತು ಮೊಬೈಲ್ ಅನ್ವಯಿಕೆಗಳನ್ನು ತಯಾರಿಸಲು, ಈ ಜಿಲ್ಲಾ ಮಟ್ಟದ ಕೆ-ಜಿಐಎಸ್ 2.0 ಕಾರ್ಯಾಗಾರವನ್ನು ಜಿಲ್ಲಾಡಳಿತದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಅಪರ ಜಿಲ್ಲಾಧಿಕಾರಿಗಳಾದ ಡಾ ಪಿ ಶಿವರಾಜು ಅವರು ಮಾತನಾಡಿ ತಾಂತ್ರಿಕತೆಗೆ ಎ ಐ ತಂತ್ರಜ್ಞಾನ ಬಂದು ಆವರಿಸಿಕೊಳ್ಳುತ್ತಿದೆ. ಕೆ ಎಸ್ ಆರ್ ಎಸ್ ಎ ಸಿ ಮಾಡಿಕೊಟ್ಟಿರುವ ಅಪ್ಲಿಕೇಶನ್ ಗಳು ಕರಾರವಕ್ಕಾಗಿ ಇವೆ. ಈ ಅಪ್ಲಿಕೇಶನ್ ಗಳು ಸುರಕ್ಷಿತವಾಗಿವೆ. ನೀವು ಈ ಕೇಂದ್ರಕ್ಕೆ ಭೇಟಿ ನೀಡಿ ಜ್ಞಾನವನ್ನು ಪಡೆದುಕೊಳ್ಳಿ. ಈ ಸಂಸ್ಥೆ ಇಂದಿಗೂ ನಂ ಒನ್ ಸ್ಥಾನವನ್ನು ಉಳಿಸಿಕೊಂಡಿದೆ ಎಂದರು.

ಸಿ ಸಿ ಎಫ್ ರವಿಶಂಕರ್ ಅವರು ಮಾತನಾಡಿ ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆಯಾಗಿದೆ. ದಿಶಾಂಕ್ ಅಪ್ ನಲ್ಲಿ ಭೂಮಿಯ ಮಾಲೀಕತ್ವ ತಿಳಿಯಬಹುದಾಗಿದೆ. ಅರಣ್ಯ ಇಲಾಖೆಯ ವಿಷಯಕ್ಕೆ ಬಂದಾಗ ನಮ್ಮ ಇಲಾಖೆಯ ಭೂಮಿಯ ಸಮಸ್ಯೆ ಬಂದಾಗ ನಾವು ಈ ಕೇಂದ್ರವನ್ನು ಸಂಪರ್ಕಿಸುತ್ತೇವೆ. ಈ ಸಂಸ್ಥೆಯು ನಮ್ಮ ಇಲಾಖೆಯ ಜೊತೆಗೆ ಉತ್ತಮ ಬಾಂಧವ್ಯವನ್ನು ಹೊಂದಿದೆ ಎಂದು ಮಾಹಿತಿ ನೀಡಿದರು.

ಉಪ ಪೊಲೀಸ್ ಅಧೀಕ್ಷಕರಾದ ಸಿ ಮಲ್ಲಿಕ್ ಅವರು ಮಾತನಾಡಿ ನಾವು ತಂತ್ರಜ್ಞಾನವನ್ನು ಅಳವಡಿಸಿಕೊಂಡಿದ್ದು ಸಿಗ್ನಲ್ ಗಲ್ಲಿ ಅಳವಡಿಸಿರುವ ತಂತ್ರಜ್ಞಾನದಿಂದ ರಸ್ತೆ ನಿಯಮಗಳನ್ನು ಮೀರಿದರೆ ಸಂಬಂದಿಸಿದ ವಾಹನ ಮಾಲೀಕರಿಗೆ ಅಟೋಮೆಟಿಕ್ ಆಗಿ ಫೈನ್ ಬೀಳುತ್ತದೆ. ಸಿಗ್ನಲ್ ಗಳು ತಂತ್ರಜ್ಞಾನದ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತವೆ. ಅರಣ್ಯ ಅಂಚಿನ ಜಾಗಗಳಲ್ಲಿ ಭೂಮಿಯ ವ್ಯಾಪ್ತಿ ಗುರುತಿಸುವುದು ಒಂದು ಸಮಸ್ಯೆಯಾಗಿದ್ದು ಈ ಸಂಸ್ಥೆ ಆಪ್ ಸಿದ್ಧಪಡಿಸಿರುವುದರಿಂದ ಸಮಸ್ಯೆ ಬಗೆಹರಿಯುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾರ್ಯಾಗಾರದಲ್ಲಿ ಸಿ ಸಿ ಎಫ್ ರವಿಶಂಕರ್, ಪೊಲೀಸ್ ಉಪ ಅಧೀಕ್ಷಕರಾದ ಮಲ್ಲಿಕ್, ಉಪ ಪೊಲೀಸ್ ಆಯುಕ್ತರಾದ ಕೆ ಎಸ್ ಸುಂದರ್ ರಾಜ್ ಮುಖ್ಯ ಯೋಜನಾಧಿಕಾರಿ ಪ್ರಭುಸ್ವಾಮಿ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಸವಿತಾ ಅವರು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Share This Article
Leave a Comment