ಮೇಟಿಯವರ ಕನಸು ನನಸಾಗಿದೆ. ಆದರೆ ಅವರೇ ಇಲ್ಲ: ಸಿ.ಎಂ

latha prabhukumar
1 Min Read

ಪಬ್ಲಿಕ್ ಅಲರ್ಟ್ ನ್ಯೂಸ್:-ಬಾಗಲಕೋಟೆಗೆ ಉತ್ತಮ ಆರೋಗ್ಯ ಕಲ್ಪಿಸಬೇಕು ಎನ್ನುವುದು ಎಚ್.ವೈ.ಮೇಟಿಯವರ ಕನಸಾಗಿತ್ತು: ಸಿ.ಎಂ.ಸಿದ್ದರಾಮಯ್ಯ

ಮೇಟಿಯವರ ಕನಸು ನನಸಾಗಿದೆ. ಆದರೆ ಅವರೇ ಇಲ್ಲ: ಸಿ.ಎಂ

ಬಾಗಲಕೋಟೆ ಏ3:
ಬಾಗಲಕೋಟೆಗೆ ಉತ್ತಮ ಆರೋಗ್ಯ ವ್ಯವಸ್ಥೆ ಕಲ್ಪಿಸಬೇಕು ಎನ್ನುವುದು ಎಚ್.ವೈ.ಮೇಟಿಯವರ ಕನಸಾಗಿತ್ತು. ಇವರ ಕನಸಿನಂತೆ ಮೆಡಿಕಲ್ ಕಾಲೇಜು ಬರುತ್ತಿದೆ. ಕನಸು ನನಸಾಗುತ್ತಿರುವುದನ್ನು ನೋಡಲು ಎಚ್.ವೈ.ಮೇಟಿಯವರೇ ಜೊತೆಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.

ಇಲ್ಲಿನ ನವನಗರ ಕಾಲೋನಿಯಲ್ಲಿ ಆಯೋಜಿಸಿದ್ದ ಬಹಿರಂಗ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿಯವರ ಪರ ಮತಯಾಚಿಸಿ ಮಾತನಾಡಿದರು.

ಬಾಗಲಕೋಟೆಗೆ ಮೆಡಿಕಲ್ ಕಾಲೇಜು ತರಲು ಎಚ್.ವೈ.ಮೇಟಿಯವರು ಬಹಳ ಶ್ರಮಿಸಿದ್ದರು. ಅವರ ಶ್ರಮದಂತೆ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಕಾಮಗಾರಿ ನಡೆಯುತ್ತಿದೆ. ಅವರ ಈ‌ ಸಾಧನೆಯನ್ನು ನೋಡಲು ಅವರೇ ಇಲ್ಲ‌ ಎಂದು ನುಡಿದರು.

ಈಗ ಎಚ್.ವೈ.ಮೇಟಿಯವರ ಬದಲಿಗೆ ಅವರ ಪುತ್ರ ಉಮೇಶ್ ಮೇಟಿ ಕಣದಲ್ಲಿದ್ದಾರೆ. ಇವರನ್ನು ಅತಿ ಹೆಚ್ಚು ಅಂತರದಿಂದ ಗೆಲ್ಲಿಸಿ ಕಳುಹಿಸಿದರೆ ತಂದೆಯವರ ಅಭಿವೃದ್ಧಿ ಕೆಲಸಗಳನ್ನು ಮಗ ಮುಂದುವರೆಸುತ್ತಾರೆ ಎಂದರು.

ಬಿಜೆಪಿ ಗೆ ರಾಜ್ಯದ ಜನತೆ ಯಾವತ್ತೂ ಸ್ವಂತ ಬಲದಿಂದ ಅಧಿಕಾರ ನಡೆಸಲು ಆವಕಾಶ ನೀಡಿಲ್ಲ. ಆಪರೇಷನ್ ಕಮಲದ ಮೂಲಕ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದರೂ ಅಭಿವೃದ್ದಿ ಕಾರ್ಯಕ್ರಮಗಳನ್ನು ನಡೆಸದೆ ಹಣ ಲೂಟಿ ಮಾಡಿ ಹೋದರು. ಇವರು ಕಾಂಗ್ರೆಸ್ಸಿಗೆ ಬುದ್ದಿ ಹೇಳಲು ಬಂದಿದ್ದಾರೆ.

ಆದ್ದರಿಂದ ಈ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿಯವರನ್ನು ಗೆಲ್ಲಿಸಿ ಕ್ಷೇತ್ರದ ಅಭಿವೃದ್ದಿಗೆ ಸಹಕರಿಸಿ ಎಂದು ಮನವಿ ಮಾಡಿದರು.

Share This Article
Leave a Comment