ಆರ್ ಎಸ್ ಎಸ್ ಬ್ಯಾನ್ ಯಾರಿಂದಲೂ ಅಸಾಧ್ಯ: ಯತ್ನಾಳ್ ನುಡಿ

Pratheek
2 Min Read

ಪಬ್ಲಿಕ್ ಅಲರ್ಟ್

ಮದ್ದೂರು,ಅ.13-
ಆರ್‌ಎಸ್‌ಎಸ್ ಬ್ಯಾನ್ ಮಾಡಲು ಜಗತ್ತಿನ ಯಾವುದೇ ದೃಷ್ಟಶಕ್ತಿಯಿಂದಲೂ ಸಾಧ್ಯವಿಲ್ಲ ಎಂದು
ವಿಜಯಪುರ ಶಾಸಕ ಬಸವನಗೌಡ ಆರ್.ಪಾಟೀಲ್ (ಯತ್ನಾಳ್) ತಿಳಿಸಿದರು.
ಪಟ್ಟಣದ ಪುರಾಣ ಪ್ರಸಿದ್ಧ ಶ್ರೀ ಹೊಳೆ ಆಜಂನೇಯಸ್ವಾಮಿ ದೇಗುದಲ್ಲಿ ಭಾನುವಾರ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದರು.
ಆರ್‌ಎಸ್‌ಎಸ್ ಬ್ಯಾನ್ ಮಾಡುವಂತೆ ಸಚಿವ ಪ್ರಿಯಾಂಕ ಖರ್ಗೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ ಇದು ಮೂರ್ಖತನದ ವಿಚಾರ. ಜವಹರ್‌ಲಾಲ್ ಇಂದ ಇಲ್ಲಿಯವರೆಗೆ ಎಲ್ಲರು ಪ್ರಯತ್ನ ಮಾಡಿದ್ದಾರೆ. ಆರ್‌ಎಸ್‌ಎಸ್ ಬ್ಯಾನ್ ಮಾಡಲು ಜಗತ್ತಿನ ಯಾವುದೇ ದೃಷ್ಟಶಕ್ತಿಯಿಂದಲೂ ಸಾಧ್ಯವಿಲ್ಲ ಎಂದರು.
ಆರ್‌ಎಸ್‌ಎಸ್ ಅಸ್ತಿತ್ವದಲ್ಲಿದೆ ಜನಪರವಾಗಿ ಉತ್ತಮವಾಗಿ ಕೆಲಸ ಮಾಡುತ್ತಿದೆ. ಆದ್ದರಿಂದ ಆರ್‌ಎಸ್‌ಎಸ್ ಅನ್ನು ಅಳಿಸಲು, ಬ್ಯಾನ್ ಮಾಡಲು ಯಾರಿಂದಲ್ಲೂ ಸಾದ್ಯವಿಲ್ಲ. ಇಂತಹ ಯೋಚನೆಗಳನ್ನು ಕಾಂಗ್ರೆಸ್ ಪಕ್ಷ ಬಿಡಬೇಕು. ಇಲ್ಲದಿದ್ದರೆ ಜನರೇ ಕಾಂಗ್ರೆಸ್ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಸಿದರು.
ಮುಸ್ಲಿಂ ತುಷ್ಟಿಕರಣಕ್ಕೆ  ಕಾಂಗ್ರೆಸ್ ನಾಯಕರು ಆರ್‌ಎಸ್‌ಎಸ್ ಬಗ್ಗೆ ಇಂತಹ ಹೇಳಿಕೆ ಕೊಡ್ತಾರೆ. ನಮ್ಮ ದೇಶದಲ್ಲಿ ನ್ಯಾಯಾಲಯದ ವ್ಯವಸ್ಥೆ ಇದೆ. ಮುಸ್ಲಿಂರನ್ನು ಖುಷಿ ಪಡಿಸಲು ಪ್ರಿಯಾಂಕ ಖರ್ಗೆ ಇಂತಹ ಹೇಳಿಕೆ ಕೊಡ್ತಾರೆ ಅಷ್ಟೆ ಅದಕ್ಕೆ ಹೆಚ್ಚಿನ ಮಹತ್ವ ನೀಡುವ ಅವಶ್ಯಕತೆ ಇಲ್ಲ ಎಂದರು.
ಹಿಂದೂ ಜಾತ್ರೆ, ಹಬ್ಬ ಹರಿದಿನಗಳ ಮೇಲೆ, ಶಿವಾಜಿ, ಗಣೇಶ ಹಬ್ಬ ಮೇಲೆ ದಾಳಿ ನಡೆಯುತ್ತಿದೆ.
ಒಂದು ಮಾತ್ರ ಸತ್ಯ ಈ ದೇಶದಲ್ಲಿ ಹಿಂದೂಗಳು ಮುಸ್ಲಿಂ ಹಬ್ಬಗಳ ಮೇಲೆ ಎಂದು ಕಲ್ಲು ಹಾಕಿಲ್ಲ. ಸರ್ಕಾರದ ಒತ್ತಡದಿಂದ ಅಮಾಯಕ ಹಿಂದು ಯುವಕರ ಮೇಲೆ ಪೊಲೀಸ್‌ರು ಕೆಸ್ ಹಾಕ್ತಾರೆ. ನಮ್ಮ ಸರ್ಕಾರ ಇದ್ದಾಗಾ ಇಂತಹ ಕೆಲಸ ಮಾಡಿಲ್ಲ ಎಂದರು.
ವಿಶೇಷ ಪ್ರಾರ್ಥನೆ: ನಗರದ ಪುರಾಣ ಪ್ರಸಿದ್ಧ ಶ್ರೀ ಹೊಳೆ ಆಂಜನೇಯ ಸ್ವಾಮಿ ದೇಗುಲಕ್ಕೆ ಶಾಸಕ ಯತ್ನಾಳ್ ಭೇಟಿ ವಿಶೇಷ ಪೂಜೆ ಸಲ್ಲಿಸಿದರು.
ದೇವರ ದರ್ಶನ ಪಡೆದು ಒಂದು ಕಾಲು ರೂ ಹರಿಕೆ ಕಟ್ಟಿಕೊಂಡರು. (ಹರಕೆ ಕಟ್ಟಿಕೊಂಡರೆ ಇಷ್ಟಾರ್ಥಗಳು ಈಡೇರುತ್ತದೆ ಎಂಬುವುದು ಭಕ್ತಾಧಿಗಳ ನಂಬಿಕೆಯಾಗಿದೆ). ದೇಗುಲಕ್ಕೆ ಆಗಮಿಸಿದ ಶಾಸಕ ಯತ್ನಾಳ್‌ಗೆ ದೇಗುಲದ ಪ್ರಧಾನ ಅರ್ಚಕ ಪ್ರದೀಪ್ ಆಚಾರ್ಯ ಶಾಲು ಹೊದಿಸಿ ಸ್ವಾಗತಿಸಿದರು ಹಾಗೂ ದೇಗುಲದ ಪ್ರದಾನ ಅರ್ಚಕ ಪ್ರದೀಪ್ ಆಚಾರ್ಯ ಯತ್ನಾಳ್ ಅವರಿಗೆ ಶ್ರೀ ಹೊಳೆ ಆಂಜನೇಯಸ್ವಾಮಿ ದೇವರ ಪೋಟೋ ನೀಡಿದರು.
ಅದ್ದೂರಿ ಸ್ವಾಗತ: ತಾಲೂಕಿನ ಗಡಿಭಾಗಕ್ಕೆ ಯತ್ನಾಳ್ ಆಗಮಿಸಿದಾಗ ಹಿಂದು ಪರ ಸಂಘಟನೆಗಳು ಅದ್ದೂರಿಯಾಗಿ ಬರಮಾಡಿಕೊಂಡರು. ನಂತರ ಹೊಳೆ ಆಂಜನೇಯಸ್ವಾಮಿ ದೇಗುಲಕ್ಕೆ ಭೇಟಿ ನೀಡಿದರು. ಅನಂತರ ಎಳನೀರು ಮಾರುಕಟ್ಟೆ ಬಳಿ ಹಿಂದುಪರ ಸಂಘಟನೆಗಳು ಯತ್ನಾಳ ಅವರನ್ನು ಅದ್ದೂರಿಗೆ ಸ್ವಾಗತಿಸಿದರು. ನಂತರ ಮಂಡ್ಯಕ್ಕೆ ತೆರಳಿದರು.
ಯತ್ನಾಳ್ ಆಗಮದ ಹಿನ್ನೆಲೆಯಲ್ಲಿ ನಗರ ಪ್ರಮುಖ ಸ್ಥಳಗಳಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.
ಬಜರಂಗ ಸೇನೆ ರಾಜ್ಯಾಧ್ಯಕ್ಷ ಮಂಜುನಾಥ್, ಹಿಂದು ಪರ ಸಂಘಟನೆಗಳ ಮುಖಂಡರದ ಕೆ.ಟಿ.ನವೀನ್, ಜಗನ್ನಾಥ್, ಕೆ.ಜಿ.ಗುರುಮಲ್ಲೇಶ್, ವೀರಭದ್ರಸ್ವಾಮಿ, ಅನಿಲ್, ಶ್ರೇಯಸ್, ರಘು ಇದ್ದರು.

Share This Article
Leave a Comment