ಸೆ.೧೧ಕ್ಕೆ ಹಳೆ ಬೇರು ಹೊಸ ಚಿಗುರು ಕಾರ್ಯಕ್ರಮ

Pratheek
0 Min Read

ಪಬ್ಲಿಕ್ ಅಲರ್ಟ್

ಮೈಸೂರು: ನಗರದ ಹಳೇ ಬೇರು ಹೊಸ ಚಿಗುರು ಕಲ್ಚರಲ್ ಟ್ರಸ್ಟ್‌ನಿಂದ ಸೆ.11ರಂದು ಸಂಜೆ 5ಕ್ಕೆ ಇಲ್ಲಿನ ನಾದಬ್ರಹ್ಮ ಸಂಗೀತ ಸಭಾದಲ್ಲಿ ಗೀತ ಸಂಭ್ರಮ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಟ್ರಸ್ಟ್‌ನ ಗಾಯಕ ರೇವಣ್ಣ ತಿಳಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖಂಡ ಎಚ್.ವಿ.ರಾಜೀವ್ ಕಾರ್ಯಕ್ರಮ ಉದ್ಘಾಟಿಸುವರು. ಕರ್ನಾಟಕ ಸುಗಮ ಸಂಗೀತ ಪರಿಷತ್ ಅಧ್ಯಕ್ಷ ನಾಗರಾಜ ವಿ.ಭೈರಿ ಅಧ್ಯಕ್ಷತೆ ವಹಿಸುವರು. ಕನ್ನಡ ಮತ್ತು ಹಿಂದಿ ಚಲನಚಿತ್ರ ಗೀತೆಗಳನ್ನು ಹಾಡಲಾಗುವುದು. ಎಲ್ಲರಿಗೂ ಉಚಿತ ಪ್ರವೇಶವಿದೆ ಎಂದು ತಿಳಿಸುವರು.
ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್ ಗಾಯಕರಾದ ಬಿ.ಎಸ್.ಶ್ರೀಕಂಠರಾವ್, ಪ್ರಮಥ ಮಂಜುನಾಥ್, ಕನಕರಾಜು, ಕೃಷ್ಣ ಇದ್ದರು.

Share This Article
Leave a Comment