ಹಿಂದೂ ಧರ್ಮಕ್ಕಾಗಿ ಎಲ್ಲಿಯಾದರೂ ಹೋರಾಟ: ಶ್ರೀವತ್ಸ

Pratheek
5 Min Read

ಪಬ್ಲಿಕ್ ಅಲರ್ಟ್


ಮೈಸೂರು: ಹಿಂದೂ ಧರ್ಮದ ಉಳಿವಿಗಾಗಿ ಎಲ್ಲಿ ಬೇಕಾದರೂ ಹೋರಾಟ ಮಾಡುತ್ತೇವೆಂದು ಶಾಸಕ ಶ್ರೀವತ್ಸ ತಿಳಿಸಿದರು. 
ಬಿಜೆಪಿ ನೆಲೆ ವಿಸ್ತರಣೆಗಾಗಿ ಗಲಾಟೆ ಮಾಡಿಸಿದ್ದಾರೆಂದು ಸಚಿವ ಚೆಲುವರಾಯಸ್ವಾಮಿ ಬಾಲಿಶವಾದ ಹೇಳಿಕೆ ನೀಡಿದ್ದಾರೆ. ನಮಗೆ ನಾವೇ ಕಲ್ಲು ಹೊಡೆದುಕೊಳ್ಳಲಾಗುತ್ತಾ? ಹಿಂದೂ ಧರ್ಮದ ರಕ್ಷಣೆಯ ವಿಚಾರದಲ್ಲಿ ಎಲ್ಲಿ ಬೇಕಾದರೂ ಹೋರಾಟ ಮಾಡ್ತೇವೆ. ಮದ್ದೂರಿನಲ್ಲಿ ಗಣೇಶೋತ್ಸವ ಮೆರವಣಿಗೆ ವೇಳೆ ಮಸೀದಿಯಿಂದ ಕಲ್ಲು ಹೊಡೆದಿದ್ದಾರೆ. ಎಸ್ ಸಿ ಸಮುದಾಯದವರು ಗಣಪತಿ ಮೆರವಣಿಗೆ ಮಾಡುವಾಗ ಈ ರೀತಿ ಕಲ್ಲು ತೂರಾಟ ನಡೆದಿದೆ ಎಂದರು.
ಇದಕ್ಕೂ ಮುನ್ನ ನಡೆದ ಈದ್ ಮಿಲಾದ್ ಮೆರವಣಿಗೆ ಗಣಪತಿ ಕೂರಿಸಿರುವ ಸ್ಥಳಕ್ಕೆ ಬಂದಾಗ ಗಣಪತಿ ಮುಂಭಾಗವೇ ಮುಸ್ಲಿಮರು ಕುಣಿದು ಕುಪ್ಪಳಿಸಿದ್ದಾರೆ. ಆದರೆ, ಮಸೀದಿ ಮುಂದೆ ಹಿಂದೂಗಳು ಯಾವುದೇ ಆಚರಣೆ ಮಾಡದಂತೆ ನಿಬಂಧನೆ ಹಾಕಿದ್ದಾರೆಂದು ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿಂದೂಗಳ ಮೇಲೆ ಧಮನಕಾರಿ ನೀತಿ ಅನುಸರಿಸಲಾಗುತ್ತಿದೆ. ದುಷ್ಟ ಶಕ್ತಿಗಳನ್ನು ಧಮನ ಮಾಡುವ ಕೆಲಸವನ್ನು ಸರ್ಕಾರ ಮಾಡಬೇಕು ಎಂದರು. 
ಅಭಿವೃದ್ದಿ ಕಾರ್ಯಗಳಿಗೆ ರಾಜ್ಯ ಸರ್ಕಾರದ ಬಳಿ ಹಣ ಇಲ್ಲವೆಂಬುದು ಈ ಬಾರಿಯ ದಸರಾದಲ್ಲಿ ಎದ್ದು ಕಾಣುತ್ತಿದೆ. ದಸರಾ ಉದ್ಘಾಟನೆಗೆ ಕೆಲವೇ ದಿನಗಳು ಬಾಕಿಯಿವೆ. ಆದರೂ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ‌. ಈ ಬಾರಿಯ ದಸರಾ ಉದ್ಘಾಟಕರ ಆಯ್ಕೆಯಿಂದ ಹಿಡಿದು ಎಲ್ಲಾ ವಿಚಾರದಲ್ಲೂ ಗೊಂದಲ ಉಂಟಾಗಿದೆ. ಅನುದಾನ ಬಿಡುಗಡೆ ವಿಚಾರದಲ್ಲೂ ಸರಿಯಾದ ವ್ಯವಸ್ಥೆ ಆಗಿಲ್ಲ. ರಸ್ತೆಗಳಿಗೆ ಪ್ಯಾಚ್ ವರ್ಕ್ ನಡೆಸಿದ್ದು, ಈ ಬಾರಿ ಕೇವಲ ತೇಪೆ ಹಾಕುವ ಕೆಲಸ ಎಂಬಂತಾಗಿದೆ. ಕೇವಲ ಸುಣ್ಣಬಣ್ಣ ಬಳಿಯಲಾಗ್ತಿದೆ. ಎಕ್ಸಿಬಿಷನ್ ಆವರಣದಲ್ಲಿ ಮಾತ್ರ ಕೆಲಸ ಆಗುತ್ತಿದೆ. ಅದನ್ನು ಬಿಟ್ಟರೇ ಎಲ್ಲೆಡೆ ತೇಪೆ ಹಾಕುವ ಕೆಲಸ ಆಗುತ್ತಿದೆ. ಎಲ್ಲಿಯೂ ದಸರಾ ಸಂಭ್ರಮ ಕಾಣಿಸುತ್ತಿಲ್ಲ. ಬಿದ್ದಿರುವ ಕಲ್ಲಿನ ಕಂಬಗಳ ರೀಪ್ಲೇಸ್ ಮೆಂಟ್ ಮಾಡಿಲ್ಲ ಎಂದರು.
ಚಾಮುಂಡಿಬೆಟ್ಟ ಪ್ರಾಧಿಕಾರದ ಅಡಿಯಲ್ಲೇ ದಸರಾ ಪ್ರಾಧಿಕಾರವೂ ಇದ್ದರೆ ಚೆನ್ನಾಗಿರುತ್ತಿತ್ತು. ಮುಂದಿ‌ನ 10 ದಿನಗಳ್ಲಾದರೂ ಪ್ರವಾಸಿಗರಿಗೆ ತೊಂದರೆ ಆಗದಂತೆ ಕಾಮಗಾರಿ ನಡೆಸಲಿ. ಲೈಟಿಂಗ್ ಅರೇಂಜ್ ಮೆಂಟ್ ಬಿಟ್ಟರೇ ಬೇರೆ ಏನು ಆಗಿಲ್ಲ. ಇಡೀ ಮೈಸೂರು ಅದ್ವಾನವಾಗಿದೆ. ಅಭಿವೃದ್ಧಿ ಕಾಮಗಾರಿಗೆ ಹಣ ಕೊಡ್ತಿಲ್ಲ.
ಕಾಂಗ್ರೆಸ್ ಶಾಸಕರಿಗೆ ತಲಾ 50 ಕೋಟಿ ಅನುದಾನ ಕೊಡ್ತೀವಿ ಅಂದಿದ್ದರು. ಆದರೆ ಕಾಂಗ್ರೆಸ್ ಶಾಸಕರಿರುವ ಚಾಮರಾಜ ಮತ್ತು ನರಸಿಂಹರಾಜ ಕ್ಷೇತ್ರಗಳಲ್ಲೂ ಯಾವುದೇ ಅಭಿವೃದ್ಧಿ ಕಾಮಗಾರಿ ನಡೆಯುತ್ತಿಲ್ಲ‌. ಅಭಿವೃದ್ಧಿ ಕಾಮಗಾರಿಗೆ ಸರ್ಕಾರದ ಬಳಿ ಹಣ ಇಲ್ಲ ಎಂಬುದು ಈ ಬಾರಿಯ ದಸರಾದಲ್ಲಿ ಎದ್ದು ಕಾಣ್ತಿದೆ.
ಇದರ ನಡುವೆಯೇ ಎಂ ಎಲ್ ಸಿ ಗಳಿಗೂ ಅನುದಾನ ಕೊಡುವ ಆಶ್ವಾಸನೆ ಕೊಟ್ಟಿದ್ದಾರೆಂದರು.


ದೇಶ ವಿಭಜನೆ ಮಾಡಿದ್ದು ಕಾಂಗ್ರೆಸ್‌: ಮಹೇಶ್‌
ಮೈಸೂರು: ಇಬ್ಬರು ಗುಜರಾತಿಗಳಿಂದ ದೇಶ ಇಬ್ಬಾಗವಾಗುತ್ತಿದೆ ಎಂಬ ಮಲ್ಲಿಕಾರ್ಜುನಖರ್ಗೆ ಅವರಿಗೆ ಮತಿ ಭ್ರಮಣೆ ಆಗಿರುವಂತಿದೆ. ದೇಶವನ್ನು ವಿಭಜನೆ ಮಾಡಿದ್ದು ಕಾಂಗ್ರೆಸ್ ಎಂದು ಬಿಜೆಪಿ ರಾಜ್ಯ ವಕ್ತಾರ ಎಂ.ಜಿ.ಮಹೇಶ್ ತಿಳಿಸಿದರು. 
ಮೈಸೂರಿನಲ್ಲಿ ಮಾತನಾಡಿದ ಅವರು, ಮೈಸೂರಿನಲ್ಲಿ ಸುದ್ದಿಗೋಷ್ಠಿ ಕಣ್ಣ ಮುಂದೆಯೇ ದೇಶವನ್ನು ವಿಭಜನೆ ಮಾಡಿದವರು ಮೋದಿ ಮತ್ತು ಅಮಿಶ್ ಷಾ ಗುಜರಾತಿಗಳು ಎಂದು ಉಲ್ಲೇಖಿಸಿದ್ದಾರೆ. ದೇಶದ ಅವಿಭಾಜ್ಯ ಅಂಗವಾಗಿರುವ ಗುಜರಾತ್ ಬಗ್ಗೆ ಮಾತನಾಡಿರುವುದು ಖಂಡನೀಯ. ಕಾಂಗ್ರೆಸ್ ನಿಂದ ಮೆಂಟಲ್ ಡಿಸಾರ್ಡರ್ ಗಳನ್ನು ವಕ್ತಾರರನ್ನಾಗಿ ಮಾಡಲಾಗಿದೆ. ಅಮಿತ್ ಷಾ ಸೂಚನೆ ಮೇರೆಗೆ ಮದ್ದೂರಿನಲ್ಲಿ‌ ಕೋಮು ಗಲಭೆ ಮಾಡುತ್ತಿದ್ದಾರೆ ಎನ್ನುತ್ತಿರುವ ಲಕ್ಷ್ಮಣ್ ಮಾನಸಿಕ ರೋಗಿ. ಇಂತಹ ಹುಚ್ಚು ಹೇಳಿಕೆ ಕೊಡುವವರನ್ನು ಕಾಂಗ್ರೆಸ್ ವಕ್ತಾರರನ್ನಾಗಿ ಮಾಡಿಕೊಂಡಿದೆ ಎಂದರು. 
ದೇಶದಲ್ಲಿ ಮೋದಿ‌ ನಾಯಕತ್ವ ಬೇಕು ಎನ್ನುವಾಗ ಕಾಂಗ್ರೆಸ್ಸಿನ ಕೆಲವರು ಮೋದಿ ಮತ್ತು ಅಮಿತ್ ಷಾ ವಿರುದ್ದ ಮಾತನಾಡುತ್ತಿದ್ದಾರೆ. ಜಗತ್ತೇ ಕೊಂಡಾಡುವ ಪ್ರಧಾನಿ ಮೋದಿ ಅವರ ಬಗ್ಗೆ ಖರ್ಗೆಯವರು ಮಾತನಾಡುತ್ತಿರುವುದು ಸರಿಯಲ್ಲ. ಮುಂಬರುವ ದಿನಗಳಲ್ಲಿ ಮಾನಸಿಕ ಸ್ಥಿಮಿತತೆ ಕಳೆದುಕೊಂಡವರಿಗೆ ಚಿಕಿತ್ಸಾ ಕೇಂದ್ರ ಸ್ಥಾಪಿಸುವ ಕೆಲಸವನ್ನು ಬಿಜೆಪಿ ಮಾಡಬೇಕಿದೆ. ಗುಜರಾತಿಗಳಿಬ್ಬರು ದೇಶ ವಿಭಜನೆ ಮಾಡುತ್ತಿದ್ದಾರೆ ಎನ್ನುವುದು ಎಷ್ಟು ಸರಿ?. ಇದನ್ನು ಬಿಜೆಪಿ ತೀವ್ರವಾಗಿ ವಿರೋಧಿಸಲಿದೆ ಎಂದರು.
ದಲಿತರಿಗೆ ಸಿಗಬೇಕಾದ ಸಿಎ ನಿವೇಶನವನ್ನು ತಮ್ಮ ಹೆಸರಿಗೆ ಬರೆಸಿಕೊಂಡವರು ಕಲರ್ಬುಗಿಯಲ್ಲಿ ಅಭಿವೃದ್ಧಿ ಮಾಡದೇ, ಮೋದಿಯವರ ಮೇಲೆ ಮಾತನಾಡುತ್ತಿದ್ದಾರೆ. ಇವತ್ತು ಫ್ರೂ ಆಗಿದೆ, ಪಿಚ್ ಸಂಸ್ಥೆ ವರದಿ ಪ್ರಕಾರ ಭಾರತದ ಜಿಡಿಪಿ 6.9 ಇದೆ. ಖರ್ಗೆ ಅವರು ಹಿರಿಯರಾಗಿದ್ದು ಅವರು ಮಾತನಾಡಲಿ.
ಆದರೆ, ಒಂದೇ ಒಂದು ಚುನಾವಣೆಯಲ್ಲಿ ಗೆಲ್ಲದ ಹುಚ್ಚ ಲಕ್ಷ್ಮಣ್, ಮೋದಿ ಮತ್ತು ಅಮಿತ್ ಷಾ ಅವರ ಬಗ್ಗೆ ಮಾತನಾಡಬಹುದಾ?. ಇವರಿಗೆನು ಹುಚ್ಚು ಹಿಡಿದಿದೆಯಾ?. ಬಿಜೆಪಿ ನೆಲೆ ವಿಸ್ತರಣೆ ಮಾಡಲು ಕೋಮು ಗಲಭೆ ಮಾಡಿಸುವ ಅವಶ್ಯಕತೆ ಇಲ್ಲ. ಸೈಕೋಗಳನ್ನು ಲೂಸ್ ಗಳನ್ನು ವಕ್ತಾರರನ್ನಾಗಿ ಮಾಡಿದ್ದಾರೆ. ಇದನ್ನು ಬಿಜೆಪಿ ಖಂಡಿಸುತ್ತದೆಂದರು.
ತಾಯಿಯನ್ನು ವಂದಿಸಿ, ಕ್ಷಮೆ ಕೇಳುವುದು ಎಷ್ಟು ಸರಿ. ತಾಯಿ ನಾಡನ್ನು ಹೊಗಳಿದ್ದಕ್ಕೆ ಕ್ಷಮೆ ಕೇಳುತ್ತಾರೆ ಎಂದರೆ ಪಕ್ಷದಲ್ಲಿ ಅವರಿಗೆ ಎಂತಹ ದಯನೀಯ ಪರಿಸ್ಥಿತಿಯಿದೆ ಎಂಬುದು ಗೊತ್ತಾಗುತ್ತದೆ. ಎಬಿವಿಪಿ ಕಾರ್ಯಕ್ರಮದಲ್ಲಿ ಸಚಿವ ಪರಮೇಶ್ವರ್ ಭಾಗಿಯಾಗಿದ್ದರಲ್ಲಿ ತಪ್ಪಿಲ್ಲ. ಹಿಂದೂಗಳ ಒಗ್ಗಟ್ಟಿಗಾಗಿ ಆರ್ ಎಸ್ ಎಸ್ ಕಟ್ಟಲಾಗಿದೆ ಎಂದು ಹೇಳಿದರು. 


ಕಾಂಗ್ರೆಸ್‌ ಬಂದ ಬಳಿಕ ಮಂಡ್ಯದಲ್ಲಿ ಗಲಾಟೆ: ಪ್ರತಾಪಸಿಂಹ

ಮೈಸೂರು: ಕಾಂಗ್ರೆಸ್‌ ಶಾಸಕರು ಬಂದ ಬಳಿಕ ಮಂಡ್ಯ ಜಿಲ್ಲೆಯಲ್ಲಿ ಗಲಾಟೆಗಳು ನಡೆಯುತ್ತಿವೆ ಎಂದು ಮಾಜಿ ಸಂಸದ ಪ್ರತಾಪಸಿಂಹ ಹೇಳಿದರು. 
ಮೈಸೂರಿನ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ನೆಲೆ ವಿಸ್ತರಣೆಗಾಗಿ ಮದ್ದೂರಿನಲ್ಲಿ ಗಲಭೆ ಸೃಷ್ಟಿಸಲಾಗಿದೆ ಎಂದು ಸಚಿವ ಚೆಲುವರಾಯಸ್ವಾಮಿ ನೀಡಿರುವ ಹೇಳಿಕೆಗೆ ಪ್ರತಿಕ್ರಯಿಸಿದರು. ಚೆಲುವರಾಯಸ್ವಾಮಿಯವರು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಬಳಿಕ ಕೆರಗೋಡು ಪಟ್ಟಣದಲ್ಲಿ ತ್ರಿವರ್ಣ ಧ್ವಜವನ್ನು ಕೆಳಗಿಳಿಸುವ ಕೆಲಸವಾಯಿತು. ಚೆಲುವರಾಯಸ್ವಾಮಿ ಪ್ರತಿನಿಧಿಸುತ್ತಿರುವ ನಾಗಮಂಗಲದಲ್ಲಿ ನಡೆದ ಗಣೇಶೋತ್ಸವ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಯಿತು. ಗಣೇಶನ‌ ಮೂರ್ತಿಯನ್ನು ಪೊಲೀಸ್ ಜೀಪ್ ನಲ್ಲಿ ಹೊತ್ತೊಯ್ಯುವ ಪರಿಸ್ಥಿತಿ ನಿರ್ಮಾಣ ಆಯಿತು. ಇದೀಗ ಮದ್ದೂರಿನಲ್ಲಿ ಗಲಭೆಯಾಗಿದೆ ಎಂದರು.
ಗಣೇಶೋತ್ಸವ ಮೆರವಣಿಗೆ ಮೇಲೆ ಮಸೀದಿಯಿಂದ ಕಲ್ಲು ತೂರಾಟ ಮಾಡಲಾಗಿದೆ. ಮಂಡ್ಯ ಜೆಡಿಎಸ್ ನ ಭದ್ರ ನೆಲೆಯಾಗಿದೆ. ಈ ಮೊದಲು ಜೆಡಿಎಸ್ ಶಾಸಕರುಗಳಿದ್ದಾಗ ಯಾವುದೇ ಒಂದು ಗಲಭೆ ‌ನಡೆದಿಲ್ಲ. ಕಾಂಗ್ರೆಸ್ ಶಾಸಕರು ಬಂದನಂತರ ಗಲಾಟೆಗಳಾಗುತ್ತಿವೆ. ಜೆಡಿಎಸ್ ನ ಭದ್ರ ನೆಲೆಯಲ್ಲಿ ಮುಸ್ಲಿಮರನ್ನು ಎತ್ತಿ ಕಟ್ಟುವ ಕೆಲಸವನ್ನು ಕಾಂಗ್ರೆಸ್ ನಾಯಕರು ಮಾಡುತ್ತಿದ್ದಾರೆಂದರು. 
ಅಮಿತ್ ಷಾ ಅವರಂತಹ ಸಮರ್ಥ ಗೃಹ ಸಚಿವರು ಇರುವ ಕಾರಣದಿಂದಾಗಿ ನೆರೆಯ ಶ್ರೀಲಂಕಾ, ಬಾಂಗ್ಲಾದೇಶ, ನೇಪಾಳದಂತಹ ಪರಿಸ್ಥಿತಿ ಸೃಷ್ಟಿಯಾಗಿಲ್ಲ.
ದೇಶದ ರಕ್ಷಣೆಗಾಗಿ ಮೋದಿಯವರಂತಹ ಸಮರ್ಥ ನಾಯಕರಿದ್ದಾರೆ. ಮೋದಿ-ಅಮಿತ್ ಷಾ ಇಲ್ಲದಿದ್ದರೇ ಕಾಂಗ್ರೆಸ್ ನವರು ನೆರೆಯ ದೇಶಗಳಲ್ಲಿ ಆಗಿರುವಂತೆಯೇ ಮಾಡುತ್ತಿದ್ದರು. ಶ್ರೀನಿವಾಸಪ್ರಸಾದ್ ರಂತಹ ನಾಯಕರು ಸಹ ಆರ್ ಎಸ್ಎಸ್ ಶಾಖೆಗೆ ಹೋಗ್ತಿದ್ದರು. ಕಾಂಗ್ರೆಸ್ ನ ಕೆಲ ನಾಯಕರು ಕೂಡ ಚಿಕ್ಕವರಿದ್ದಾಗ ಆರ್ ಎಸ್ ಎಸ್ ಶಾಖೆಗಳಿಗೆ ಹೋಗ್ತಿದ್ದವರೇ ಆಗಿದ್ದಾರೆ. ಹಾಗಾಗಿ ಆರ್ ಎಸ್ ಎಸ್ ದೇಶ ಕಟ್ಟುವ ವ್ಯಕ್ತಿತ್ವ ನಿರ್ಮಾಣ ಮಾಡುವ ಕೆಲಸ ಮಾಡ್ತಿದೆ ಎಂಬುದು ಎಲ್ಲರಿಗೂ ಗೊತ್ತು. ಎಬಿವಿಪಿ ಯ ಕಾರ್ಯಗಳನ್ನು ತಿಳಿಸಿದಿರುವ ಕಾರಣಕ್ಕಾಗಿಯೇ ಗೃಹ ಸಚಿವ ಪರಮೇಶ್ವರ್ ಅವರು ಎಬಿವಿಪಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.
ರಾಜಕೀಯ ಕಾರಣಗಳಿಗಾಗಿ ಕೆಲವೊಮ್ಮೆ ಆರ್ ಎಸ್ ಎಸ್ ಅನ್ನು ಕಾಂಗ್ರೆಸ್ ನಾಯಕರು ಟೀಕಿಸುತ್ತಾರೆ ಅಷ್ಟೇ ಎಂದರು. 

Share This Article
Leave a Comment