ಪಬ್ಲಿಕ್ ಅಲರ್ಟ್
ಮೈಸೂರು: ಮೈಸೂರು ಜಿಲ್ಲಾ ವಿಶ್ವಕರ್ಮ ಜಯಂತ್ಯೋತ್ಸವ ಸಮಿತಿ ಹಾಗೂ ಜಿಲ್ಲಾಡಳಿತಗಳ ಸಂಯುಕ್ತಾಶ್ರಯದಲ್ಲಿ ಸೆ.೧೭ ರಂದು ನಗರದ ಕಲಾಮಂದಿರದಲ್ಲಿ ವಿಶ್ವಕರ್ಮ ಜಯಂತಿ ಆಚರಿಸಲಾಗುವುದು. ಸಮುದಾಯದ ಎಲ್ಲರೂ ತಮ್ಮ ತಮ್ಮ ಕೆಲಸಗಳಿಗೆ ರಜೆ ಹಾಕಿ ಹಾಜರಾಗುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಸಮಿತಿ ಅಧ್ಯಕ್ಷ ಸಿ. ಹುಚ್ಚಪ್ಪಾಚಾರ್ ಮನವಿ ಮಾಡಿದರು.
ಅಂದು ಬೆಳಗ್ಗೆ ೯ಕ್ಕೆ ಇರ್ವಿನ್ ರಸ್ತೆಯ ಕಾಳಿಕಾಂಬ ಕಮಠೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ವಿಶ್ವಕರ್ಮ ಮೂರ್ತಿ ಹೊತ್ತ ಬೆಳ್ಳಿ ರಥದ ಮೆರವಣಿಗೆ ವಿವಿಧ ರಸ್ತೆಗಳ ಮೂಲಕ ಕಲಾಮಂದಿರ ತಲುಪಲಿದೆ. ಅಲ್ಲಿ ಮಧ್ಯಾಹ್ನ ೧೨ಕ್ಕೆ ಸಬಾ ಕಾರ್ಯಕ್ರಮ ನಡೆಯಲಿದೆ ಎಂದರು. ಶಿವಸುಜ್ಞಾನತೀರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸುತ್ತಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಕಾರ್ಯಕ್ರಮ ಉದ್ಘಾಟಿಸುವರು, ಶಾಸಕ ಕೆ. ಹರೀಶ್ಗೌಡ ಅಧ್ಯಕ್ಷತೆ ವಹಿಸುವರು, ಶಾಸಕರಾದ ತನ್ವೀರ್ಸೇಠ್, ಜಿ.ಟಿ. ದೇವೇಗೌಡ, ಟಿ.ಎಸ್. ಶ್ರೀವತ್ಸ ಇನ್ನಿತರರು ಅತಿಥಿಗಳಾಗಿರುವರೆಂದರು. ಹುಯಿಲಾಳು ಕುಮಾರ್, ಕೆಂಡಗಣ್ಣ ವಿಶ್ವಕರ್ಮ, ನಿಂಗಣ್ಣಾಚಾರ್, ಚಂದ್ರು ಹೆಬ್ಬಾಳು ಹಾಜರಿದ್ದರು.
