ವಾರ್ಡ್‌ 6, 18ರ ಅಭಿವೃದ್ಧಿಗೆ ಶಾಸಕರ ಚಾಲನೆ

Pratheek
1 Min Read

ಪಬ್ಲಿಕ್ ಅಲರ್ಟ್


ಮೈಸೂರು: ನಗರದ ಮಹಾನಗರಪಾಲಿಕೆ ವಾರ್ಡ್‌ ನಂ.6 ಮತ್ತು 18ರ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಕೆ.ಹರೀಶ್‌ಗೌಡ ಚಾಲನೆ ನೀಡಿದರು.
ವಾರ್ಡ್ ನಂ.6ರ ಗೋಕುಲಂನ  ಡಾಕ್ಟರ್ಸ್ ಕಾರ್ನರ್ ಹತ್ತಿರ ಹಾಗೂ ಬೃಂದಾವನ ಬಡಾವಣೆ ಚರ್ಚ್ ರಸ್ತೆ ಮತ್ತು ಮಳೆ ನೀರು ಚರಂಡಿ ಅಭಿವೃದ್ಧಿ ಕಾಮಗಾರಿ, ವಾರ್ಡ್ ನಂ.18ರ ಮೇದರ್ ಬ್ಲಾಕ್ ನ ಅಡ್ಡ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.  ಒಟ್ಟು ೧ ಕೋಟಿ ರೂ. ವೆಚ್ಚ ಕಾಮಗಾರಿಗಳಿಗೆ ಬೃಂದಾವನ ಬಡಾವಣೆ ಒಂದನೇ ಹಂತದ ಚರ್ಚ್ ಮುಂಭಾಗ ಗುದ್ದಲಿ ಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿ, ಎಸ್ ಎಫ್ ಸಿ ವಿಶೇಷ ಅನುದಾನದಡಿಯಲ್ಲಿ ಈ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ನೀಡಲಾಗಿದೆ. ಈ ಭಾಗದಲ್ಲಿ ದೊಡ್ಡ ಮಳೆ ನೀರು ಚರಂಡಿ ಇದ್ದು ತಗ್ಗು ಪ್ರದೇಶವಾದರಿಂದ ನೀರು ಇಮ್ಮುಖವಾಗಿ ರಸ್ತೆಗೆ ಮನೆಗಳಿಗೆ ಮಳೆಯ ಸಂಧರ್ಭದಲ್ಲಿ ಬರುತಿತ್ತು. ಹಲವು ತಿಂಗಳುಗಳ ಹಿಂದೆ ಸಾರ್ವಜನಿಕರ ಮನವಿ ಮೇರೆಗೆ ಸ್ಥಳ ಪರಿಶೀಲನೆ ಮಾಡಿದ್ದೆನು. ಈಗ ಗುದ್ದಲಿ ಪೂಜೆ ಆಗಿದೆ ಗುಣಮಟ್ಟದ ಕೆಲಸವನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ತಿಳಿಸಿದ್ದೇನೆಂದರು.
ಮುಖಂಡರಾದ ಸುಧಾಕರ್, ಪ್ರವೀಣ್ ಶೆಟ್ಟಿ, ಅರುಣ್ ಕುಮಾರ್, ಮಹೇಶ್,ಚೇತನ್, ಮಂಜುನಾಥ್ ,ಟೆಂಟ್ ಶ್ರೀನಿವಾಸ್, ತೇಜಸ್, ದಿನೇಶ್, ಕುಮಾರ್, ದರ್ಶನ್, ಡಿಸೋಜ ,ನಿಶಾಂತ್, ಸಭಾಪತಿ, ಸೋಮಣ್ಣ, ವೆಂಕಿಯಣ್ಣ, ರಾಜಗಣೇಶ್, ಶಿವು, ರವಿ, ವಲಯ ಅಭಿವೃದ್ಧಿ ಅಧಿಕಾರಿಯಾದ ಯೋಗಾನಂದ ಸೇರಿ ಇತರರು ಉಪಸ್ಥಿತರಿದ್ದರು.

Share This Article
Leave a Comment