ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕ್ ನ 120ನೇ ವಾರ್ಷಿಕ ಸಭೆ

latha prabhukumar
1 Min Read

ಪಬ್ಲಿಕ್ ಅಲರ್ಟ್ ನ್ಯೂಸ್:-ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕ್ ನ 120ನೇ ವಾರ್ಷಿಕ ಸಭೆ

ಮೈಸೂರು: ನಗರದ ಗಾಂಧಿ ಚೌಕದಲ್ಲಿರುವ ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕ್ ನಿಯಮಿತದ 2025-26ನೇ ಸಾಲಿನ 120ನೇ ವಾರ್ಷಿಕ ಸರ್ವ ಸದಸ್ಯರ ಸಭೆಯನ್ನು ಯಶಸ್ವಿಯಾಗಿ ನಡೆಸಲಾಯಿತು.

ನಗರದ ಜೆ.ಕೆ.ಮೈದಾನದಲ್ಲಿರುವ ಮೈಸೂರು ವೈದ್ಯಕೀಯ ಕಾಲೇಜಿನ ಅಲ್ಯೂಮ್ಮಿ ಅಸೋಷಿಯೇಷನ್ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಯು ಬ್ಯಾಂಕ್‌ನ ಅಧ್ಯಕ್ಷ ಜೆ.ಯೋಗೇಶ್‌ ಅಧ್ಯಕ್ಷತೆಯಲ್ಲಿ ನಡೆಯಿತು.

ಬಳಿಕ ಮಾತನಾಡಿದ ಅವರು, ಈ ಬಾರಿ ಸಭೆಯಲ್ಲಿ ಆಡಳಿತ ಮಂಡಳಿಯ ಎಲ್ಲಾ ತೀರ್ಮಾನಗಳಿಗೆ ಒಪ್ಪಿಗೆ ಸೂಚಿಸಿದ್ದಾರೆ. ಮರಣ ನಿಧಿಗೆ ವಂತಿಗೆ ಕೊಡದಿದ್ದವರಿಗೂ ಮರಣನಿಧಿ ಕೊಡಲು ತೀರ್ಮಾನ ಕೈಗೊಳ್ಳಲು ನಮಗೆ ಅವಕಾಶ ನೀಡಿದ್ದಾರೆ. 1.30 ಕೋಟಿ ರೂ.ಗಳ ಲಾಭದಲ್ಲಿ 33,373 ಸದಸ್ಯರ ಉಳಿತಾಯ ಖಾತೆಗೆ ಶೇ.10 ಲಾಭಾಂಶವನ್ನು ನೀಡಲಾಗುತ್ತಿದೆ. ಸಂಘದ ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ಪುರಸ್ಕಾರ, 120ನೇ ವರ್ಷದ ವಾರ್ಷಿಕ ಸಭೆ ಹಿನ್ನೆಲೆಯಲ್ಲಿ 120 ಮಂದಿ ಹಿರಿಯ ಸದಸ್ಯರಿಗೂ ಸನ್ಮಾನ ಮಾಡಲಾಗಿದೆ ಎಂದರು.

ಮುಖ್ಯಕಾರ್ಯನಿರ್ವಾಹಕ ಕೆ.ಹರ್ಷಿತ್ ಗೌಡ ಮಾತನಾಡಿದರು.

ಉಪಾಧ್ಯಕ್ಷ ಟೆಂಟ್ ಟಿ.ರವಿ, ನಿರ್ದೇಶಕರಾದ ಎಸ್.ಬಿ.ಎಂ. ಮಂಜು, ಎನ್.ಯೋಗಾನಂದ, ಜೆ.ನಿರಂಜನ್, ಎಚ್. ಹರೀಶ್ ಕುಮಾರ್, ಆರ್.ರವಿಕುಮಾರ್(ರಾಜಕೀಯ), ಪಡುವಾರಹಳ್ಳಿ ಎಂ.ರಾಮಕೃಷ್ಣ, ಆರ್.ಸೋಮಣ್ಣ, ಕೆ. ಗಿರೀಶ್, ಸಿ.ಚಂದ್ರಶೇಖರ್, ಪಿ.ರಾಜೇಶ್ವರಿ, ಎಂ.ಪ್ರಮೀಳಾ, ವೃತ್ತಿಪರ ನಿರ್ದೇಶಕರಾದ ಎಂ.ವೈ. ರಮೇಶಗೌಡ, ಸಿ.ಎಸ್.ರಾಮಕೃಷ್ಣಯ್ಯ ಇನ್ನಿತರರು ಉಪಸ್ಥಿತರಿದ್ದರು.

Share This Article
Leave a Comment