ಪಬ್ಲಿಕ್ ಅಲರ್ಟ್ ನ್ಯೂಸ್:-ಕರೀಮುದ್ದನಹಳ್ಳಿಯಲ್ಲಿ ಕೆರೆ ಕಾಮಗಾರಿ ವೀಕ್ಷಣೆ ಕೂಲಿಕಾರರಿಗೆ ಆರೋಗ್ಯ ಕಾಪಾಡಿಕೊಳ್ಳಲು ಈಶ್ವರ್ ಖಂಡ್ರೆ ಸಲಹೆ
ಮೈಸೂರು: ಕೂಲಿಕಾರ್ಮಿಕರು ಆಗಾಗ್ಗೆ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡುವ ಮೂಲಕ ಸದೃಢ ಆರೋಗ್ಯ ಕಾಪಾಡಿಕೊಳ್ಳಬೇಕೆಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವರಾದ ಮಾನ್ಯ ಈಶ್ವರ್ ಖಂಡ್ರೆ ಅವರು ಸಲಹೆ ನೀಡಿದರು.
ತಾಲ್ಲೂಕಿನ ಕರೀಮುದ್ದನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿಬಿ ಜಿ ರಾಮ್ ಜಿ ಯೋಜನೆಯಡಿ ಅಭಿವೃದ್ಧಿಪಡಿಸುತ್ತಿರುವ ಊರು ಮುಂದಿನ ಕೆರೆ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ಸಚಿವರು ಕೂಲಿ ಕಾರ್ಮಿಕರನ್ನುದ್ದೇಶಿಸಿ ಮಾತನಾಡುತ್ತಾ ಪ್ರತಿ ತಿಂಗಳ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಸದೃಢ ಆರೋಗ್ಯ ಕಾಪಾಡಿಕೊಳ್ಳುವಂತೆ ಅವರ ಆರೋಗ್ಗದ ಬಗ್ಗೆ ಕಾಳಜಿ ವಹಿಸಿದರು.
ಇದಕ್ಕೂ ಮುನ್ನ ವಿಬಿ ಜಿ ರಾಮ್ ಜಿ ಯೋಜನೆಯು ಜುಲೈ 1ರಿಂದ ಜಾರಿಗೊಂಡಿದ್ದು, 382 ರೂಪಾಯಿ ಕೂಲಿ ಹಣ, 125 ದಿನ ಮಾನವ ದಿನಗಳ ಸೃಜನೆಯಾಗಲಿದ್ದು, ಒಂದು ಕುಟುಂಬಕ್ಕೆ 47750 ರೂ. ದೊರೆಯಲಿದೆ. ಆದ್ದರಿಂದ ತಮ್ಮ ಪರಿಚಯದ ಕೂಲಿಕಾರ್ಮಿಕರನ್ನು ಸಹ ಈ ಯೋಜನೆಯಡಿ ಉದ್ಯೋಗಕ್ಕೆ ಬರುವಂತೆ ಮಾಡುವುದರಿಂದ ತಾವು ಸಹ ಆರ್ಥಿಕವಾಗಿ ಸಬಲೀಕರಣವಾಗಬೇಕು ಎಂದು ಮಾಹಿತಿ ನೀಡಿದರು.
ಬೆಲೆ ಏರಿಕೆ ಜನರ ಪಾಲಿಗೆ ನುಂಗಲಾರದ ತುತ್ತಾಗುತ್ತಿದ್ದು, ಈ ಹೊಡೆತದಿಂದ ಸಾಮಾನ್ಯ ಜನರು ಪಾರಾಗುವ ಸದುದ್ದೇಶದಿಂದ ಹಾಗೂ ಬಡವರ ಸಬಲೀಕರಣಕ್ಕಾಗಿ ಗ್ಯಾರೆಂಟಿ ಯೋಜನೆಗಳ ಅನುಷ್ಠಾನಗೊಂಡಿದೆ ಎಂದು ಜಾರಿ ಹಿಂದಿನ ಉದ್ದೇಶವನ್ನು ಕೂಲಿ ಕಾರ್ಮಿಕರೊಂದಿಗೆ ಹಂಚಿಕೊಂಡರು.
ಈ ವೇಳೆ ಸಚಿವರು ಸ್ವತಃ ಹಾರೆ ಮತ್ತು ಬಾಣಲಿ ಹಿಡಿದು ಟ್ರಾಕ್ಟರ್ ಗೆ ಮಣ್ಣು ತುಂಬಿಸುವ ಮೂಲಕ ಕೂಲಿಕಾರರನ್ನು ಪ್ರೋತ್ಸಾಹಿಸಿದರು.
ಈ ವೇಳೆ ಶಾಸಕರಾದ ಶ್ರೀ ಹೆಚ್.ಡಿ.ಹರೀಶ್ ಗೌಡರವರು, ಮಾಜಿ ಶಾಸಕರಾದ ಶ್ರೀ ಹೆಚ್.ಪಿ. ಮಂಜುನಾಥ್ ರವರು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರಾದ ಶ್ರೀ ಎಸ್.ಯುಕೇಶ್ ಕುಮಾರ್ ರವರು, ಉಪ ಕಾರ್ಯದರ್ಶಿ(ಅಭಿವೃದ್ಧಿ) ಯವರಾದ ಶ್ರೀ ಭೀಮಪ್ಪ ಕೆ ಲಾಳಿ ರವರು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಯವರಾದ ಶ್ರೀ ಕೆ.ಹೊಂಗಯ್ಯ, ವಿಬಿ ಜಿ ರಾಮ್ ಜಿ ಸಹಾಯಕ ನಿರ್ದೇಶಕರಾದ ಶ್ರೀ. ಎಂ.ಎಸ್. ರಾಜೇಶ್ ಸೇರಿದಂತೆ ವಿವಿಧ ಇಲಾಖೆಯ ಉನ್ನತ ಅಧಿಕಾರಿಯವರು, ವಿಬಿ ಜಿ ರಾಮ್ ಜಿ ಯೋಜನೆಯ ಎಲ್ಲಾ ಸಿಬ್ಬಂದಿಯವರು ಹಾಗೂ ಗ್ರಾಮ ಪಂಚಾಯಿತಿಯವರು ಪಾಲ್ಗೊಂಡಿದ್ದರು.
