ಪಬ್ಲಿಕ್ ಅಲರ್ಟ್ ನ್ಯೂಸ್:-ತೂಕದಲ್ಲಿ ಶ್ರೀಕಂಠನೇ ಮೇಲುಗೈ ನಗರದಲ್ಲಿ ಹೆಜ್ಜೆಯಿಟ್ಟ ಗಜಪಡೆಯ ತೂಕ
ಮೈಸೂರು: ದಸರಾ ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸುವ ಮೊದಲ ತಂಡದ 9 ಆನೆಗಳ ತೂಕ ಪರಿಶೀಲನೆ ಮಾಡಲಾಯಿತು. ಅದರಲ್ಲಿ ಶ್ರೀಕಂಠ ಆನೆ ಬಲ ಭೀಮನಾಗಿದ್ದು, ಆನಂತರದ ಸ್ಥಾನವನ್ನು ಏಕಲವ್ಯ ಪಡೆದು ಗಮನ ಸೆಳೆದಿದ್ದಾನೆ.
ಈ ಬಾರಿ ನಾಡಹಬ್ಬ ದಸರಾವನ್ನು ವಿಭಿನ್ನವಾಗಿ ಆಚರಿಸುವ ಸಿದ್ಧತೆಗಳು ಭರದಿಂದ ಸಾಗಿದೆ. ಮತ್ತೊಂದು ಕಡೆ ದಸರಾ ಜಂಬೂಸವಾರಿಯ ಪ್ರಮುಖ ಆಕರ್ಷಣೆ ಗಜಪಡೆಗಳನ್ನು ಸಿದ್ಧಗೊಳಿಸುತ್ತಿರುವುದು. ಈಗಾಗಲೇ ಗಜಪಯಣದ ಮೂಲಕ ಮೈಸೂರು ಅರಮನೆಯನ್ನು ಪ್ರವೇಶ ಮಾಡಿರುವ ಮೊದಲ ಗಜಪಡೆಯ ತಂಡದ ತೂಕ ಪರೀಕ್ಷೆ ಮಾಡಲಾಗಿದೆ. ಈ ಕುರಿತು ಪ್ರತಿಕ್ರಯಿಸಿದ ಡಿಸಿಎಫ್ ಪ್ರಭುಗೌಡ ಮಾತನಾಡಿ, “ಹೀಗೆ ತಾಲೀಮಿಗೆ ಮುನ್ನ ಮೊದಲ ತಂಡದ ಗಜಪಡೆಯನ್ನು ತೂಕ ಹಾಕಲಾಯಿತು. ತೂಕ ಹೆಚ್ಚಿಸುವುದು ನಮ್ಮ ಉದ್ದೇಶವಲ್ಲ, ಆನೆಗಳ ಆರೋಗ್ಯವನ್ನು ನೋಡಿ ಅವುಗಳಿಗೆ ವಿಶೇಷ ಆಹಾರ ನೀಡಲು ತೂಕ ಪರೀಕ್ಷೆ ಸಹಾಯವಾಗಲಿದ್ದು, ಆನಂತರ ಬೆಳಗ್ಗೆ ಮತ್ತು ಸಂಜೆ ಜಂಬೂಸವಾರಿ ಸಾಗುವ ಮಾರ್ಗದಲ್ಲಿ ತಾಲೀಮನ್ನು ಆರಂಭಿಸುತ್ತೇವೆ” ಎಂದು ಮಾಹಿತಿ ನೀಡಿದರು.
“ಗಜಪಡೆ ತಾಲೀಮು ಹಾಗೂ ಶಿಬಿರಗಳ ಸ್ಥಳದಲ್ಲಿ ಗಜಪಡೆಗಳೊಂದಿಗೆ ರೀಲ್ಸ್ ಮಾಡುವುದು, ಜಾಲತಾಣಗಳಲ್ಲಿ ಸುಳ್ಳು ವಿಡಿಯೋಗಳನ್ನು ಹಾಕುವವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಅರಮನೆ ಆವರಣದಲ್ಲಿ ಗಜಪಡೆ ನೋಡಲು ವಿಧಿಸಿದ್ಧ ಶುಲ್ಕವನ್ನು ವಾಪಸ್ ಪಡೆಯಲಾಯಿತು. ಈ ಬಾರಿ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊರಲು ಹಲವು ಆನೆಗಳು ಸದೃಢವಾಗಿವೆ. ತಾಲೀಮಿನ ನಂತರ ಜಂಬೂಸವಾರಿ ಕ್ಯಾಪ್ಟನ್ ಅನ್ನು ಆಯ್ಕೆ ಮಾಡಲಾಗುವುದು” ಎಂದು ಹೇಳಿದರು.
ಬಾಕ್ಸ್
9 ಗಜಪಡೆಗಳ ತೂಕ ಎಷ್ಟು?:
ಶ್ರೀಕಂಠ -5,770
ಮಹೇಂದ್ರ -5,490
ಧನಂಜಯ -5,480
ಪ್ರಶಾಂತ -5,190
ಏಕಲವ್ಯ -5,610
ಗೋಪಿ -5,170
ಶ್ರೀರಾಮ -4,820
ಕಾವೇರಿ -3,075
ಲಕ್ಷ್ಮೀ -3,920
