ಸ್ವಾಮಿ ವಿವೇಕಾನಂದರ ಜೀವನದಲ್ಲಿ ಮೈಸೂರು ಪ್ರಮುಖ ಪಾತ್ರ ವಹಿಸಿದೆ.

latha prabhukumar
1 Min Read

ಪಬ್ಲಿಕ್ ಅಲರ್ಟ್ ನ್ಯೂಸ್:-ಮೈಸೂರಿನಲ್ಲಿ ಪ್ರಧಾನಮಂತ್ರಿ ಶ‍್ರೀ @narendramodi

ಯಾವುದೇ ದೇಶದಲ್ಲಾದರೂ, ಯುವಜನತೆಗೆ ಸರಿಯಾದ ಅವಕಾಶಗಳು, ಸೂಕ್ತ ಮಾರ್ಗದರ್ಶನ ಹಾಗೂ ದೊಡ್ಡ ಕನಸುಗಳನ್ನು ಕಾಣುವ ಮತ್ತು ಆ ಕನಸುಗಳನ್ನು ತಮ್ಮದೇ ನೆಲದಲ್ಲಿ ನನಸಾಗಿಸಿಕೊಳ್ಳುವ ಆತ್ಮವಿಶ್ವಾಸ ಸಿಕ್ಕಾಗ ಮಾತ್ರ ಅವರ ಸಾಮರ್ಥ್ಯವು ರಾಷ್ಟ್ರೀಯ ಶಕ್ತಿಯಾಗಿ ರೂಪಾಂತರಗೊಳ್ಳುತ್ತದೆ. ಈ ನಿಟ್ಟಿನಲ್ಲಿ ನಮ್ಮ ಶಿಕ್ಷಣ ಸಂಸ್ಥೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಭಾರತದಲ್ಲಿ ಶಿಕ್ಷಣ ಸಂಸ್ಥೆಗಳ ಸಂಖ್ಯೆ ಸತತವಾಗಿ ಏರಿಕೆಯಾಗುತ್ತಿರುವುದು ನನಗೆ ಸಂತಸ ತಂದಿದೆ. ಇಂದು ದೇಶದಲ್ಲಿ ಸುಮಾರು 1,40,000 ಎಂ.ಬಿ.ಬಿ.ಎಸ್ ಸೀಟುಗಳಿವೆ. ವೈದ್ಯಕೀಯ ಕಾಲೇಜುಗಳ ಸಂಖ್ಯೆ 823ಕ್ಕೆ ಏರಿದೆ. ರಾಷ್ಟ್ರೀಯ ಶಿಕ್ಷಣ ನೀತಿಯು 21ನೇ ಶತಮಾನಕ್ಕೆ ಭಾರತದ ಯುವಜನತೆಯನ್ನು ಸಜ್ಜುಗೊಳಿಸುವ ವಾಹಕವಾಗುತ್ತಿದೆ.

ಭಾರತದ ಮೊದಲ ಖಾಸಗಿ ರಾಕೆಟ್‌ ಅನ್ನು ಬಾಹ್ಯಾಕಾಶಕ್ಕೆ ಉಡಾವಣೆ ಮಾಡುವುದರಿಂದ ಹಿಡಿದು ಡಿಜಿಟಲ್ ಅರ್ಥವ್ಯವಸ್ಥೆ, ಸ್ಟಾರ್ಟ್‌ಅಪ್‌ಗಳು, ಮುದ್ರಾ-ಚಾಲಿತ ಉದ್ಯಮಶೀಲತೆ, ಆತ್ಮನಿರ್ಭರ ಭಾರತ ಹಾಗೂ ಮೇಕ್ ಇನ್ ಇಂಡಿಯಾಗೆ ಬಲ ತುಂಬುವವರೆಗೆ—ದೇಶದ ಯುವಜನತೆ ವಿವಿಧ ಕ್ಷೇತ್ರಗಳಲ್ಲಿ ನಾವೀನ್ಯತೆಯನ್ನು ಮುನ್ನಡೆಸುತ್ತಿದ್ದಾರೆ.

ಹಿಂದೆ ಸಂಕೋಲೆಯಲ್ಲಿದ್ದ ಭಾರತದ ಯುವಜನತೆ, ಇಂದು ವಿಶ್ವದ ಅಭಿವೃದ್ಧಿಯನ್ನು ವೇಗಗೊಳಿಸುತ್ತಿದ್ದಾರೆ. ಇಂದು ಭಾರತದ ಯುವಶಕ್ತಿಯಿಂದಾಗಿಯೇ ಭಾರತದ ಅರ್ಥವ್ಯವಸ್ಥೆಯು ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಭಾರತದ ಯುವಶಕ್ತಿಯಿಂದಾಗಿಯೇ ಇಂದು ಭಾರತವು ವಿಶ್ವದಲ್ಲೇ 3ನೇ ಅತಿ ದೊಡ್ಡ ಸ್ಟಾರ್ಟ್‌ಅಪ್ ವ್ಯವಸ್ಥೆ ಹೊಂದಿದೆ.

ಸ್ವಾಮಿ ವಿವೇಕಾನಂದರ ಜೀವನದಲ್ಲಿ ಮೈಸೂರು ಪ್ರಮುಖ ಪಾತ್ರ ವಹಿಸಿದೆ. ಸುಮಾರು 130 ವರ್ಷಗಳ ಹಿಂದೆ, ಸ್ವಾಮೀಜಿಯವರು ಯುವ ಸನ್ಯಾಸಿಯಾಗಿ ಪ್ರವಾಸ ಮಾಡುತ್ತಿದ್ದಾಗ ಮೈಸೂರಿಗೆ ಬಂದಿದ್ದರು. ಆಗ ಅವರನ್ನು ಗುರುತಿಸಿ, ಅವರೊಂದಿಗೆ ಒಡನಾಟ ಇಟ್ಟುಕೊಂಡವರಲ್ಲಿ ಪ್ರಮುಖ ಹೆಸರು ಮೈಸೂರಿನ ಅಂದಿನ ಮಹಾರಾಜರದ್ದು. ಸ್ವಾಮಿ ವಿವೇಕಾನಂದರು ಅಮೆರಿಕದಲ್ಲಿದ್ದಾಗ, ಅಲ್ಲಿಂದ ಅಂದಿನ ಮೈಸೂರು ಮಹಾರಾಜರಿಗೆ ಪತ್ರ ಬರೆದಿದ್ದರು. ಅದರಲ್ಲಿ ಅವರು ಮಹಾರಾಜರ ಬೆಂಬಲವನ್ನು ಸ್ವತಃ ಉಲ್ಲೇಖಿಸಿದ್ದಾರೆ. ಸ್ವಾಮಿ ವಿವೇಕಾನಂದರು ಭಾರತೀಯ ಪ್ರಜ್ಞೆಯನ್ನು ಮೈಗೂಡಿಸಿಕೊಂಡಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು

Share This Article
Leave a Comment